Advertisement

ಭದ್ರತೆಯ ನೆಪ: ರಾವಲ್ಪಿಂಡಿಗೆ ಉಗ್ರ ಮಸೂದ್‌ ಸ್ಥಳಾಂತರಿಸಿದ ಪಾಕ್‌

09:53 AM Mar 10, 2020 | Team Udayavani |

ನವದೆಹಲಿ: ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ, ಉಗ್ರ ಮಸೂದ್‌ ಅಝರ್‌ನನ್ನು ರಾವಲ್ಪಿಂಡಿಗೆ ಸ್ಥಳಾಂತರಿಸಲಾಗಿದೆ. ಭದ್ರತೆಯ ಕಾರಣಗಳಿಗಾಗಿ ಪಾಕಿಸ್ತಾನ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ, ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲವೆಂದು ನವದೆಹಲಿಯಲ್ಲಿ ಮೂಲಗಳು ಖಚಿತಪಡಿಸಿವೆ. ಮಾ.3ರಂದೇ ಈ ಸ್ಥಳಾಂತರ ನಡೆದಿದೆ. ಅದಕ್ಕೆ ಪೂರಕವಾಗಿ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿರುವ ಮಸೂದ್‌, ಆತನ ಇಬ್ಬರು ಸಹೋದರರಾಗಿರುವ ಮೌಲಾನಾ ರೌಫ್ ಅಸYರ್‌, ಮೌಲಾನಾ ಅಮ್ಮಾರ್‌ರನ್ನು ರಾವಲ್ಪಿಂಡಿಯ ಕೋರ್ಟ್‌ಗೆ ವಿಚಾರಣೆಗೆ ಮಾ.2ರಂದು ಹಾಜರಾಗುವಂತೆ ಸಮನ್ಸ್‌ ನೀಡಿರುವ ಬೆನ್ನಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಮುಕ್ತಾಯಗೊಂಡ ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವಿನ ಮೇಲೆ ನಿಗಾ ಇರಿಸುವ ಕಾರ್ಯಪಡೆ- ಎಫ್ಎಟಿಎಫ್ ಸಭೆಯ ಸಂದರ್ಭದಲ್ಲಿ ಉಗ್ರ ಮಸೂದ್‌ ನಾಪತ್ತೆಯಾಗಿದ್ದಾನೆಂದು ಪಾಕಿಸ್ತಾನ ನಾಟಕವಾಡಿತ್ತು. ತಾಲಿಬಾನ್‌ ಉಗ್ರ ಸಂಘಟನೆ ಅಮೆರಿಕದ ಜತೆಗೆ ಒಪ್ಪಂದ ಮಾಡಿಕೊಂಡದ್ದರ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು ಪಾಕ್‌ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next