Advertisement

ತರಕಾರಿ ವ್ಯಾಪಾರಕ್ಕೆ ಮರಳಿದ ಪುರಸಭೆ ಸದಸ್ಯೆ

03:21 PM May 06, 2020 | Naveen |

ಜೇವರ್ಗಿ: ಪಟ್ಟಣದ 2ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಪುರಸಭೆ ಸದಸ್ಯೆ ಶರಣಮ್ಮ ಸಾಯಬಣ್ಣ ತಳವಾರ ಲಾಕ್‌ಡೌನ್‌ದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತಮ್ಮ ಮೂಲ ವೃತ್ತಿಯಾದ ತರಕಾರಿ ಹಾಗೂ ಹಣ್ಣಿನ ವ್ಯಾಪಾರಕ್ಕೆ ಮರಳಿದ್ದಾರೆ.

Advertisement

ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಪೊಲೀಸ್‌ ಠಾಣೆ ಎದುರು ಪುಟ್‌ಪಾತ್‌ ಮೇಲೆ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಅವರು ಜನಸೇವೆ ಮಾಡುವ ಕನಸಿನಿಂದ ಪುರಸಭೆ ಚುನಾವಣೆಯಲ್ಲಿ ಸ್ಪಧಿ ìಸಿದ್ದರು. 2018ರ ಆಗಸ್ಟ್‌ ತಿಂಗಳಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ 2ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶಾಲಿಯಾಗಿದ್ದರು.

ಕೃಷಿ ಕೂಲಿಕಾರ್ಮಿಕರು, ಬೀದಿ ವ್ಯಾಪಾರಿಗಳು, ಬಡವರು ಅ ಧಿಕ ಸಂಖ್ಯೆಯಲ್ಲಿರುವ 2ನೇ ವಾರ್ಡ್‌ ಹಲವು ಸಮಸ್ಯೆಗಳನ್ನು ಹೊಂದಿದೆ. ಚುನಾವಣೆ ಸಂದರ್ಭದಲ್ಲಿ ವಾರ್ಡ್‌ ಜನತೆಯ ಅನೇಕ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುವುದಾಗಿ ಶರಣಮ್ಮ ತಳವಾರ ಭರವಸೆ ನೀಡಿದ್ದರು. ಪುರಸಭೆ ಸದಸ್ಯರಾಗಿ ಆಯ್ಕೆಯಾದ ನಂತರ ಕೆಲ ದಿನಗಳ ವರೆಗೆ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಕೈಬಿಟ್ಟಿದ್ದ ಶರಣಮ್ಮ, ವಾರ್ಡ್‌ನಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದರು. ಆದರೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಲ್ಲಿನ ವಿಳಂಬ, ಚುನಾಯಿತ ಸದಸ್ಯರ ಸಲಹೆಗಳಿಗೆ ಪುರಸಭೆ ಅಧಿಕಾರಿಗಳು ಮಾನ್ಯತೆ ನೀಡದಿರುವುದು ಅವರಿಗೆ ಬೇಸರ ತರಿಸಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಉಂಟಾಗಿ ಕೆಲ ದಿನಗಳಿಂದ ಮತ್ತೆ ಹಣ್ಣಿನ ಹಾಗೂ ತರಕಾರಿ ವ್ಯಾಪಾರ ಆರಂಭಿಸಿದ್ದಾರೆ. ಪಟ್ಟಣದ ಅಂಚೆ ಕಚೇರಿ ಎದುರು ತಳ್ಳು ಬಂಡಿಯಲ್ಲಿ ಕಲ್ಲಂಗಡಿ, ದ್ರಾಕ್ಷಿ ಹಣ್ಣಿನ ವ್ಯಾಪಾರ ಜೊತೆಗೆ ತರಕಾರಿ ಮಾರುತ್ತಿದ್ದಾರೆ.

ಪುರಸಭೆ ಚುನಾವಣೆಯಲ್ಲಿ ಜನತೆ ನನ್ನ ಮೇಲೆ ಬಹಳ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಬಡತನದ ಹಿನ್ನೆಲೆಯ ನನಗೆ ಬಡವರ ಕಷ್ಟಗಳ ಅರಿವು ಚೆನ್ನಾಗಿದೆ. ಪ್ರತಿ ದಿನ ವಾಡ್‌ ìನ ಜನ ಕುಡಿಯುವ ನೀರು, ಚರಂಡಿ, ಸ್ವತ್ಛತೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸುತ್ತಾರೆ. ಆದರೆ ಪುರಸಭೆ ಅಧಿ ಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಕಳೆದ 20 ತಿಂಗಳಿನಿಂದ ಜನರ ಕೆಲಸಗಳಿಗಾಗಿ ಮೂಲವೃತ್ತಿ ಬಿಟ್ಟು ಪುರಸಭೆ ಕಚೇರಿಗೆ ಅಲೆದು ಸಾಕಾಗಿದೆ. ಜನರಿಗೆ ಉತ್ತರಿಸುವುದು ಕಷ್ಟವಾಗಿದೆ. ಇದರಿಂದ ಹಣ್ಣಿನ ಹಾಗೂ ತರಕಾರಿ ವ್ಯಾಪಾರ ಮತ್ತೆ ಆರಂಭಿಸಿರುವೆ.
ಶರಣಮ್ಮ ತಳವಾರ,
ಪುರಸಭೆ ಸದಸ್ಯೆ

Advertisement

ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next