Advertisement

ಮಹದೇವಪ್ಪಗೆ ಕ್ಷೇತ್ರ ಮಾರಿಕೊಂಡ ಜೆಡಿಎಸ್‌

01:00 PM Jan 09, 2018 | Team Udayavani |

ತಿ.ನರಸೀಪುರ: ಜಾತ್ಯತೀತ ಜನತಾದಳ ವರಿಷ್ಠರು ಕ್ಷೇತ್ರವನ್ನು ಜಿಲ್ಲಾ ಮಂತ್ರಿ ಲೋಕೋಪಯೋಗಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅವರಿಗೆ ಮಾರಿಕೊಂಡಿರುವುದರಿಂದ ತಿ.ನರಸೀಪುರದಲ್ಲಿ ಕಾಂಗ್ರೆಸ್‌ ಸೋಲಿಸುವ ಶಕ್ತಿ ಬಿಜೆಪಿಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ರಮೇಶ್‌ ಹೇಳಿದರು.

Advertisement

ತಾಲೂಕಿನ ಸೋಸಲೆ ಗ್ರಾಮದ ಬಳಿಯಿರುವ ಶ್ರೀ ತೋಪಿನ ಮಠದ ಮಂಗಳ ಮಂಟಪದಲ್ಲಿ ನಡೆದ ಬಿಜೆಪಿ ಸಶಕ್ತಿಕರಣ ಸಮಾವೇಶ ಹಾಗೂ ಹಲವು ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರವನ್ನು ಶಾಸಕನಾಗಿ ಪ್ರತಿನಿಧಿಸುವ ಸಚಿವ ಮಹದೇವಪ್ಪ ಅವರ ಮೇಲೆ ದೇವೇಗೌಡ ಕುಟುಂಬದ ಒಲವು ಇರುವುದರಿಂದ, ಜೆಡಿಎಸ್‌ಗೆ ಪ್ರಾಬಲ್ಯವಿದ್ದರೂ ಆ ಪಕ್ಷದಿಂದ ದುರ್ಬಲ ಅಭ್ಯರ್ಥಿಯನ್ನು ಸಚಿವರ ವಿರುದ್ಧ ನಿಲ್ಲಿಸಲಿದ್ದಾರೆ ಎಂದು ಆರೋಪಿಸದರು.

150 ವಿಷನ್‌ ಗುರಿಗೆ ಸಾಥ್‌: ಬನ್ನೂರು ಭಾಗದ ಬಹುತೇಕ ಒಕ್ಕಲಿಗ ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಬಾರಿ ಅಪ್ಪನಾಗಲಿ ಅಥವಾ ಮಗನಾಗಲಿ ನಿಂತರೆ ಇಬ್ಬರನ್ನೂ ಸೋಲಿಸುವ ಮೂಲಕ ಕ್ಷೇತ್ರ ಕಮಲದ ವಶಕ್ಕೆ ಪಡೆದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ರಾಜಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ 150 ವಿಷನ್‌ ಗುರಿಗೆ ಸಾಥ್‌ ನೀಡುತ್ತೇವೆ. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಗೆಲ್ಲಲು ಬೂತ್‌ಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಸಿ.ರಮೇಶ್‌ ಮನವಿ ಮಾಡಿದರು.

ಕಾಂಗ್ರೆಸ್‌ ಮುಕ್ತಕ್ಕೆ ಸಾಥ್‌: ಮಾಜಿ ಶಾಸಕ ಡಾ.ಎನ್‌.ಎಲ್‌.ಭಾರತೀಶಂಕರ್‌ ಮಾತನಾಡಿ, ರಾಜ್ಯದಲ್ಲಿನ ಆಡಳಿತರೂಢ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೂಗೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣಕ್ಕೆ ನೆರವಾಗೋಣ ಎಂದರು.

ಹಲವು ಮುಖಂಡರ ಸೇರ್ಪಡೆ: ಸೋಸಲೆ ಶಕ್ತಿ ಕೇಂದ್ರದ ಸಶಕ್ತಿಕರಣ ಸಮಾವೇಶದಲ್ಲಿ ಮುಡುಕುನಪುರ ಗ್ರಾಮದ ಮುಖಂಡರಾದ ಜಿ.ಸತ್ಯಮೂರ್ತಿ, ದಿನೇಶ, ಮಹೇಶ, ಮಹದೇವಪ್ಪ, ನಾಗೇಶ, ಮಹದೇವಸ್ವಾಮಿ, ಮಲ್ಲಪ್ಪ, ನಿಜಗುಣ, ಶಿವಣ್ಣ, ಚಿಕ್ಕಬೂವಳ್ಳಿ ಗ್ರಾಮದ ಮುಖಂಡರಾದ ವೀರಭದ್ರಸ್ವಾಮಿ, ಎಂ.ಮಂಜು, ಜಯಶೇಖರಮೂರ್ತಿ, ಮಹೇಶ್‌, ನವೀನ, ಸೋಸಲೆ ಗ್ರಾಮದ ಮುಖಂಡರಾದ ಮೇಷ್ಟ್ರು ರಾಮಣ್ಣ, ಯಜಮಾನ್‌ ಸಿದ್ದನಾಯಕ, ನಾಗಯ್ಯ ಕುಳ್ಳಮ್ಮನ ಸಿದ್ದನಾಯ ಹಾಗೂ ಇನ್ನಿತರ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.

Advertisement

ಮಾಜಿ ಶಾಸಕ ಹಾಗೂ ಕ್ಷೇತ್ರ ಉಸ್ತುವಾರಿ ಎಸ್‌.ಜಿ.ಮೇದಪ್ಪ ಗಣಪತಿಗೌಡ, ಮೈಮುಲ್‌ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್‌.ಎಂ.ಪರಶಿವಮೂರ್ತಿ, ಮಾಜಿ ಜಿ.ಪಂ ಸದಸ್ಯರಾದ ಪುಟ್ಟಬಸವಯ್ಯ, ಎಂ.ಸುಧಾ ಮಹದೇವಯ್ಯ, ಕೆ.ಸಿ.ಲೋಕೇಶ್‌, ಶಶಿಕಲಾ ನಾಗರಾಜು, ಕಲ್ಮಳ್ಳಿ ವಿಜಯಕುಮಾರ್‌, ತಾ.ಪಂ ಸದಸ್ಯೆ ಶಿವಮ್ಮ ಮಹದೇವ,

ಪ.ಪಂ ಮಾಜಿ ಅಧ್ಯಕ್ಷ ವಿರೇಶ್‌, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಡವಾಡಿ ಮಹೇಶ್‌, ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್‌, ಬಿ.ಪಿ.ಪರಶಿವಮೂರ್ತಿ, ನಾಗರಾಜು(ತಾತ), ಬಿ.ಎಸ್‌.ಪ್ರಭುಸ್ವಾಮಿ, ಎಂ.ದಾಸಯ್ಯ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next