ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಜೆಡಿಎಸ್ ನಿಂದ ಗೇಟ್ ಪಾಸ್ ಕೊಡುವ ನೇರ ಸಂದೇಶವನ್ನು ದಳಪತಿಗಳು ಕೊನೆಗೂ ರವಾನಿಸಿದ್ದಾರೆ. ಅರಸೀಕೆರೆಯಲ್ಲಿ ಭಾನುವಾರ ನಡೆದ ಜೆಡಿಎಸ್ ಸಭೆ ದಳಪತಿಗಳ ನಿರೀಕ್ಷೆಗಿಂತಲೂ ಯಶಸ್ವಿಯಾಗಿದ್ದು, ಸಮಾವೇಶದ ಮೂಲಕ ಶಿವಲಿಂಗೇಗೌಡರ ವಿರುದ್ಧ ದಳಪತಿಗಳು ಸಮರ ಸಾರಿದ್ದಾರೆ.
ಶಿವಲಿಂಗೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಸಮಾವೇಶ ನಡೆಯುವ ಮುನ್ನಾದಿನವಾದ ಶನಿವಾರವೂ ಶಿವಲಿಂಗೇಗೌಡರನ್ನು ಮನವೊಲಿಸುವ ಪ್ರಯತ್ನ ದಳಪತಿಗಳು ಮಾಡಿದ್ದನ್ನೂ ಬಹಿರಂಗಪಡಸಿದ್ದಾರೆ. ಕಾಂಗ್ರೆ ಸ್ ಸೇರಲು ಮಾನಸಿಕವಾಗಿ ಸನ್ನದ್ಧವಾಗಿದ್ದ ಶಿವಲಿಂಗೇಗೌಡರು ಇನ್ನು ಜೆಡಿಎಸ್‌ನಲ್ಲಿ ಉಳಿಯುವುದಿಲ್ಲ ಎಂಬುದು ಖಾತರಿಯಾದ ನಂತರ ಸಮಾವೇಶದಲ್ಲಿ ದಳಪತಿಗಳು ವಾಗ್ಧಾಳಿ ನಡೆಸಿದ್ದಾರೆ.
ಹಿಂದೆ ಕೆಎಂಶಿ ಗೆಲುವಿಗೆ ಕಾರಣ: ಅರಸೀಕೆರೆ ಕ್ಷೇತ್ರದಲ್ಲಿನ ಜಾತಿವಾರು ಮತಗಳ ಲೆಕ್ಕಾಚಾರ ಮಾಡಿ ಶಿವಲಿಂಗೇ ಗೌಡರು ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿದ್ದರು. ಇದೂವರೆಗಿನ ಮೂರು ಚುನಾ ವಣೆಯಲ್ಲಿಯೂ ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರು ವ ಲಿಂಗಾಯತರ ಬೆಂಬಲಕ್ಕಿಂತ ಕುರುಬರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗ ದವರು, ಒಕ್ಕಲಿಗರ ಬೆಂಬಲದಿಂದ ಗೆಲುವು ಸಾಧಿಸುತ್ತಾ ಬಂದಿದ್ದರು.
ಜಾತಿವಾರು ಲೆಕ್ಕಾಚಾರ ಉಲ್ಟಾ; ಕೆಎಂಶಿಗೆ ತಳಮಳ? ಈಗ ಶಿವಲಿಂಗೇಗೌಡರ ವಿರುದ್ಧ ಕುರುಬ ಸಮಾಜದ ಅಭ್ಯರ್ಥಿಯನ್ನೇ ಜೆಡಿಎಸ್ ಸ್ಪರ್ಧೆಗಿಳಿ ಸುವ ನಿರ್ಧಾರ ಮಾಡಬಹುದು. ಇನ್ನು ಸಹಜವಾಗಿಯೇ ಒಕ್ಕಲಿಗರ ಮತಗಳು ಶಿವಲಿಂಗೇಗೌಡರಿಗೆ ದೂರವಾಗಬಹುದು. ಇಬ್ರಾಹಿಂ ಪ್ರಭಾವದಿಂದ ಅಲ್ಪಸಂಖ್ಯಾತ ಸಮು ದಾಯದವರೂ ಶಿವಲಿಂಗೇಗೌಡರ ಬೆಂಬಲಕ್ಕೆ ಸಾರಾಸಗಟಾಗಿ ನಿಲ್ಲದಿರಬಹು ದು. ಹಾಗಾಗಿ ಜೆಡಿಎಸ್‌ನಲ್ಲಿ ಸುಲಭವಾಗಿ ಗೆಲ್ಲಬಹುದಾದ ಅವಕಾಶ ಕಳೆದುಕೊಂಡು ಶಿವಲಿಂಗೇಗೌಡರು ಈಗ ಕ್ಲಿಷ್ಟ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ ಎಂಬುದು ಜೆಡಿಎಸ್ ಮುಖಂಡರವಾದ.
