ಹೊಸದಿಲ್ಲಿ : ಜೈಶ್-ಎ-ಮೊಹಮದ್ ಉಗ್ರರು ಬಿಡುಗಡೆಗೊಳಿಸಿರುವ ಎರಡು ಪ್ರತ್ಯೇಕ ಪತ್ರಗಳಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಟಾರ್ಗೆಟ್ ಮಾಡಿರುವುದಾಗಿ ಬರೆಯಲಾಗಿದೆ.
ಉತ್ತರ ಪ್ರದೇಶ ಪೊಲೀಸರು ಈ ಬಗ್ಗೆ ತಿಳಿಸಿದ್ದು, ಶಾಮ್ಲಿ ಮತ್ತು ಉತ್ತರಾಖಂಡದ ರೂರ್ಕಿಯ ರೈಲು ನಿಲ್ದಾಣಗಳಲ್ಲಿ ಎರಡು ಪತ್ರಗಳು ಪತ್ತೆಯಾಗಿವೆ.
ಪಶ್ಚಿಮ ಉತ್ತರ ಪ್ರದೇಶ ಮತ್ತು ಪ್ರಮುಖ ದೇವಾಲಯಗಳು, ರೈಲು ನಿಲ್ದಾಣದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಹಿನ್ನಲೆಯಲ್ಲಿ ಉತ್ತರಪ್ರದೇಶದ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ.
ಈ ಪತ್ರಗಳನ್ನು ಜೆಇಎಮ್ ಪ್ರಾಂತ್ಯ ಕಮಾಂಡರ್ ಬರೆದಿರುವುದಾಗಿ ಡಿಜಿಪಿ ಓ.ಪಿ.ಸಿಂಗ್ ತಿಳಿಸಿದ್ದಾರೆ.
ಎಪ್ರಿಲ್ 19 ರಂದೂ ಇದೇ ರೀತಿಯಲ್ಲಿ ಪತ್ರವೊಂದು ದೊರಕಿದ್ದು ರೈಲ್ವೇ ನಿಲ್ದಾಣಗಳಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು.