Advertisement

ಕಲಬುರಗಿ-ಹುಬ್ಬಳ್ಳಿಯಲ್ಲಿ ಜೆಡಿಎಸ್‌ ಅಧಿಕಾರ

04:54 PM Aug 31, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ಪಸ್ತುತ ನಡೆಯುತ್ತಿರುವ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗಳ ಪೈಕಿ ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಹಾನಗರ ಪಾಲಿಕೆ ಚುನಾವಣಾ ಪ್ರಚಾರಕ್ಕಾಗಿ ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಪಕ್ಷ ಅಭ್ಯರ್ಥಿಗಳ ಪರ ಮತಯಾಚನೆ ಮತ್ತು
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಹೆಚ್ಚು ಹೇಳಲು ಹೋಗುವುದಿಲ್ಲ. ಆದರೆ,
ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಒಲವು ಕಂಡು ಬರುತ್ತಿದೆ. ಕಲಬುರಗಿ ಪಾಲಿಕೆಯಲ್ಲಿ 25 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದರ ಸಂಖ್ಯೆ ಇನ್ನೂ ಹೆಚ್ಚು ಆಗುವ ಸಾಧ್ಯತೆ ಇದೆ ಎಂದರು.

ಕಲಬುರಗಿ ನಗರ ಈ ಹಿಂದೆಗಿಂತ ವೇಗವಾಗಿ ಬೆಳೆಯುತ್ತಿದೆ. ಆದರೆ, ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನೇ ಸರಿಯಾಗಿ ಒದಗಿಸುವ ವ್ಯವಸ್ಥೆ ಆಗಿಲ್ಲ. ಕಲಬುರಗಿ ಜನತೆ ಜೆಡಿಎಸ್‌ ಪರವಾದ ಒಲವು ವ್ಯಕ್ತಪಡಿಸುವುದು ಕಾಣುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಸರಿ ಸಮನಾದ ಅವಕಾಶವನ್ನು ಜೆಡಿಎಸ್‌ಗೂ ಕೊಡಲು ನಿರ್ಧರಿಸಿದ್ದಾರೆ ಎಂದರು.

ಕಳೆದ ಬಾರಿ 14 ತಿಂಗಳ ಸ್ವತಂತ್ರ  ಮುಖ್ಯಮಂತ್ರಿಯಾಗಿರಲಿಲ್ಲ. ಆದರೂ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಕರೆ ತುಂಬಿಸುವ ಯೋಜನೆಗೆ ನನ್ನ ಅವಯಲ್ಲೇ ಅನುಮೋದನೆ ಕೊಟ್ಟಿದ್ದೆ. ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ 180 ಕೋಟಿ ರೂ. ಮಂಜೂರಾತಿ ಕೊಟ್ಟಿದ್ದೆ. ಆದರೆ, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ, ಬಿಜೆಪಿ ಏನುಕೊಡುಗೆಕೊಟ್ಟಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರು ಸರಿ ಇಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಅದನ್ನು ಮಾಧ್ಯಮಗಳು ತಿರುಚಿ, ಅಪಪ್ರಚಾರ ಮಾಡಿವೆ.
ನಾನು ಬಂದು ಹೋದ ನಂತರ ಕಾರ್ಯಕರ್ತರು ನಿಷ್ಕ್ರಿಯರಾಗುತ್ತಾರೆ ಎಂದು ಮುಖಂಡರು ಹೇಳಿದ್ದರು. ಅದನ್ನೇ ನಾನು ಹೇಳಿದ್ದೇನೆ. ನಮ್ಮ ಪಕ್ಷ ಉಳಿದಿರುವುದೇ ಲಕ್ಷಾಂತರ ಕಾರ್ಯಕರ್ತರಿಂದ ಉಳಿದಿದೆ. ಕಾರ್ಯಕರ್ತರಿಗೆ ನಾನು ಅವಹೇಳನ ಅಥವಾ ಅವಮಾನ ಮಾಡುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಇದನ್ನೂ ಓದಿ:ಗೋವಾದಲ್ಲಿ ಮೊದಲ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣ ಪತ್ತೆ..!

