Advertisement

ಸಂಕಲ್ಪದ ಹೆಗಲೇರಿ ಮುನ್ನಡೆಸುವ ಶರಣಾಗತಿ

12:49 AM Feb 13, 2021 | Team Udayavani |

ಸಾಧನೆಗೆ ಒಂದೇ ಮಾರ್ಗ. “ಶರಣಾ ಗತಿ’ ಮತ್ತು “ದೃಢ ಸಂಕಲ್ಪ’ಗಳಿಂದ ಆ ದಾರಿಯನ್ನು ತುಳಿಯಬಹುದು.

Advertisement

ಮೇಲ್ನೋಟಕ್ಕೆ “ಶರಣಾಗತಿ’ ಮತ್ತು “ದೃಢಸಂಕಲ್ಪ’ ತದ್ವಿರುದ್ಧ ಎಂಬಂತೆ ಭಾಸವಾಗುತ್ತವೆ. ಆದರೆ ನಿಜಕ್ಕೂ ಅವು ಒಂದಕ್ಕೊಂದು ಪೂರಕ.

ದೃಢ ಸಂಕಲ್ಪವನ್ನು ಹೊಂದಿರುವಾತ ಮಾತ್ರ ಸಂಪೂರ್ಣವಾಗಿ ಶರಣಾಗಬಲ್ಲ. ಏಕೆಂದರೆ, ಶರಣಾಗತಿಗೆ ಅಸಾಧಾರಣ ವಾದ ಧೈರ್ಯ ಬೇಕು. ದುರ್ಬಲರು ಎಂದಿಗೂ ತಲೆಬಾಗುವ ಆಲೋಚನೆ ಮಾಡಲಾರರು. ಧೈರ್ಯ ಶಾಲಿಗಳು ಮಾತ್ರ ಶರಣಾಗತಿಯನ್ನು ಆರಿಸಿ ಕೊಳ್ಳುತ್ತಾರೆ. ತನ್ನತನ, ತಾನು, ತನ್ನ ಅಹಮಿಕೆ ಯನ್ನು ಕೂಡ ತಲೆ ಬಾಗುವಂತೆ ಮಾಡು ವುದಕ್ಕೆ ಬೇಕಾಗುವ ಧೈರ್ಯ ಕಡಿಮೆಯದಲ್ಲ.

ಶರಣಾಗುವುದಕ್ಕೆ ದೃಢಸಂಕಲ್ಪ ಕೂಡ ಬೇಕಾಗಿದೆ. ದೃಢಸಂಕಲ್ಪ ಇಲ್ಲವಾದರೆ  ನಾವು ಯಾರಿಗೂ ತಲೆಬಾಗೆವು.

ಆದರೆ ಕೇವಲ ದೃಢಸಂಕಲ್ಪ ಹೆಚ್ಚು ಪ್ರಯೋಜನಕ್ಕೆ ಬರಲಾರದು. ದೃಢ ಸಂಕಲ್ಪ ಮಾತ್ರವೇ ಇದ್ದರೆ ಅದು ಅಹಮಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ನಾವು ನಡೆಯುವ ಸಾಧ ನೆಯ ಹಾದಿಯಿಂದ ವಿಮುಖವಾಗ ಬಲ್ಲೆವು. ದೃಢಸಂಕಲ್ಪದ ಕೈಗೆ ಕೀಲಿಕೈ ಕೊಡುವುದು ಅಪಾಯಕಾರಿ. ಶರಣಾ ಗತಿಯ ಸೇವಕನಂತೆ ದೃಢಸಂಕಲ್ಪ ಇದ್ದರೆ ಅದಕ್ಕಿಂತ ಚೆನ್ನಾದುದು ಇನ್ನೊಂದಿಲ್ಲ. ಶರಣಾಗತಿಗೆ ಸಹಾಯಕನಾಗಿ ದೃಢ ಸಂಕಲ್ಪವನ್ನು ನಿಯೋಜಿಸಿದರೆ ಸರಿ ಯಾದ ದಾರಿಯಲ್ಲಿ ಸಾಗಬಹುದು. ಅವು ಎರಡಾಗಿ ತೋರುತ್ತವೆ; ಆದರೆ ಒಂದಕ್ಕೊಂದು ಅತ್ಯದ್ಭುತವಾಗಿ ಸಹಾಯ ಮಾಡುತ್ತವೆ.

Advertisement

ಈ ಕಥೆಯನ್ನು ನೀವು ಕೇಳಿರ ಬಹುದು. ಮೇಲೆ ವಿವರಿಸಿದ ಹಿನ್ನೆಲೆಯ ಸಹಿತ ಇನ್ನೊಮ್ಮೆ ಓದಿಕೊಳ್ಳಿ – ಹೊಸ ಅರ್ಥದಲ್ಲಿ ಕಥೆ ಹೊಳೆಯುತ್ತದೆ.

