ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಥಳೀಯಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರವಿರುದ್ಧ ತಿರುಗಿ ಬಿದ್ದಿರುವ ಜೆಡಿಎಸ್‌ನ ಕೆಲವುಮುಖಂಡರು, ಕಾರ್ಯಕರ್ತರು ಪಕ್ಷತೊರೆಯುವುದಾಗಿ ಮಂಗಳವಾರ ಘೋಷಿಸಿದರು.
ಟಿ.ದೇವೇಗೌಡರ ರಾಜಕೀಯ ವಿರೋಧಿಗಳುತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ ಈ ಘೋಷಣೆ ಮಾಡಿದ್ದಾರೆ. ಜಿ.ಟಿ.ದೇವೇಗೌಡರಿಂದ ರಾಜಕೀಯವಾಗಿ ದೂರ ಸರಿದಿರುವ ಜಿಪಂಮಾಜಿ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿಸಿದ್ಧೇಗೌಡ, ಮುಖಂಡರಾದ ಕೃಷ್ಣನಾಯಕ ಸೇರಿ50ಕ್ಕೂ ಹೆಚ್ಚು ಮಂದಿ ಮುಖಂಡರು ಜೆಡಿಎಸ್‌ಗೆ ರಾಜೀನಾಮೆ ನೀಡುವುದಾಗಿ ಸಾರಿದರು.
ಇಲ್ಲಿನ ಕೇರ್ಗಳ್ಳಿಯ ಸಮುದಾಯ ಭವನದಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬೀರಿಹುಂಡಿ ಬಸವಣ್ಣ, ಪಕ್ಷಕ್ಕಾಗಿ ದುಡಿದವರು ನಾವು. ಶಾಸಕರು ನಮ್ಮವಿರುದ್ಧವಾದರು, ದಡದ ಕಲ್ಲಹಳ್ಳಿಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಮುಂದಿನ ಸಿಎಂ ಆಗಲೆಂದು ಪೂಜೆ ಮಾಡಿಸಿದವರು ಯಾರು ಎಂದು ಪ್ರಶ್ನಿಸಿದರು.
ಸ್ವಾಭಿಮಾನಕ್ಕಾಗಿ ಪಕ್ಷ ತೊರೆದಿದ್ದೇವೆ: ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ಮುಂದೆ ನಾವು ಕೈಗೊಳ್ಳುವ ತೀರ್ಮಾನಕ್ಕೆ ನೀವೆಲ್ಲರೂ ರಾಜಕೀಯವಾಗಿ ಶಕ್ತಿ ತುಂಬಬೇಕು. ನಮಗೆಆಗಿರುವ ಅನ್ಯಾಯಕ್ಕೆ 2023ರ ಚುನಾವಣೆಯಲ್ಲಿ ಉತ್ತರ ನೀಡಬೇಕು. ಸ್ವಾಭಿಮಾನಕ್ಕಾಗಿ ಪಕ್ಷ ತೊರೆದಿದ್ದೇವೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಮಾದೇಗೌಡ ಮಾತನಾಡಿ, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿ ನನಗಿಲ್ಲ. ಮುಂದೆಯೂ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಿದೆ ಎಂದು ತಿಳಿಸಿದರು.
ಈ ಮುಖಂಡರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿ ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಾಗಿವೆ.