Advertisement

ರಾಷ್ಟ್ರಧ್ವಜದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿ ಅಪಮಾನ: ಯುವಕನ ಬಂಧನ

12:50 PM Aug 14, 2022 | Team Udayavani |

ಬಳ್ಳಾರಿ: ರಾಷ್ಟ್ರಧ್ವಜದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿ ಧ್ವಜಕ್ಕೆ ಅಪಮಾನವೆಸಗಿರುವ ಘಟನೆ ನಗರದ ಗಣೇಶ್ ಕಾಲೋನಿಯಲ್ಲಿ ಭಾನುವಾರ ನಡೆದಿದ್ದು, ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ರಘು ಬಂಧಿತ ಯುವಕ‌. ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಗಣೇಶ್ ಕಾಲೋನಿಯ ಯುವಕ ರಘು ಎನ್ನುವವರು ರಾಷ್ಟ್ರಧ್ವಜದ ಮೇಲಿನ ಅಶೋಕ ಚಕ್ರದ ಮೇಲೆ ಜೀಸಸ್ ಎನ್ನುವ ಸ್ಟಿಕ್ಕರ್ ಅಂಟಿಸಿ, ಆ ಬಾವುಟವನ್ನು ತಮ್ಮ ಮನೆಯ ಮೇಲೆ ಆರೋಹಣ ಮಾಡಿ ರಾಷ್ಟ್ರಬಾವುಟಕ್ಕೆ ಅಪಮಾನವೆಸಗಿದ್ದಾರೆ.

ಇದನ್ನೂ ಓದಿ:ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಸ್ಪರ್ಶ: ಪತ್ನಿಯನ್ನು ಉಳಿಸಿಲು ಹೋದ ಪತಿಯೂ ಸಾವು!

ಈ ಬಗ್ಗೆ ಗಮನಿಸಿದ ಹಿಂದೂಪರ ಕಾರ್ಯಕರ್ತರು ಮನೆಯ ಬಳಿ ತೆರಳಿ ಎಚ್ಚರಿಕೆ ನೀಡಿದ್ದಾರೆ. ಆದರೂ, ಯುವಕ ರಘು ಧ್ವಜ ಬದಲಿಸಿಲ್ಲ. ಸ್ಥಳಕ್ಕಾಗಮಿಸಿದ ಗಾಂಧಿನಗರ ಪೊಲೀಸರು, ಬಾವುಟದ ಮೇಲಿನ ಜೀಸಸ್ ಸ್ಟಿಕ್ಕರ್ ತೆಗೆದರು. ಸಂಭವನೀಯ ಗಲಾಟೆಯ ಮೊದಲೇ ಯುವಕ ರಘುನನ್ನು ಬಂಧಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next