Advertisement

ಜೆಡಿಎಸ್‌ ಬೆಂಬಲ ಕೋರಿಕೆ, ಸಿದ್ದರಾಮಯ್ಯ ಅಸಮಾಧಾನ?

08:07 PM Sep 08, 2021 | Team Udayavani |

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‌ ಜತೆ ಮೈತ್ರಿಗೆ ಮುಂದಾಗಿರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‌ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈಗಲೂ ಕಾಂಗ್ರೆಸ್‌ಗೆ ಬೆಂಬಲ ಕೊಡುವುದು ಅನುಮಾನ. ನಾವಾಗಿಯೇ ಹೋಗಿ ಮನವಿ ಮಾಡಿ ಇಲ್ಲ ಎಂದು ಅನಿಸಿಕೊಳ್ಳುವುದು ಸರಿಯಲ್ಲ ಎಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ದರ್ಶನಕ್ಕೆ ಮುಂಗಡ ಆನ್ ಲೈನ್ ಬುಕ್ಕಿಂಗ್ : ಜಿಲ್ಲಾಡಳಿತ ನೂತನ ಕ್ರಮ

ಆದರೆ, ಕಾಂಗ್ರೆಸ್‌ ಬೆಂಬಲ ಕೋರಲಿಲ್ಲ ಎಂಬ ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ದೇವೇಗೌಡರ ಜತೆ ಪ್ರಸ್ತಾಪಿಸಿದ್ದಾರೆ. ಒಂದೊಮ್ಮೆ ಬೆಂಬಲ ನೀಡದಿದ್ದರೆ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ ನಿಲುವು ಗೊತ್ತಾಗಲಿದೆ ಎಂಬುದು ಕಾಂಗ್ರೆಸ್‌ ನಾಯಕರ ವಾದ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next