Advertisement

ಭವಿಷ್ಯದಲ್ಲಿ ಬೇರೆ ಗ್ರಹದಿಂದ ಭೂಮಿಗೆ ಪ್ರವಾಸ!

11:29 PM Nov 13, 2021 | Team Udayavani |

ವಾಷಿಂಗ್ಟನ್‌: “‌ಭವಿಷ್ಯದಲ್ಲಿ ಬೇರೆ ಗ್ರಹದ ಜನರು ಭೂಮಿಗೆ ಪ್ರವಾಸ ಬರಲಿದ್ದಾರೆ’ –  ಹೀಗೆಂದು ವಿಶ್ವದ ಶ್ರೀಮಂತರ ಪಟ್ಟಿಯ ಎರಡನೇ ವ್ಯಕ್ತಿ, ಅಮೆಜಾನ್‌ ಮುಖ್ಯಸ್ಥ ಜೆಫ್ ಬೆಜೋಸ್‌ ಹೇಳಿದ್ದಾರೆ.

Advertisement

ಅಮೆರಿಕದ ವಾಷಿಂಗ್ಟನ್‌ನಲ್ಲಿ ತಮ್ಮ ಏರೋಸ್ಪೇಸ್‌ ಸಂಸ್ಥೆಯಾಗಿರುವ ಬ್ಲೂ ಒರಿಜಿನ್‌ನ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವಾಗ ಅವರು ಈ ಮಾತನ್ನು ಹೇಳಿದ್ದಾರೆ. “ಈಗ ನಾವು ಇಲ್ಲಿನ ಉದ್ಯಾನ ವನಗಳನ್ನು ಸುತ್ತಾಡಲು ಹೇಗೆ ಹೋಗುತ್ತೇವೆಯೋ ಮುಂದೊಂದು ದಿನ ಬೇರೆ ಗ್ರಹಗಳ ಜನರು ಅದೇ ರೀತಿ ಭೂಮಿಯನ್ನು ನೋಡಿ ಕೊಂಡು ಹೋಗಲು ಬರಲಿದ್ದಾರೆ. ಶತಮಾನಗಳ ಅನಂತರ ಮನುಷ್ಯರು ಅಲ್ಲಿಯೇ ಹುಟ್ಟಿ  ಬೆಳೆಯುವಂತಾಗುತ್ತದೆ.’ ಎಂದು ಅವರು ತಿಳಿಸಿದ್ದಾರೆ.

ಬೇರೆ ಗ್ರಹಗಳಲ್ಲಿ ನಿರ್ಮಿಸಲಾಗುವ ಮನೆಗಳು ತೇಲಾಡುವ ಮನೆಗಳಾಗಲಿವೆ. ಅದರಲ್ಲಿ ಮನುಷ್ಯರು ನೆಲೆಸಲೆಂದು ಕೃತಕ ಹವಾಮಾನ ಸೃಷ್ಟಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next