ನವದೆಹಲಿ: ಐಐಟಿ ಕೋರ್ಸ್‌ಗಳಿಗೆ ಸೇರ್ಪಡೆಯಾಗಲು ಬಯಸುವ ವಿದ್ಯಾರ್ಥಿಗಳಿಗೆ ಒಂದು ಸಿಹಿಸುದ್ದಿಯಿದೆ. ಕಳೆದವರ್ಷ ಜೆಇಇ ಅಡ್ವಾನ್ಸಡ್ ಐಐಟಿ ಕೋರ್ಸ್‌ಗಳಿಗೆ ಸೇರಿಕೊಳ್ಳಲು ಯಾವುದಾದರೂ ಕಾರಣಗಳಿಗಾಗಿ ಸಾಧ್ಯವಾಗದೇ ಇದ್ದರೆ, ಅವರು ಈ ಬಾರಿ ಪಾಲ್ಗೊಳ್ಳಬಹುದು. ಕೊರೊನಾ ಕಾರಣಕ್ಕೆ ಇದೊಂದು ವರ್ಷ ವಿನಾಯ್ತಿ ನೀಡಲಾಗಿದೆ.
ಅಂದರೆ ಕಳೆದವರ್ಷ ಪರೀಕ್ಷೆಗೆ ಹಾಜರಾಗಲಾಗದಿದ್ದರೆ, ಅನುತ್ತೀರ್ಣರಾಗಿದ್ದರೆ ಈ ಬಾರಿ ಅಡ್ವಾನ್ಸಡ್ ಹಂತಕ್ಕೆ ಸೇರಿಕೊಳ್ಳಬಹುದು.
ತಜ್ಞರ ಪ್ರಕಾರ, ಹೆಚ್ಚುವರಿಯಾಗಿ ಈ ವರ್ಷ ಪರೀಕ್ಷೆಗೆ ಕೂರುವವರು ಕೇವಲ 10,000 ಮಂದಿ ಮಾತ್ರ. ಹಾಗಾಗಿ ಹೇಳಿಕೊಳ್ಳುವಷ್ಟು ಸ್ಪರ್ಧೆ ಎದುರಾಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಹಿಂದೆ ಅಡ್ವಾನ್ಸಡ್ ಹಂತವನ್ನು ತಪ್ಪಿಸಿಕೊಂಡಿದ್ದರೆ, ನಿರೀಕ್ಷಿತ ಸಾಧನೆ ಮಾಡದಿದ್ದರೆ ಅವರು ಮುಂದಿನವರ್ಷ ಮತ್ತೆ ಜೆಇಇ ಮುಖ್ಯಸುತ್ತಿನ ಪರೀಕ್ಷೆಗೆ ಹಾಜರಾಗಬೇಕಿತ್ತು.
ಇದನ್ನೂ ಓದಿ : ಉಪಚುನಾವಣೆಯ ಬಗ್ಗೆ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇನೆ : ತಿರಥ್ ಸಿಂಗ್ ರಾವತ್