Advertisement
ಈ ವೇಳೆ ಮಾತನಾಡಿದ ಮಾಜಿ ಸಿಎಂ, ಭದ್ರಾವತಿಯ ಕಾರ್ಮಿಕರು ಎಲ್ಲರೂ ಆತಂಕದಲ್ಲಿದ್ದಾರೆ. ಕುಷ್ಟಗಿಯ ಪಂಚರತ್ನ ಯಾತ್ರೆ ವೇಳೆ ಈ ಭಾಗದ ಕಾರ್ಮಿಕರು ನನ್ನ ಭೇಟಿ ಮಾಡಿದ್ದರು.ಅವರಿಗೆ ಭದ್ರಾವತಿಗೆ ಬರುತ್ತೇನೆ ಎಂದು ಮಾತು ಕೊಟ್ಟಂತೆ ಬಂದಿದ್ದೇನೆ. ಕಾರ್ಖಾನೆ ಉಳಿಸಲು ಕನ್ನಡಿಗರು ಇದ್ದಾರೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತೇನೆ.ಸೇಲ್ ಸಂಸ್ಥೆಗೆ ವಿಐಎಸ್ಎಲ್ ಸೇರಿಸಿಕೊಳ್ಳಲು ವಿರೋಧ ಮಾಡಿದ್ದರು. ಕಾರ್ಖಾನೆಗೆ ಬಂಡವಾಳ ತೊಡಗಿಸುವಂತೆ ಸೇಲ್ ಗೆ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಬಂಡವಾಳ ತೊಡಗಿಸಿಲ್ಲ ಎಂದರು.
ರಾಜ್ಯದಲ್ಲಿ ನಾನು, ಇಬ್ರಾಹಿಂ ಇಬ್ಬರೂ ಓಡಾಟ ಮಾಡುತ್ತಿದ್ದೇವೆ. ಜೂನ್ ನಂತರ ಏನು ಮಾಡಬೇಕು ಎಂದು ನನಗೆ ಗೊತ್ತಿದೆ. ಈ ಜಿಲ್ಲೆಯಿಂದ ಬದುಕಿದ್ದೀರಿ ಎಂಬ ಭಾವನೆ ಇದ್ದರೆ, ಕಾರ್ಮಿಕರ ಉಳಿಸಿ. ನೀವು ಕೇಂದ್ರ ಸರ್ಕಾರದವರೂ ಒಂದು ರೂಪಾಯಿ ಕೊಡುವುದು ಬೇಡ. ನನ್ನ ರಾಜ್ಯದ ಜನರ ತೆರಿಗೆ ದುಡ್ಡಿನಲ್ಲಿ ನಾನು ಕಾರ್ಖಾನೆ ಉಳಿಸುತ್ತೇನೆ ಎಂದರು.
Related Articles
Advertisement
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿ, 27ಕ್ಕೆ ಬರ್ತಾರಲ್ಲಾ ಒಂದು 15 ಸಾವಿರ ಜನರು ಹೋಗಿ ನಿಂತುಕೊಳ್ಳಿ.. ನಾನು ಬರ್ತೇನೆ.ಇಲ್ಲಿನ ಸಂಸದರಿಗೆ ಮಾತಾನಾಡುವ ಧೈರ್ಯ ಇಲ್ಲ. ಚುನಾವಣೆಗಾಗಿ ಬಂದು ಇಲ್ಲಿ ಭಾಯಿಯೋ, ಬೆಹನೋ ಅನ್ನೋದಲ್ಲ.ಜನರ ಕಷ್ಟಗಳನ್ನು ಕೇಳಿ ಎಂದರು.
ವಸ್ತುಗಳನ್ನು ಮಾರಾಟ ಮಾಡಿದ್ದಾರೆ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭಾರತೀಯ ಉಕ್ಕು ಪ್ರಾಧಿಕಾರ ವಿರುದ್ಧ ವಾಗ್ದಾಳಿ ನಡೆಸಿ, ಅಧಿಕಾರಿಗಳು ವಿಐಎಸ್ಎಲ್ ಎಲ್ಲ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಹೆಚ್ ಡಿಕೆ ಸಿಎಂ ಆದರೆ ವಿಐಎಸ್ಎಲ್ ಮುಚ್ಚಲು ಬಿಡುವುದಿಲ್ಲ. ಸೇಲ್ ನಿಂದ ಭದ್ರಾವತಿಯ ಕಾರ್ಖಾನೆ ಶ್ಮಶಾನ ಮಾಡಿದ್ದಾರೆ. ಮತ್ತೆ ಭದ್ರಾವತಿ ಕೈಲಾಸ ಮಾಡುತ್ತೇವೆ. 1995 ರ ಫಲಿತಾಂಶ, 2023 ರಲ್ಲಿ ಮತ್ತೆ ರಿಪಿಟ್ ಆಗಲಿದೆಎಂದರು.
ಇದು ರಾಜ್ಯ ಮಟ್ಟದ ಹೋರಾಟ ಆಗಿ ಪರಿವರ್ತನೆ ಆಗಲಿದೆ.ಸಿಎಂ ಬೊಮ್ಮಾಯಿ ಕೂಡ ಮಧ್ಯಪ್ರವೇಶ ಮಾಡಬೇಕು. ಬಿಎಸ್ ವೈ ಅವರ ಒಂದು ಫ್ಯೂಸ್ ಮೋದಿ, ಮತ್ತೊಂದು ಫ್ಯೂಸ್ ಅಮಿತ್ ಶಾ ಬಳಿ ಇದೆ. ಬಿಎಸ್ ವೈ ಹಲ್ಲು ಕಿತ್ತ ಹಾವು ಆಗಿದ್ದಾರೆ. ಸಚಿವರಾಗಿದ್ದ ಆರ್ ವಿ ದೇಶಪಾಂಡೆ ಅಂದು ಎಂಪಿಎಂ ಗೆ 50 ಕೋಟಿ ಅನುದಾನ ಇಲ್ಲ ಎಂದಿದ್ದರು. ಆರಗ ಜ್ಞಾನೇಂದ್ರ ಅಂದು ಎಂಪಿಎಂ ಕಾರ್ಖಾನೆ ಲೂಟಿ ಮಾಡಿ ಹೋಗಿದ್ದಾರೆ ಎಂದರು.
ಕೋತ್ವಾಲ್ ರಾಮಚಂದ್ರ ಶಿಷ್ಯ ರಾಜಕೀಯದಲ್ಲಿ ಇದ್ದಾನೆ. ಸಿಡಿಯಲ್ಲಿ ಏನೀದೆ ಗೃಹ ಸಚಿವರು ತೋರಿಸಬೇಕು.12 ಮಂತ್ರಿಗಳ ಕುರಿತು ಏನು ಇದೆ ಅನ್ನುವುದನ್ನು ತೋರಿಸಬೇಕು ಎಂದರು.