Advertisement

ಸಮಗ್ರ ಅಭಿವೃದ್ಧಿಗೆ ಬದ್ಧ: ಕಸ್ತೂರಿಬಾಯಿ

05:39 PM Nov 10, 2020 | Suhan S |

ಜೇವರ್ಗಿ: ಪಟ್ಟಣದಲ್ಲಿ ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡುವುದರ ಜೊತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪುರಸಭೆ ನೂತನ ಅಧ್ಯಕ್ಷೆ ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ ಹೇಳಿದರು.

Advertisement

ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕಾರ ಮಾಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡ್‌ ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮಹಿಳೆಯರಿಗೆ ಶೌಚಾಲಯ, ಶುದ್ಧ ಕುಡಿಯುವನೀರು, ಸಿಸಿ ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲುಹೆಚ್ಚಿನ ಒತ್ತು ನೀಡಲಾಗುವುದು. ಹಿಂದಿನ ಶಾಸಕರಾದ ದೊಡ್ಡಪ್ಪಗೌಡಪಾಟೀಲ ನರಿಬೋಳ ಅವರು 40 ಕೋಟಿಗೂ ಅಧಿಕ ಅನುದಾನ ತಂದು ಜೇವರ್ಗಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಶೀಘ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪಟ್ಟಣದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗುವುದು. ಸಕಾಲದಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ನಡೆದು ಜನರಿಗೆ ಪುರಸಭೆ ಬಗ್ಗೆ ವಿಶ್ವಾಸಮೂಡುವಂತೆ ಮಾಡಲಾಗುವುದು.ಪಟ್ಟಣದ 23 ವಾರ್ಡ್‌ಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಹಂತ-ಹಂತವಾಗಿಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಪುರಸಭೆ ನೂತನ ಉಪಾಧ್ಯಕ್ಷ ರಾಜು ರದ್ಧೇವಾಡಗಿ, ಸದಸ್ಯರಾದ ಷಣ್ಮುಖಪ್ಪಸಾಹು ಗೋಗಿ, ಸಿದ್ಧರಾಮ ಯಳಸಂಗಿ, ಗುರುಶಾಂತಯ್ಯ ಹಿರೇಮಠ, ಗುಂಡು ಸಾಹು ಗೋಗಿ, ಸಂಗನಗೌಡ ಪಾಟೀಲ ರದ್ದೇವಾಡಗಿ, ಗುರು ಮಾಲಿಪಾಟೀಲ, ಸಂತೋಷ ಮಲ್ಲಾಬಾದ, ಚಂದನ್‌ಮಹೇಂದ್ರಕರ್‌, ಪರಶುರಾಮ ದೊಡ್ಡಮನಿ, ಹಣಮಂತ ಶಹಾಬಾದ,ಸಂಗಮೇಶ ಕೊಂಬಿನ್‌, ಅಮೀರ ಸೇಠ ಚರಮ್‌, ಮಹಿಮೂದ್‌ ಪಟೇಲ, ಜೆಟ್ಟೆಪ್ಪ ಮಂದರವಾಡ, ಖಯೂಮ್‌, ವಿಜಯಕುಮಾರ ನರಿಬೋಳ, ರಾಜು ತಳವಾರ, ದೇವಿಂದ್ರ ಸುಬೇದಾರ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next