ನಾನು ಬಿಜೆಪಿ ಪರವಾಗಿ ಇಲ್ಲ. ಕಾಂಗ್ರೆಸ್‌ ಪರವಾಗಿಯೂ ಇಲ್ಲ. ಕಾಂಗ್ರೆಸ್‌ ಅಧ್ಯಕ್ಷರು ಯಡಿಯೂರಪ್ಪ ಪರವಾಗಿ ಸಾಫ್ಟ್‌ ಕಾರ್ನರ್‌
ಮಾತುಗಳನ್ನು ಹೇಳಿದ್ದಾರೆ. ಆದರೆ, ನಮಗೆ ಸಾಫ್ಟ್‌ ಕಾರ್ನರ್‌ ಅವಶ್ಯಕತೆ ಇಲ್ಲ. ಕೋವಿಡ್‌ ಕಾರಣ ಹೋರಾಟ ಮಾಡಲು ಆಗಿಲ್ಲ. ಕಳೆದ ಎರಡು ವರ್ಷದಿಂದ ಪ್ರವಾಹ ಆಗುತ್ತಿದೆ. ಆದರೆ, ರಾಜ್ಯ ಸರ್ಕಾರ ಘೋಷಣೆ ಮಾಡಿದ ಪರಿಹಾರವನ್ನೇ ಸಂತ್ರಸ್ತರಿಗೆ ಕೊಟ್ಟಿಲ್ಲ. ರೈತರಿಗೆ ಬೆಳೆ ಪರಿಹಾರ ಕೂಡ ನೀಡಿಲ್ಲ. ಮನೆ ಬಿದ್ದಿದ್ದರೆ 5 ಲಕ್ಷ ರೂ. ಕೊಡುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ, ಇದುವರೆಗೆ ಒಂದೇ ಒಂದು ಪೈಸೆಯನ್ನು ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ರೈತರು ಬೆಳೆಯುವ ಬೆಳೆಯನ್ನು ರಫ್ತು ಮಾಡಲು ಉತ್ತೇಜನ ನೀಡಲು ಸಂಸ್ಥೆ ಪ್ರಾರಂಭ ಮಾಡಬೇಕೆಂದುಕೇಂದ್ರಸಚಿವೆಶೋಭಾಕರಂದ್ಲಾಜೆ
ಹೇಳಿದ್ದಾರೆ. ಆದರೆ, ರಾಜ್ಯದಿಂದ ಸಾವಿರಾರು ಕೋಟಿ ರೂಪಾಯಿ ಕೃಷಿ ಉತ್ಪನ್ನ ರಪ್ತಾಗುತ್ತದೆ. ಅದರ ಪರಿಜ್ಞಾನವೇ ಕೇಂದ್ರ ಸಚಿವರು ಮತ್ತು ಅಧಿಕಾರಿಗಳಿಗೆ ಇಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿ ಪರ ಕಾರ್ಯಕ್ರಮ ಕಾಣಲು ಸಾಧ್ಯವಿಲ್ಲ. ಕೋವಿಡ್‌ ಕಾರಣ ಹೋರಾಟ ನಡೆಸಲು ಹೋಗಿಲ್ಲ. ಅವಶ್ಯಕತೆ ಬಂದಾಗ ಹೋರಾಟಕ್ಕೆ ಧುಮಕುತ್ತಿವೆ ಎಂದರು.

ಶಾಸಕ ಬಂಡೆಪ್ಪ ಕಾಶೆಂಪೂರ,ಜೆಡಿಎಸ್‌ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮುಖಂಡರಾದ ನಾಸಿರ್‌ ಹುಸೇನ್‌, ಸಂಜೀವನ ಯಾಕಾಪುರ, ಬಾಲರಾಜ ಗುತ್ತೇದಾರ, ಶಿವಕುಮಾರ ನಾಟೀಕಾರ, ಮನೋಹರ ಪೋದ್ದಾರ, ಶಾಮರಾವ ಸುರಾನ, ಬಸವರಾಜ ದಿಗ್ಗಾಂವಿ, ಸುರೇಶ ಮಾಹಗಾವಕರ್‌, ಅಲಿಂ ಇನಾಮದಾರ, ಹಣಮಂತ ಇಟಗಿ, ಸಿದ್ಧು ಬೆಲಸೂರೆ, ಶಿವಕುಮಾರ ಜಾಲವಾದ, ಬಾಲಾಜಿ ಚಿತ್ತೆಕರ್‌, ರಾಣು ಮುದ್ದನಕರ್‌ ಸಿದ್ದು ದೇವರಮನಿ, ದಿನೇಶ್‌ ಸುತಾರ್‌, ಕಿರಣ ಮೋರೆ, ಚಂದ್ರಕಾಂತ ಸಿಂಧೆ, ಹರ್ಷವರ್ಧನ ಇದ್ದರು.

