Advertisement
ಜೆಡಿಎಸ್ ಅಭ್ಯರ್ಥಿ ನಿಖತ್ ಸಲ್ಮಾ 406 ಮತಗಳ ಅಂತರಗಳಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ನಗರದ ತಹಸೀಲ್ ಕಚೇರಿಯಲ್ಲಿ ಬುಧವಾರ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಖತ್ ಸಲ್ಮಾ ಅವರು 1224 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸೈಯ್ಯದ್ ಶಂಶುದ್ದೀನ್ 818 ಮತ ಪಡೆದು ಪರಾಭವಗೊಂಡಿದ್ದಾರೆ.
Related Articles
ನಗರಸಭೆಯಲ್ಲಿ ಈಗಾಗಲೇ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ಮತ್ತೂಂದೆಡೆ 8ನೇ ವಾರ್ಡ್‌ನಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯ ಇದೆ. ಅದರ ಜತೆಗೆ ಸದಸ್ಯನ ಅಕಾಲಿಕ ಮರಣದಿಂದ ಅನುಕಂಪದ ಅಲೆಯೂ ಜೋರಾಗಿತ್ತು. ಈ ಎಲ್ಲ ಲೆಕ್ಕಾಚಾರಗಳನ್ನು ಹಾಕಿಕೊಂಡು ಬಿಜೆಪಿ ನಾಯಕರು ವಾಡ್ ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜಾಣ ನಡೆ ಪ್ರದರ್ಶಿಸಿತು. ಆದರೆ, ನಗರದಲ್ಲಿ ಪ್ರಾಬ್ಲಿಯ ಹೊಂದಿದ್ದು, ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳಿದ್ದರೂ ಸರಿಯಾಗಿ ಪ್ರಚಾರ ಕೈಗೊಳ್ಳದೆ ಸೋಲೊಪ್ಪಿಕೊಂಡಿದೆ. ಜೆಡಿಎಸ್‌ನಿಂದ ತೆರವಾದ ಸ್ಥಾನ ಜೆಡಿಎಸ್ ತೆಕ್ಕೆಗೆ ಬಂದಿರುವುದರಿಂದ ನಗರಸಭೆ ಆಡಳಿತದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿಲ್ಲ.
Advertisement
ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು ನಮ್ಮ ಕುಟುಂಬದ ಮೇಲಿಟ್ಟಿರುವ ಅಭಿಮಾನಕ್ಕೆ ಮಾತೇ ಬರುತ್ತಿಲ್ಲ. ಎಲ್ಲರಿಗೂ ನಾನು ಕೃತ್ಯಜ್ಞಳಾಗಿದ್ದೇವೆ. ಈ ಗೆಲುವು ಕೇವಲ ನನ್ನ ಗೆಲುವು ಆಗಿಲ್ಲ. 8ನೇ ವಾರ್ಡ್ ಮತದಾರರು ಹಾಗೂ ಜೆಡಿಎಸ್ ಪಕ್ಷದ ಪ್ರತಿ ಕಾರ್ಯಕರ್ತರ ಗೆಲುವಾಗಿದೆ.ನಿಖತ್ ಸಲ್ಮಾ, ನೂತನ ನಗರಸಭೆ ಸದಸ್ಯೆ