ಒಂದು ಊರಿನ ಬದಿಯಲ್ಲಿ ಒಂದು ದಟ್ಟಾರಣ್ಯ ಇತ್ತು. ಊರಿನಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ ಇಬ್ಬರು ಭಿಕ್ಷುಕರು ವಾಸ ಮಾಡುತ್ತಿದ್ದದ್ದು ಆ ಕಾಡಿನಲ್ಲಿ. ಒಂದೇ ವೃತ್ತಿಯಲ್ಲಿದ್ದ ಆ ಇಬ್ಬರಲ್ಲಿ ಪರಸ್ಪರ ಸ್ಪರ್ಧೆ, ಈಷ್ಯೆì, ಕೋಪತಾಪಗಳು ಸಾಮಾನ್ಯವಾಗಿದ್ದವು. ಇಬ್ಬರೂ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ.

ವಿಚಿತ್ರ ಎಂದರೆ, ಆ ಭಿಕ್ಷುಕರಲ್ಲಿ ಒಬ್ಬ ಹೆಳವ. ಇನ್ನೊಬ್ಬ ಅಂಧ.

ಹೀಗಿರಲಾಗಿ ಒಂದು ಬೇಸಗೆಯ ದಿನ ಆ ಭಿಕ್ಷುಕರು ವಾಸವಾಗಿದ್ದ ಕಾಡಿಗೆ ಬೆಂಕಿ ಬಿತ್ತು. ನೋಡ ನೋಡುತ್ತಿರು ವಂತೆಯೇ ಕಾಳಿYಚ್ಚು ನಾಲೆªಸೆಗೆ ಹಬ್ಬಿತು. ಸ್ವಲ್ಪ ಸಮಯ ಹೋದರೆ ಭಿಕ್ಷುಕರನ್ನೂ ಬೆಂಕಿ ಸ್ವಾಹಾ ಮಾಡು ವುದು ಖಚಿತ.

ಹೆಳವನಿಗೆ ಓಡಿ ಪಾರಾಗುವುದು ಸಾಧ್ಯವಿಲ್ಲ. ಅಂಧ ಓಡಬಲ್ಲ; ಆದರೆ ಕಣ್ಣು ಕಾಣಿಸುವುದಿಲ್ಲವಲ್ಲ! ಹೀಗಾಗಿ ಇಬ್ಬರೂ ಸುಟ್ಟುಹೋಗುವ ಸ್ಥಿತಿ.

ಬೆಂಕಿ ಹತ್ತಿರಕ್ಕೆ ಬಂತು ಎನ್ನುವ ಹೊತ್ತಿಗೆ ಅವರಿಬ್ಬರೂ ರಾಜಿಯಾದರು. “ನಮ್ಮ ನಡುವಿನ ಅಭಿಪ್ರಾಯ ಭೇದ ಗಳನ್ನು ಮರೆತು ಜತೆಗೂಡುವ ಸಮಯ ಇದು’ ಎಂದ ಕುರುಡ. “ನಿಜ’ ಎಂದ ಹೆಳವ. “ಬಾ ನನ್ನ ಹೆಗಲ ಮೇಲೆ ಕುಳಿ ತುಕೋ. ನೀನು ದಾರಿ ಹೇಳು, ನಾನು ಓಡುತ್ತೇನೆ. ಇಬ್ಬರೂ ಸೇರಿ ಪಾರಾ ಗೋಣ’ ಎಂದ ಅಂಧ.

ಹೀಗೆ ಅವರಿಬ್ಬರೂ ಓಡಿಹೋಗಿ ಜೀವ ಉಳಿಸಿಕೊಂಡರು. ಸಂಕಲ್ಪ ಮತ್ತು ಶರಣಾಗತಿಯ ಸ್ಥಿತಿಯೂ ಇದೇ. ಸಂಕಲ್ಪವು ಕುರುಡು, ಆದರೆ ವೇಗವಾಗಿ ಕ್ರಮಿಸಬಲ್ಲುದು. ಶರಣಾಗತಿಗೆ ದರ್ಶಿಸುವ ಶಕ್ತಿಯಿದೆ, ಆದರೆ ನಿರ್ವೇಗಿ. ಸಂಕಲ್ಪ ಮತ್ತು ಶರಣಾಗತಿಗಳ ನಡುವೆ ಸ್ನೇಹವನ್ನು ಬೆಸೆಯುವುದು ನಮಗೆ ಸಾಧ್ಯವಾದರೆ; ನಮ್ಮ ಸಂಕಲ್ಪ ಶಕ್ತಿಯ ಹೆಗಲ ಮೇಲೆ ಶರಣಾಗತಿಯು ಕುಳಿತು ಮುನ್ನಡೆಸು ವುದು ಸಾಧ್ಯವಾದರೆ ನಮ್ಮ ಬದುಕಿನ ಅತ್ಯಂತ ಶ್ರೇಷ್ಠವಾದ ಸಾಧನೆಗಳಲ್ಲಿ ಒಂದು ಆದಂತೆ. ಆಗ ಸಾಧನೆಯ ಹಾದಿಯನ್ನು ಕ್ರಮಿಸುವುದು ಸುಲಭ ವಾಗುತ್ತದೆ, ಗುರಿ ಹತ್ತಿರವಾಗುತ್ತದೆ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next