Advertisement
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ನೇಮಕವಾಗಿರುವ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ವೇಳೆ, ಕೇಂದ್ರದ ಹಾಲಿ ಎನ್‌ಡಿಎ ಮತ್ತು ಹಿಂದಿನ ಯುಪಿಎ ಸರಕಾರಗಳ ವಿರುದ್ಧ ಹರಿಹಾಯ್ದ ಜೇಠ್ಮಲಾನಿ, ದೇಶ ಈಗ ಸಮಸ್ಯೆ ಎದುರಿಸುತ್ತಿದೆ. ಎರಡೂ ಸರಕಾರಗಳು ದೇಶದ ಘನತೆಯನ್ನೇ ತಗ್ಗಿಸಿವೆ ಎಂದು ಆರೋಪಿಸಿದ್ದಾರೆ. ಜತೆಗೆ, ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ನ್ಯಾಯವಾದಿಗಳು ಮತ್ತು ದೇಶದ ಪ್ರಜೆಗಳು ಸಮಸ್ಯೆ ವಿರುದ್ಧ ಹೋರಾಟ ನಡೆಸಲು ಮುಂದಾಗಬೇಕಾಗಿದೆ ಎಂದು ಹೇಳಿದ್ದಾರೆ. ಅಧಿಕಾರದಲ್ಲಿರುವವರನ್ನು ಶೀಘ್ರವೇ ಕೆಳಕ್ಕೆ ಇಳಿಸಬೇಕು ಎಂದು ಪ್ರತಿಪಾದಿಸಿದ್ದಾರೆ. Advertisement
ಕಾನೂನು ಜೀವನಕ್ಕೆ ಜೇಠ್ಮಲಾನಿ ವಿದಾಯ
08:35 AM Sep 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.