ಚುನಾವಣೆಗೆ ಯೋಜನೆಗಳ ನೀಲನಕ್ಷೆ
ಕಲಬುರಗಿ: ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಈಗಲೇ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ಸೃಷ್ಟಿ ಮತ್ತು ರೈತ ಪರವಾದ ಐದು ಪ್ರಮುಖ ಯೋಜನೆಗಳ ನೀಲನಕ್ಷೆಯನ್ನು ರೂಪಿಸಲಾಗುತ್ತಿದೆ ಎಂದು ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಪಾಲಿಕೆ ಚುನಾವಣಾ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಜನತೆ ಒಲವು ಜೆಡಿಎಸ್‌ ಪರವಾಗಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ವ್ಯತ್ಯಾಸ ಆಗುತ್ತವೆ.ಕೆಲವರು ಜೆಡಿಎಸ್‌ ಇನ್ಮುಂದೆ ಬೆಳೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ನ ಸಂಪೂರ್ಣ ಚಿತ್ರಣವೇ ಬದಲಾಗಿರುತ್ತದೆ ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ಸಿಗುವಂತೆ ಆಗಿರುವುದಕ್ಕೆ ನಾನು ಕಾರಣವಲ್ಲ. ಮೊದಲ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವಾಗ ರಾಜ್ಯ ನಾಯಕರೊಂದಿಗೆ ಮಾತ್ರ ಮಾತುಕತೆ ಆಗಿತ್ತು. ಆದರೆ, 2006ರಲ್ಲಿ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಪ್ರವೇಶ ಮಾಡಿದರು. ಈ ಸಮಯದಲ್ಲಿ ಬಿಜೆಪಿಯ ಕೆಲವರು ಯಡಿಯೂರಪ್ಪ ಅವರಿಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಲು ಯತ್ನಿಸಿದರು. ಈ ಬೆಳವಣಿಗೆಗಳಲ್ಲಿ ನಾನು ಬಲಿಯಾಗಬೇಕಾಯಿತು. 2008ರಿಂದ 2013ರವರೆಗೆ ದಾಖಲೆಗಳ ಸಮೇತ ನಾನು ಹೋರಾಟ ಮಾಡಿದೆ. ಆದರೆ,ನನ್ನ ಹೋರಾಟದ ಫಲ ಕಾಂಗ್ರೆಸ್‌ ಪಡೆಯಿತು. ಈಗ ಕಾಂಗ್ರೆಸ್‌ ಯಾವುದೇ ದಾಖಲೆಗಳೇ ಇಲ್ಲದೇ ಬರೀ ಮಾತನಾಡುತ್ತಿದೆ.
ನನಗೆ ಯಾರ ಬಗ್ಗೆಯೂ ಮೃದು ಧೋರಣೆ ಇಲ್ಲ ಎಂದರು.

