Advertisement

ಅಮೆಜಾನ್‌ ಸಿಇಒ ಹುದ್ದೆಗೆ ಜೆಫ್ ವಿದಾಯ ಘೋಷಣೆ

02:29 AM Feb 04, 2021 | Team Udayavani |

ನ್ಯೂಯಾರ್ಕ್: ಪ್ರಸಿದ್ಧ ಇ-ಕಾಮರ್ಸ್‌ ಸಂಸ್ಥೆ “ಅಮೆಜಾನ್‌’ನ ಸಂಸ್ಥಾಪಕ ಜೆಫ್ ಬೆಝೋಸ್‌ ತಮ್ಮ ಸಿಇಒ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. “2021ರ 3ನೇ ತ್ತೈಮಾಸಿಕದಲ್ಲಿ ಸಿಇಒ ಹುದ್ದೆಯಿಂದ ನಿರ್ಗಮಿಸಲಿದ್ದೇನೆ’ ಎಂದು ಸೋಮವಾರ ಘೋಷಿಸಿದ್ದಾರೆ.

Advertisement

ಈ ಮೂಲಕ ಅವರು ಸಂಸ್ಥೆಯ ಜತೆಗಿನ 30 ವರ್ಷದ ನಂಟನ್ನು ಕಳಚಿಕೊಳ್ಳಲಿದ್ದಾರೆ. 1990ರ ವೇಳೆಗೆ ಕೇವಲ ಆನ್‌ಲೈನ್‌ ಬುಕ್‌ ಸೆಲ್ಲರ್‌ ಆಗಿದ್ದ ಅಮೆಜಾನ್‌ ಅನ್ನು, ಜಗತ್ತಿನ ಬಹುದೊಡ್ಡ ಇ-ಕಾಮರ್ಸ್‌ ಸಂಸ್ಥೆಯಾಗಿ ಬೆಳೆಸುವಲ್ಲಿ ಜೆಫ್ ಪಾತ್ರ ದೊಡ್ಡದು. ಕಿಂಡಲ್‌, ಪ್ರೈಮ್‌, ಜಾಹೀರಾತು, ಕ್ಲೌಡ್‌ ಕಂಪ್ಯೂಟಿಂಗ್‌ ಹೀಗೆ ಸಂಸ್ಥೆಯ ಆಲೋಚನೆಗಳನ್ನು ಅತ್ಯಾಧುನಿಕ ದಿಕ್ಕುಗಳಿಗೆ ವಿಸ್ತರಿಸಿದ್ದಲ್ಲದೆ, ಜಗತ್ತಿನ ಹಲವು ದೇಶಗಳಲ್ಲಿ ಅಮೆಜಾನ್‌ನ ಶಾಖೆ ತೆರೆಯುವುದಕ್ಕೂ ಜೆಫ್ ಕಾರಣರಾಗಿದ್ದರು.

ಇದನ್ನೂ ಓದಿ:ಪ್ರೇಯಸಿಯ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ವ್ಯಕ್ತಿ

“ಸಂಸ್ಥೆಯ ಕ್ಲೌಡ್‌ ಕಂಪ್ಯೂಟಿಂಗ್‌ ಬ್ಯುಸಿನೆಸ್‌ ಮುಖ್ಯಸ್ಥ ಆ್ಯಂಡಿ ಜೆಸ್ಸಿ ಸಂಸ್ಥೆಯ ಮುಂದಿನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ಅಮೆಜಾನ್‌ ತಿಳಿಸಿದೆ. 200 ಬಿಲಿಯನ್‌ ಡಾಲರ್‌ ಒಡೆಯ ಜೆಫ್ ಅವರ ವಿದಾಯ ನಿರ್ಧಾರಕ್ಕೆ ಗೂಗಲ್‌ ಸಿಇಒ ಸುಂದರ್‌ ಪಿಚೆò, ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಳ್ಲಾ ಸಹಿತ ಹಲವು ಗಣ್ಯರು ಶುಭಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next