Advertisement
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡರ ನಡುವೆ ಮಾತಿನ ಸಮರ ತಾರಕ್ಕೇರುವ ಲಕ್ಷಣ ಕಾಣುತ್ತಿದೆ. ಈ ನಡುವೆ ಏನಾದರೂ ಸಮಸ್ಯೆಗಳಿದ್ದರೆ ವರಿಷ್ಠರಾದ ಎಚ್.ಡಿ.ದೇವೇಗೌಡರ ಬಳಿಗೆ ಬಂದು ಚರ್ಚಿ ಸಲಿ ಎನ್ನುವ ಮೂಲಕ ಬಹಿರಂಗವಾಗಿ ಹೇಳಿಕೆ ನೀಡದಂತೆ ಕುಮಾರಸ್ವಾಮಿ ಅವರು ಜಿ.ಟಿ ದೇವೇಗೌಡರಿಗೆ ಸಂದೇಶ ರವಾನಿಸಿದ್ದಾರೆ.
Related Articles
Advertisement
ಪ್ರಮುಖ ನಾಯಕರ ವಾಕ್ಸಮರದಿಂದ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಯಲು ಮುಂದಾ ಗಿರುವ ಜೆಡಿಎಸ್‌ನ ಕೆಲವು ನಾಯಕರು, ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಯಾರೂ ಪಕ್ಷ ಬಿಡುವುದಿಲ್ಲ ಎನ್ನುತ್ತಾ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಅಂತೂ ಒಂದು ಕಡೆ ಸಂಘಟನೆಗಾಗಿ ಶ್ರಮಿಸುವ ಜೆಡಿಎಸ್‌ನಲ್ಲಿ ಈ ಮಟ್ಟಕ್ಕೆ ಭಿನ್ನರಾಗ ಕೇಳಿ ಬರುತ್ತಿರುವುದು ಇತರ ನಾಯಕರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಇರಿಸುಮುರಿಸು ಉಂಟುಮಾಡಿದೆ.
ಎಚ್‌ಡಿಡಿ ಜತೆ ಮಾತಾಡಲಿ :
ಜಿಟಿಡಿ ಅವರು ವಯಸ್ಸಾಗಿದೆ ಎಂಬ ಕಾರಣ ನೀಡುವುದು ಸರಿಯಲ್ಲ. ಹೊರಟ್ಟಿಗೂ ವಯಸ್ಸಾ ಗಿದೆ. ಆದರೂ ಅವರು ಪಕ್ಷ ಸಂಘ ಟನೆಗೆ ಶ್ರಮಿಸುತ್ತಿದ್ದಾರೆ. ಎಲ್ಲೋ ಹೇಳಿಕೆ ಕೊಡುವುದು ಬೇಡ. ಎಚ್.ಡಿ. ದೇವೇ ಗೌಡರ ಮನೆ ಬಾಗಿಲು 24 ಗಂಟೆಯೂ ತೆರೆದಿರುತ್ತದೆ. ಬಂದು ಮಾತನಾಡಲಿ. ಮಾಧ್ಯಮಗಳ ಮೂಲಕ ನನಗೆ ಸಂದೇಶ ನೀಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ. ಇದರಿಂದ ವಾಕ್ಸಮರ ಹೆಚ್ಚುವ ಲಕ್ಷಣ ಕಾಣುತ್ತಿದೆ.
ಪಕ್ಷ ಸಂಘಟನೆಗಾಗಿ ರಚನೆ ಆಗಿರುವ ವೀಕ್ಷಕರ ತಂಡದಲ್ಲಿ ಜಿ.ಟಿ.ದೇವೇ ಗೌಡ, ಮಧು ಬಂಗಾರಪ್ಪ ಅವರ ಹೆಸರಿಲ್ಲ ಎಂದಾಕ್ಷಣ ಅವರು ಪಕ್ಷ ಬಿಡುತ್ತಾರೆಂದು ಅರ್ಥವಲ್ಲ. ಇಬ್ಬರೂ ಪಕ್ಷದಲ್ಲೇ ಇದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್ ತ್ಯಜಿಸುತ್ತಾರೆ ಎನ್ನಲಾಗುತ್ತಿತ್ತು. ಇತ್ತೀಚೆಗೆ ನಡೆದ ಸಭೆಯಲ್ಲಿ ಅವರು ಪಾಲ್ಗೊಂಡಿರಲಿಲ್ಲವೇ? ಕೆಲವರಿಗಿರುವ ಸಣ್ಣಪುಟ್ಟ ಅಸಮಾಧಾನಗಳನ್ನು ವರಿಷ್ಠರಾದ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿಯವರು ಬಗೆಹರಿಸುತ್ತಾರೆ. –ಬಂಡೆಪ್ಪ ಕಾಶೆಂಪೂರ್, ಮಾಜಿ ಸಚಿವ