Advertisement
ವಿಜ್ಞಾನವು ಬದುಕನ್ನು ಕ್ಲಿಷ್ಟಗೊಳಿಸುತ್ತದೆ ಎಂಬ ತಪ್ಪು ತಿಳಿವಳಿಕೆ ಅನೇಕರಲ್ಲಿದೆ.
Related Articles
Advertisement
ನೈಜ ವಿಜ್ಞಾನ ಹೇಗೆಂದರೆ, ಅದು ನಮ್ಮ ಆರೋಗ್ಯವನ್ನು ಉತ್ತಮಪಡಿಸಬೇಕು, ಎಷ್ಟರಮಟ್ಟಿಗೆ ಎಂದರೆ, ವೈಜ್ಞಾನಿಕ ಜ್ಞಾನದ ಉತ್ಪನ್ನಗಳೇ ಆಗಿರುವ ಔಷಧಗಳ ಅಗತ್ಯ ನಮಗೆ ಬರಬಾರದು. ಎಲ್ಲ ಚಿಕಿತ್ಸೆಗಳೂ ಲಭ್ಯವಿವೆ, ಆದರೆ ಅವುಗಳ ಅಗತ್ಯ ಬೀಳು ತ್ತಿಲ್ಲ, ಎಲ್ಲರೂ ಅಷ್ಟು ಆರೋಗ್ಯವಂತರಾಗಿ ದ್ದಾರೆ. ಮಾರುಕಟ್ಟೆಯಲ್ಲಿ ಅತ್ಯುತ್ತಮ ಕನ್ನಡಕಗಳು ಲಭ್ಯವಿವೆ, ಆದರೆ ವೈಜ್ಞಾನಿಕ ಜ್ಞಾನವುಳ್ಳ ಜನರು ತಮ್ಮ ದೃಷ್ಟಿಯ ರಕ್ಷಣೆ ಯನ್ನು ಚೆನ್ನಾಗಿಯೇ ಮಾಡಿಕೊಳ್ಳುತ್ತಿದ್ದಾರೆ. ವಾಹನಗಳು, ರೈಲು, ವಿಮಾನ ಯಾನ ಇವೆ; ಆದರೆ ಅವುಗಳ ಉಪಯೋಗ ಅಗತ್ಯವಿದ್ದಾಗ ಮಾತ್ರ. ಏಕೆಂದರೆ ಜನರು ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಕಾಲ್ನಡಿಗೆಯನ್ನೇ ಹೆಚ್ಚು ಆರಿಸಿಕೊಳ್ಳುತ್ತಾರೆ.
ರಾತ್ರಿಯ ಕೃತಕ ಬೆಳಕಿನ ಅಗತ್ಯ ಅತ್ಯಂತ ಕಡಿಮೆ. ಏಕೆಂದರೆ ಜನರು ಬೇಗನೆ ಉಂಡು ನಕ್ಷತ್ರಗಳ ಕೆಳಗೆ ಮಲಗುವುದು, ಬೆಳಗ್ಗೆ ಬೇಗನೆ ಏಳುವುದು ಹೆಚ್ಚು ಆರೋಗ್ಯಯುತ ಅಭ್ಯಾಸ ಎಂದು ಅರಿತುಕೊಂಡಿರುತ್ತಾರೆ. ನೈಜ ವೈಜ್ಞಾನಿಕ ಪ್ರಗತಿ ಎಂದರೆ ಹೀಗಿರಬೇಕು.
ಈಗ ವಿಜ್ಞಾನವು ಅಗಾಧವಾಗಿ ಬೆಳೆದಿದೆ ಯೇನೋ ನಿಜ; ಆದರೆ ವೈಜ್ಞಾನಿಕ ದೃಷ್ಟಿಕೋನ, ನಡವಳಿಕೆ ಇನ್ನೂ ವಿಸ್ತರಿಸಿಲ್ಲ ಎನ್ನುತ್ತಾರೆ ಆಚಾರ್ಯ ವಿನೋಬಾ ಭಾವೆಯವರು. ವಿಜ್ಞಾನವು ಮನುಕುಲದ ಒಳಿತಿಗಾಗಿ ಹೆಕ್ಕಿ ತೆಗೆದ ಸತ್ಯಾಂಶಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿಲ್ಲ, ಜನಜೀವನ ವೈಜ್ಞಾನಿಕ ಮನೋಭಾವವನ್ನು ರಕ್ತಗತ ಮಾಡಿಕೊಂಡಿಲ್ಲ ಎನ್ನುತ್ತಾರೆ ಅವರು.
(ಸಂಗ್ರಹ)