Advertisement

ಕೋವಿಡ್ ಯೋಧರಿಗೆ ಗೆಳೆಯರ ಬಳಗದಿಂದ ಸನ್ಮಾನ

04:49 PM Jun 14, 2020 | Naveen |

ಜೇವರ್ಗಿ: ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಲು ಸುಮಾರು ಎರಡು ತಿಂಗಳುಗಳ ಕಾಲ ತಾಲೂಕಿನ 165 ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಜನ ಜಾಗೃತಿ ಮೂಡಿಸುವುದರೊಂದಿಗೆ ಉಚಿತ ಮಾಸ್ಕ್ ವಿತರಿಸಿದ ಕೋವಿಡ್ ಯೋಧರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿದ್ಧು ಅಂಕುಸದೊಡ್ಡಿ ಅವರಿಗೆ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ ಹರವಾಳ ಮಾತನಾಡಿ, ಕೋವಿಡ್ ಯೋಧರಾದ ಮಲ್ಲಿಕಾರ್ಜುನ ಬಿರಾದಾರ, ಸಿದ್ಧು ಅಂಕುಸದೊಡ್ಡಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಂತ ಖರ್ಚಿನಲ್ಲಿ ತಾಲೂಕಿನಾದ್ಯಂತ ಸಂಚರಿಸಿ ಕೋವಿಡ್ ಸೋಂಕು ಕುರಿತು ಸಾರ್ವಜನಿಕರಲ್ಲಿ ಮೂಡಿದ ಗೊಂದಲ ನಿವಾರಣೆ ಮಾಡಿದ್ದಾರೆ. ಇವರಿಬ್ಬರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಪತ್ರಕರ್ತರಾದ ಪ್ರಕಾಶ ಆಲಬಾಳ, ವಿಜಯಕುಮಾರ ಕಲ್ಲಾ, ರವೀಂದ್ರ ವಕೀಲ, ಪ್ರಮುಖರಾದ ಶ್ರೀನಿವಾಸ ವಕೀಲ, ದೇವಿಂದ್ರ ಬನ್ನೆಟ್ಟಿ, ದೌಲತ್‌ರಾಯ ದೇಸಾಯಿ, ಶ್ರೀಶೈಲಗೌಡ ಪೊಲೀಸ್‌ ಪಾಟೀಲ, ಮರೆಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next