Advertisement

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

04:31 PM Jun 03, 2018 | |

ಧಾರವಾಡ: ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲಗಳ ಬೆಲೆ ಏರಿಕೆ ವಿರುದ್ಧ ಹು-ಧಾ ಮಹಾನಗರ ಜಿಲ್ಲಾ ಜೆಡಿಎಸ್‌ ಸೇವಾದಳ ಘಟಕ ಹಾಗೂ ಶಹರ ಎಸ್‌.ಸಿ. ಘಟಕದಿಂದ ಡಿಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕೇಂದ್ರ ಸರಕಾರವು ಸುಮಾರು ನಾಲ್ಕು ವರ್ಷಗಳಿಂದ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ದವಸ ಧಾನ್ಯಗಳ ಬೆಲೆ ಏರಿಸುತ್ತಲೇ ಇದೆ. ಇದರಿಂದ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ತೈಲ ಬೆಲೆ ಶೀಘ್ರವಾಗಿ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಬಳಿಕ ಡಿಸಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮೋಹನ್‌ ಅರ್ಕಸಾಲಿ, ಶಿವರಾಜ ಮಾಕಡವಾಳೆ, ರಾಜು ಸಜ್ಜನಶೆಟ್ಟಿ, ಡಾ| ಶೊರಪಾಲಿ, ಹಸನ್‌ ಮೆಣಸಗಿ, ಭೀಮ್ಮಪ್ಪ ಕಸಾಯಿ, ವೆಂಕಟೇಶ, ಖಾಜಿ, ಅರ್ಜುನ, ಅಜಯ, ಬಸವರಾಜ ಮಾಳಗೌಡರ, ಹುಲಿಗೆಪ್ಪ, ಕುಮಾರ, ಮಾರುತಿ, ಗಣೇಶ, ದುರಗೇಶ, ಮೆಹಬೂಬ ಶೇಖ, ಗೋಪಿ, ಹರಿಪ್ರಸಾದ ದೇಸಾಯಿ, ಸುನೀಲ, ದೇವು, ಆಸೀಪ್‌ ಗರಗ, ಹುಸೇನ ದೊಡ್ಡಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next