Advertisement
ಅನ್ ಲಿಮಿಟೆಡ್ ಹೆಸರಿನ ಜೀಪ್ ನ ಬೆಲೆ 53.90 ಲಕ್ಷ ರೂ.ಗಳಿದ್ದರೆ, ರುಬಿಕಾರ್ನ್ ಹೆಸರಿನ ಜೀಪ್‌ಗೆ 57.90 ಲಕ್ಷ ರೂ. ದರವಿದೆ. ಅಂದ ಹಾಗೆ, ಈ ಜೀಪಿನ ಪ್ರಿ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ವ್ರಾಂಗ್ಲರ್ ಜೀಪ್ ನಲ್ಲಿ 2.0 ಲೀ. ಪೆಟ್ರೋಲ್ ಎಂಜಿನ್ ಸಾಮರ್ಥ್ಯವಿದ್ದು, 268 ಎಚ್‌ಪಿ, 400ಎನ್‌ಎಂ ಪವರ್ ಇದೆ. ಇದರಲ್ಲಿ 8 ಸ್ಪೀಡ್ ಗೇರ್ ಬಾಕ್ಸ್ ಇದೆ. ಇದು 5 ಬಣ್ಣಗಳಲ್ಲಿ ಲಭ್ಯವಿದ್ದು, 60 ಸೇಫ್ಟಿ ಫೀಚರ್ ಗಳನ್ನು ಒಳಗೊಂಡಿದೆ. ಅಂದ ಹಾಗೆ, ಇದರಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, 45.72 ಸಿಎಂ ಅಲೇ ವ್ಹೀಲ್ಸ್ ಆಂಬಿಯಂಟ್ ಎಲ್ ಇಡಿ ಒಳಾಂಗಣ ಲೈಟಿಂಗ್, ಆಪಲ್ ಕಾರ್ ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ, ಸ್ಟೀರಿಂಗ್‌ಮೌಂಟೆಡ್ ಆಡಿಯೋ ಕಂಟ್ರೋಲ್ ಮತ್ತು ಇಂಟಿ ಗ್ರೇಟೆಡ್‌ವಾಯಿಸ್ ಕಮಾಂಡ್, ರಿಯರ್ ವ್ಯೂ ಆಟೋ ಡಿಮ್ಮಿಂಗ್ ಮಿರರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ , ಅಡ್ವಾನ್ಸ್ಡ್ ಫ್ರಂಟ್ ಆಂಡ್ ಸೈಡ್ ಏರ್ ಬ್ಯಾಗ್ಸ್ ಫೀಚರ್‌ಗಳುಂಟು.
Related Articles
Advertisement
ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆ ರಿನಾಲ್ಟ್, ತನ್ನ ಎಲ್ಲಾ ಮಾದರಿಯ ಕಾರುಗಳಿಗಾಗಿ ಡೈಮೆಂಡ್ ರೂಪದ ಹೊಸ ಲೋಗೋ ಅನಾವರಣಮಾಡಿದೆ. 1925ಕ್ಕೂ ಮುನ್ನ ಇದೇ ರೀತಿಯಲೋಗೋ ಬಳಕೆ ಮಾಡಲಾಗುತ್ತಿದ್ದು, ಈಗ ಮತ್ತೆ ಅದೇ ರೂಪದಲ್ಲಿ ಹೊಸ ಲೋಗೋಅನಾವರಣಮಾಡಿದೆ. ಸದ್ಯಕಾರುಗಳಲ್ಲಿಬಳಕೆಯಲ್ಲಿರುವ ಲೋಗೋವನ್ನು 1992ರಲ್ಲಿ ಬಿಡುಗಡೆಗೊಳಿಸಲಾಗಿತ್ತು. 2024ರಲ್ಲಿ ಈ ಹೊಸ ಲೋಗೋ ಎಲ್ಲಾ ಕಾರುಗಳಲ್ಲಿ ಕಾಣಿಸಿಕೊಳ್ಳಲಿದೆ. ಸದ್ಯ 5 ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರುಗಳಲ್ಲಿ ಇದನ್ನು ಹಾಕಲಾಗಿದೆ. ಅಂದ ಹಾಗೆ, ಇದು ರಿನಾಲ್ಟ್ ಕಂಪನಿಯ ಲೋಗೋದ 9ನೇ ರೂಪಾಂತರ.
-ಸೋಮಶೇಖರ ಸಿ.ಜೆ.