ಬಿಜೆಪಿ ದ್ವಂದ್ವ ನೀತಿ: ರಾಜ್ಯದ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಣೆ ಮಾಡುವ ವಿಚಾರದಲ್ಲಿ ಬಿಜೆಪಿ ತೀರಾ ನಿರ್ಲಕ್ಷ್ಯ ತೋರುತ್ತಿದೆ. ಮೇಲಾಗಿ ಮಹಾದಾಯಿ, ಮೇಕೆದಾಟು ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗಳ ಬಗ್ಗೆ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಕಾವೇರಿ ಮತ್ತು ಕೃಷ್ಣ ನದಿ ನೀರು ಹಂಚಿಕೆ ಎರಡೂ ವಿಚಾರಗಳ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ. ಆದರೆ, ಕಾವೇರಿ ನೀರು ಸಂಬಂಧ ತಮಿಳುನಾಡು ಪರವಾಗಿ ಗೆಜೆಟ್‌ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಅದೇ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸಲು ನ್ಯಾಯಾಲಯದ ನೆಪವನ್ನು ಕೇಂದ್ರ ಸರ್ಕಾರ ಹೇಳುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಬಿಜೆಪಿ ಇಂತಹ ದ್ವಂದ್ವ ನೀತಿಯನ್ನು ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಷ್ಟಕ್ಕೂ ಈಗಿರುವ ಕೃಷ್ಣ ನೀರು ಹಂಚಿಕೆ ವಿವಾದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಬಂಧವೇ ಇಲ್ಲ. ಈ ಹಿಂದೆ ಅವಿಭಜಿತ ಆಂಧ್ರಕ್ಕೆ ನೀರು ಹಂಚಿಕೆಯಾಗಿದೆ. ಆಂಧ್ರ
ವಿಭಜನೆಯಾದ ತೆಲಂಗಾಣಈಗ ತನಗೆ ಪ್ರತ್ಯೇಕ ನೀರುಹಂಚಿಕೆ ಮಾಡಬೇಕೆಂದು ತಗಾದೆ ತೆಗೆದಿದೆ. ಹೀಗಾಗಿ ಅದೇನಿದ್ದರೂ ಆಂಧ್ರ ಮತ್ತು ತೆಲಂಗಾಣ ಸಂಬಂಧಿಸಿದ ವಿಷಯವಾಗಿದೆ. ಆದರೆ, ಬಿಜೆಪಿ ಸರ್ಕಾರದ ಧೋರಣೆಯಿಂದ ರಾಜ್ಯ ಭೀಕರ ಪ್ರವಾಹ ಎದುರಿಸಬೇಕಾಗಿ ಬರುತ್ತಿದೆ. ನೀರು ಸಂಗ್ರಹಿಸಲೂಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ:ಚಿನ್ನದ ಹುಡುಗನ ಗುರುವಿನ ಗುರು ನಮನ  

ಬಿಟ್ಟು ಹೋಗಿ ಎನ್ನುವಷ್ಟು ದುರಹಂಕಾರವಿಲ್ಲ
ಜೆಡಿಎಸ್‌ ತೆರೆದ ಬಾಗಿಲಿದ್ದಂತೆ.ಹೋಗುವವರು ಹೋಗಲಿ,ಬರುವವರುಬರಲಿ.ಆದರೆ,ಪಕ್ಷಬಿಟ್ಟು ಹೋಗಿ ಎಂದುಹೇಳುವಷ್ಟು ದುರಹಂಕಾರ ಮಾತ್ರ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್‌ ಸೇರುವ ‌ಬಗ್ಗೆಜಿ.ಡಿ. ದೇವೇಗೌಡಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
ಈ ಬಗ್ಗೆ ನಾನು ಹೆಚ್ಚುಮಾತನಾಡುವುದಿಲ್ಲ. ನಾವು ಮುಖಂಡರನ್ನುಕರೆತರಲು ಬೇರೆ ಪಕ್ಷದ ಮುಖಂಡರ ಮನೆ ಮುಂದೆ ನಿಂತಿಲ್ಲ. ಕಾಂಗ್ರೆಸ್‌, ಬಿಜೆಪಿಯವರೇ ಈ ಕೆಲಸ ಮಾಡುತ್ತಿದ್ದಾರೆಎಂದುಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿ ಇದೆ. ನಮ್ಮದು ಡಬ್ಬಲ್‌ ಇಂಜಿನ್‌ ಸರ್ಕಾರ ಎಂದು ಅಮಿತ್‌ ಶಾ ಹೇಳಿದ್ದರು.ಆದರೆ, ಈಗ ರಾಜ್ಯದಲ್ಲಿ ಮೇನ್‌ ಇಂಜಿನ್‌(ಬಿ.ಎಸ್‌.ಯಡಿಯೂರಪ್ಪ) ತೆಗೆದಿದ್ದಾರೆ. ಸ್ಪೇರ್‌ ಇಂಜಿನ್‌(ಬಸವರಾಜಬೊಮ್ಮಾಯಿ)ಎಷ್ಟು ದಿನ ಇರುತ್ತೋ
ಗೊತ್ತಿಲ್ಲ.ಇದಕ್ಕೆಅಸ್ಥಿರತೆ ಕಾಡಿದರೆ, ಜೆಡಿಎಸ್‌ ಬೆಂಬಲ ಕೊಡುವ ಪ್ರಶ್ನೆಇಲ್ಲ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next