Advertisement

ಕೇಂದ್ರ-ರಾಜ್ಯ ಸರ್ಕಾರದಿಂದ ರೈತರ ಕತ್ತು ಹಿಸುಕುವ ಕೆಲಸ: ಯಶೋಧರ

01:07 PM Aug 20, 2020 | sudhir |

ಚಿತ್ರದುರ್ಗ: ಸುಗ್ರಿವಾಜ್ಞೆ ಮೂಲಕ ರೈತರು ಮತ್ತು ಕಾರ್ಮಿಕರಿಗೆ ರಾಜ್ಯ ಬಿಜೆಪಿ ಸರ್ಕಾರ ಮರಣ ಶಾಸನ ಬರೆದಿದೆ ಎಂದು ಆರೋಪಿಸಿ ಜೆಡಿಎಸ್‌ ಜಿಲ್ಲಾ ಘಟಕದಿಂದ ಬುಧವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ, ರೈತರು ಮತ್ತು ಕಾರ್ಮಿಕರ ಪರವಾಗಿರಬೇಕಾಗಿದ್ದ ರಾಜ್ಯ ಮತ್ತು ಕೇಂದ್ರ
ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳು, ಕಾರ್ಪೊರೇಟರ್‌ಗಳಿಗೆ ಬೆಂಗಾವಲಾಗಿ ನಿಂತಿವೆ. ಅನ್ನದಾತರ ಬೆನ್ನುಮೂಳೆ ಮುರಿಯುವ ಕೆಲಸಕ್ಕೆ ಕೈಹಾಕಿವೆ. ಕೂಡಲೆ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ
ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು.

Advertisement

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಶ್ರೀನಿವಾಸ ಗದ್ದುಗೆ ಮಾತನಾಡಿ, ಹೆಗಲಿಗೆ ಹಸಿರು ಶಾಲು ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರೈತ ಹಾಗೂ  ಕಾರ್ಮಿಕ ವಿರೋಧಿ  ನೀತಿ ಜಾರಿಗೆ ತರಲು
ಹೊರಟಿರುವುದು ಯಾರ ಮನವೊಲಿಸುವುದಕ್ಕಾಗಿ ಎಂದು ಪ್ರಶ್ನಿಸಿದರು.

ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೂಡಲೆ ಹಿಂದಕ್ಕೆ ಪಡೆದು ರೈತರು ಸ್ವಾವಲಂಬಿಯಾಗಿ ಬದುಕಲು ಅಗತ್ಯವಿರುವ ಕಾನೂನುಗಳನ್ನು ಜಾರಿಗೆ ತರಲಿ. ಚಿತ್ರದುರ್ಗಕ್ಕೆ ಮಂಜೂರಾಗಿರುವ ಮೆಡಿಕಲ್‌ ಕಾಲೇಜನ್ನು ಶೀಘ್ರ
ಆರಂಭಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್‌ ತಾಲೂಕು ಘಟಕಗಳ ಅಧ್ಯಕ್ಷರಾದ ಸಣ್ಣತಿಮ್ಮಣ್ಣ, ಪಟೇಲ್‌ ತಿಪ್ಪೇಸ್ವಾಮಿ, ಜಿ.ಬಿ. ಶೇಖರ್‌, ಶಿವಪ್ರಸಾದ್‌ ಗೌಡ, ಗಣೇಶ್‌ ಕುಮಾರ್‌, ಜಿಲ್ಲಾ ವಕ್ತಾರ ಡಿ. ಗೋಪಾಲಸ್ವಾಮಿ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್‌ ಜೋಗಿ, ವೀರಣ್ಣ, ಶಂಕರಮೂರ್ತಿ, ಮಂಜುನಾಥ್‌, ಡಾ| ಪ್ರಸನ್ನ, ಕಿರಣ್‌, ಹನುಮಂತರಾಯ,
ರಂಗನಾಥ್‌, ಜಯಕುಮಾರ್‌, ಗುರುಸಿದ್ದಪ್ಪ, ಕರಿಯಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next