ಅರಸೀಕೆರೆಯಲ್ಲಿ ಅಶೋಕ್ ಜೆಡಿಎಸ್ ಅಭ್ಯರ್ಥಿ ?: ಅರಸೀಕೆರೆ ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ಅಶೋಕ್ ಅವರು ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಶೋಕ್ ಅವರು ಮೊದಲಿಂದಲೂ ಶಿವಲಿಂಗೇಗೌಡರ ರಾಜಕೀಯ ವಿರೋಧಿ. ಕುರುಬ ಸಮುದಾಯದ ಅಶೋಕ್ ಅವರು ಬಾಣಾವರ ಜಿಪಂ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಆದರೆ ಅವಧಿ ಪೂರ್ಣಗೊಳಿಸುವ ಮೊದಲೇ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಜಿಪಂ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದು ಸೋತಿದ್ದರು. ಆದರೆ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಆಂತರ ಕಾಯ್ದುಕೊಳ್ಳತೊಡಗಿದ ನಂತರ ಅಶೋಕ್ ಜೆಡಿಎಸ್ ಪ್ರವೇಶಿಸಿದರು. ಇದೀಗ ಜೆಡಿಎಸ್‌ನ ಸಂಭಾವ್ಯ ಅಭ್ಯರ್ಥಿಯಾಗಿಯೂ ಹೊರ ಹೊಮ್ಮಿದ್ದಾರೆ. ಭಾನುವಾರ ನಡೆದ ಜೆಡಿಎಸ್ ಸಮಾವೇಶ ದಲ್ಲಿ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಅಶೋಕ್ ಜೆಡಿಎಸ್ ಅಭ್ಯರ್ಥಿ ಎಂಬ ಮುನ್ಸೂಚನೆ ಯನ್ನೂ ನೀಡಿದ್ದಾರೆ.
ಕೋಡಿಮಠದ ಶ್ರೀಗಳ ಭವಿಷ್ಯ: ಜೆಡಿಎಸ್ ಸಭೆಯಲ್ಲಿ ಪ್ರಸ್ತಾಪ:
ಹಾಸನ: ಅರಸೀಕೆರೆ ತಾಲೂಕು ಹಾರನಹಳ್ಳಿ ಸುಕ್ಷೇತ್ರದ ಸ್ವಾಮೀಜಿ ಯವರು ನುಡಿಯುವ ಭವಿಷ್ಯದ ಬಗ್ಗೆ ಜನರಿಗೆ ನಂಬಿಕೆಯಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಯ ಬಗ್ಗೆಯೂ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಅರಸೀಕೆರೆ ಕ್ಷೇತ್ರದಲ್ಲಿ ಮುಂಬುರುವ ಚುನಾವಣೆಯಲ್ಲಿ ಕುರುಬ ಸಮಾಜದವರು ಗೆಲುವು ಸಾಧಿಸಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎಂದು, ಭಾನುವಾರ ಅರಸೀಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಎಚ್. ಡಿ.ಕುಮಾರಸ್ವಾಮಿ ಅವರು ಭಾಷಣ ಮಾಡುವಾಗ ಕಾರ್ಯಕರ್ತರು ಕೋಡಿಮಠದ ಶ್ರೀಗಳ ಭವಿಷ್ಯದ ಬಗ್ಗೆ ಗಮನ ಸೆಳೆದಾಗ ಪಕ್ಕದಲ್ಲಿದ್ದ ಅಶೋಕ್ ಅವರತ್ತ ತಿರುಗಿ , ಅಶೋಕ್‌ಗೆ ಲಾಟರಿ ಹೊಡೆಯುತ್ತೆ ಹಾಗಾದರೆ ಎಂದು ಹೇಳುವ ಮೂಲಕ ಸ್ವಾಮೀಜಿಯವರ ಭವಿಷ್ಯದ ಬಗ್ಗೆ ಪ್ರಸ್ತಾಪಸಿದರು.