Advertisement
ಮೈಕ್‌ನಲ್ಲಿ ಎಚ್ಚರಿಕೆಜೆಲ್ಲಿ ಫಿಶ್ ದಾಳಿ ಮಾಡುತ್ತಿದ್ದಂತೆ ಯಾರೂ ಸಮುದ್ರಕ್ಕೆ ಇಳಿಯದಂತೆ ಮೈಕ್ ಮೂಲಕ ಎಚ್ಚರಿಕೆ ನೀಡಲಾಯಿತು. ಜೆಲ್ಲಿ ಫಿಶ್ ಮೈಗೆ ತಾಗಿಕೊಂಡು ಹೋದರೆ ಆ ಪ್ರದೇಶದಲ್ಲಿ ಉರಿ, ದಪ್ಪಗಾಗುವುದು, ಗೀರಿದಂತೆ ಗಾಯ ಆಗುತ್ತದೆಂದು ಸಿಬಂದಿ ತಿಳಿಸಿದ್ದಾರೆ.
ಕೆಲವೊಮ್ಮೆ ಜೆಲ್ಲಿ ಫಿಶ್ ಮತ್ತು ತೊರಕೆ ಮೀನಿನ ಮರಿಗಳು ಕಿನಾರೆಗೆ ಬಂದಾಗ ಈ ರೀತಿ ದಾಳಿ ನಡೆಸುತ್ತವೆ. ಅವುಗಳು ಒಮ್ಮೆ ಬಂದರೆ 2-3 ದಿನ ಇರುವುದೂ ಇದೆ. ಜೆಲ್ಲಿ ಫಿಶ್ ರವಿವಾರ ಗೋಕರ್ಣ ಬೀಚ್‌ನಲ್ಲಿ ದಾಳಿ ನಡೆಸಿದ್ದು, ಕೆಲವರಿಗೆ ಗಾಯವಾಗಿತ್ತು. ಜೆಲ್ಲಿ ಫಿಶ್‌ನಲ್ಲಿ ಎರಡು ರೀತಿ ಇದ್ದು, ಒಂದು ಬಿಳಿಯದು, ಇನ್ನೊಂದು ನಸು ಕೆಂಪಾಗಿರುತ್ತದೆ. ಕೆಂಪು ಜೆಲ್ಲಿ ಫಿಶ್ ಸ್ಪರ್ಶಿಸಿದರೆ ಉರಿ ಹೆಚ್ಚು. ಮಲ್ಪೆ ಸೈಂಟ್ ಮೆರೀಸ್ ದ್ವೀಪದ ಒಂದು ಬದಿಯಲ್ಲಿ ಈ ರೀತಿಯ ಮೀನು ಸಾಮಾನ್ಯ. ಆ ಪ್ರದೇಶಕ್ಕೆ ಯಾರೂ ಹೋಗದಂತೆ ತಡೆಯಲಾಗುತ್ತಿದೆ. ಬೀಚ್‌ನಲ್ಲಿ ಆ್ಯಂಬುಲೆನ್ಸ್ ಸೇವೆ ಇದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ಸಂದೇಶ್ ಶೆಟ್ಟಿ ತಿಳಿಸಿದ್ದಾರೆ. ಪಣಂಬೂರು ಕಿನಾರೆಯಲ್ಲೂ ಜೆಲ್ಲಿ ಫಿಶ್ ಕಂಡುಬಂದಿದೆ, ಆದರೆ ಯಾರೂ ಗಾಯಗೊಂಡಿಲ್ಲ.