ಶ್ರೀನಿವಾಸಪುರ: ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತ ರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರು ಬಿಜೆಪಿ ಪರ ಕೆಲಸ ಮಾಡಿದರು ಎಂಬುದು ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೇ, ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನವರ ಮಾತು ಬದಿಗೊತ್ತಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಮತದಾರರು ಆಶೀರ್ವಾದ ಮಾಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿದ ನಂತರ ಪಾದಯಾತ್ರೆ ನಡೆಸಿ ಮಾತನಾಡಿ, ಚುನಾವಣೆಗಳು ಬಂದಾಗ ಯಾರು ಯಾವ ಗಿಮಿಕ್‌ಮಾಡಿ ಜನರನ್ನು ಯಾಮಾ ರಿಸುತ್ತಾರೆ. ಮತ್ತೆ ಸತ್ಯವಂತರಂತೆ ಮಾತನಾಡುವು ದರ ಬಗ್ಗೆ ಪ್ರಜ್ಞಾವಂತರು ಅರಿತಿದ್ದಾರೆ. ಜೆಡಿಎಸ್, ಬಿಜೆಪಿಯ ಬಿ ಟೀಂ ಎನ್ನುವುದು ಸತ್ಯಕ್ಕೆ ದೂರವಾ ಗಿದ್ದು, ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ನಾನು ಸುಳ್ಳು ಹೇಳಿ ಕಣ್ಣೀರು ಸುರಿಸಿ ಯಾಮಾರಿ ಸುವ ವ್ಯಕ್ತಿ ನಾನಲ್ಲ ಎಂದರು.
ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ: ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿಯಾಗಿದೆ ಎಂದರೆ ನನ್ನ ಅವಧಿಯಲ್ಲಿ ಮಾತ್ರ. ಕೇವಲ ಸಭೆ ಸಮಾರಂಭ ಗಳು ನಡೆಸಿ, ಅದು ಇದು ಮಾಡುತ್ತೇನೆಂದು ಜನತೆಗೆ ನೀಡಿದ್ದು ಸುಳ್ಳು ಭರವಸೆಗಳು ಮಾತ್ರ. ಆದರೆ, ಯಾವುದು ಈಡೇರಿಲ್ಲವೆಂದು ಆರೋಪಿ ಸಿದರು. ರಾಜ್ಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹಿಳಾ ಸಂಘಗಳ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಮತದಾರರು ಆಶೀರ್ವದಿಸಿ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚಿಸಲು ತಾವು ನನಗೆ ಸಹಕಾರ ನೀಡಬೇಕೆಂದು ಕೋರಿದರು.
ರಮೇಶ್‌ಕುಮಾರ್‌ಗೆ ತಕ್ಕ ಪಾಠ: ಅಂಜುಮಾನ್ ಸಂಸ್ಥೆ ಮುಖ್ಯಸ್ಥ ಜಮೀರ್‌ಅಹ್ಮದ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪ ರವರನ್ನು ಸೋಲಿಸಲು, ಕೆ.ಆರ್. ರಮೇಶ್‌ಕುಮಾರ್‌ರವರು ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದು ನಮ್ಮವರಿಗೆ ಗೊತ್ತಿದೆ. ಆದ್ದ ರಿಂದ ನಡೆಯಲಿರುವ ಚುನಾವಣೆಯಲ್ಲಿ ರಮೇಶ್ ಕುಮಾರ್‌ಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ಪುರಸಭೆಯ ಮಾಜಿ ಸದಸ್ಯ ಏಜಾಜ್ ಮಾತನಾಡಿ, ಕಾಂಗ್ರೆಸ್ ಜೆಡಿಎಸ್ ಮೇಲೆ ಗೂಬೆ ಕೂರಿ ಸುವ ಸಂಚು ನಡೆಸುತ್ತಿದೆ. ಅಲ್ಪಸಂಖ್ಯಾತರು ಎಚ್ಚೆತ್ತು ಕೊಳ್ಳಬೇಕು.ಶೂನ್ಯ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದರು.
ಜೆಡಿಎಸ್ ಮಹಿಳಾ ಮುಖಂಡರಾದ ಗಾಯತ್ರಿ ಮುತ್ತಪ್ಪ, ಆಯಿಶಾ ನಯಾಜ್, ಬಿ.ವೆಂಕಟರೆಡ್ಡಿ, ರಸೂಲ್‌ಖಾನ್, ಶಬ್ಬೀರ್ ಖಾನ್, ಜಬೀನ್ ತಾಜ್, ವಹೀದಾ ಬೇಗಂ, ಸಯದ್, ಜಯಲಕ್ಷ್ಮೀ, ರಿಯಾನಾ ಖಾನಂ,ಕುಂದಿಟಿ ವಾರಿಪಲ್ಲಿ ಶಿವಾರೆಡ್ಡಿ, ಎಂ.ವಿ.ಶ್ರೀನಿವಾಸ್, ಆರ್.ನಾರಾಯಣಸ್ವಾಮಿ, ಆಂಜಿ, ಅಬ್ದುಲ್ ರಜಾಕ್, ಬಿ.ವಿ.ಶಿವಾರೆಡ್ಡಿ, ಕೆ.ಪಿ. ನಾಗೇಶ್, ಪೂಲು ಶಿವಾರೆಡ್ಡಿ ಇದ್ದರು.