ಶ್ರೀರಂಗಪಟ್ಟಣ: ಕಳೆದ 30 ವರ್ಷದಿಂದ ಜೆಡಿಎಸ್ ಕಾರ್ಯಕರ್ತನಾಗಿ ದುಡಿದ ನನಗೆ ಪಕ್ಷದ ವರಿಷ್ಠರು ಎಂಎಲ್‌ಎ, ಎಂಎಲ್‌ಸಿ ಸೇರಿದಂತೆ ಹಲವು ಸ್ಥಾನಮಾನ ನೀಡುವ ಬಗ್ಗೆ ಹಲವು ಬಾರಿ ಆಶ್ವಾಸನೆ ನೀಡಿ, ನನ್ನನ್ನು ಕಡೆಗಣನೆ ಮಾಡಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಆರೋಪಿಸಿದರು.
ತಾಲೂಕಿನ ಆರತಿಉಕ್ಕಡದಲ್ಲಿ ತಮ್ಮ ಬೆಂಬಲಿರು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಮೂರು ಪಕ್ಷಗಳ ಅಭ್ಯರ್ಥಿಗಳು ಯಾವುದೇ ಪಕ್ಷದ ಚಿಹ್ನೆಗಳಿಲ್ಲದೆ, ಸ್ವತಂತ್ರ ಅಭ್ಯರ್ಥಿ ಗಳಾಗಿ ನನ್ನೊಂದಿಗೆ ಚುನಾವಣೆ ಎದುರಿಸಲಿ, ಅವರಿಗಿಂತ 1 ಮತ ಕಡಿಮೆ ತೆಗೆದುಕೊಂಡರೂ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು.
ಕುಟುಂಬದ ಹೆಸರಿನಲ್ಲಿ ಸಂಪಾದನೆ ಮಾಡಿಲ್ಲ: ನಾನು ಇಷ್ಟು ವರ್ಷ ರಾಜಕೀಯದಲ್ಲಿದ್ದರೂ, ಇಂದಿಗೂ ನಾನು ಹಾಗೂ ನನ್ನ ಕುಟುಂಬದ ಹೆಸರಿ ನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ಆಸ್ತಿ ಸಂಪಾದನೆ ಮಾಡಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ. ಅವರು ಸಹ ಬಹಿರಂಗವಾಗಿ ಪ್ರಮಾಣ ಮಾಡಲಿ. ಜೆಡಿ ಎಸ್ ಪಕ್ಷ ದಿಂದ ಟಿಕೆಟ್ ನೀಡದಿದ್ದರೂ 2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಶತ ಸಿದ್ಧ ಎಂದರು.
ಭಿನ್ನಾಭಿಪ್ರಾಯದಿಂದ ಬೇಸರ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮಾತ ನಾಡಿ, ಇತ್ತೀಚಿಗೆ ಅವರ ಪಕ್ಷದಲ್ಲಿನ ಭಿನ್ನಾಭಿಪ್ರಾಯ ದಿಂದ ಬೇಸರಗೊಂಡಿದೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಉತ್ತಮವಾಗಲಿ. ಜಿಲ್ಲೆ ಯಲ್ಲಿ ನಾಯಕತ್ವವು ಇಲ್ಲ, ನಾಯಕರು ಇಲ್ಲ. ಹೀಗಾಗಿ, ಜಿಲ್ಲೆ ಅಭಿವೃದ್ಧಿ ಬಗ್ಗೆ ಕಾಳಜಿವಹಿಸುವ ವ್ಯಕ್ತಿಗಳೇ ಇಲ್ಲದಂತಾಗಿದೆ. 1967ರ ಹಿಂದೆ ರಾಜಕೀಯ ಮುಖಂಡರು ಗ್ರಾಮಕ್ಕೆ ಬರುತ್ತಿದ್ದಾರೆ ಎಂದರೆ ಗ್ರಾಮಸ್ಥರು ಹಿಡಿದಿಟ್ಟುಕೊಳ್ಳುವ ಪ್ರಸಂಗ ಇತ್ತು. ಆದರೆ, ಈಗ ಜನರೇ ರಾಜಕೀಯ ಮುಖಂಡರ ಬಳಿ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ, ಯಾರಾದರೂ ಮೃತಪಟ್ಟ ವ್ಯಕ್ತಿಯ ಶವವನ್ನು ರಾಜಕೀಯ ವ್ಯಕ್ತಿಗಳು ಬರುವವರೆವಿಗೂ ಕಾಯ್ದಿರಿಸಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ಅರಕೆರೆ ಪ್ರಸನ್ನಗೌಡ, ತಗ್ಗಹಳ್ಳಿ ಪ್ರಸನ್ನ, ಅರಕೆರೆ ಸಿದ್ದರಾಜು, ಸಚ್ಚಿನ, ಕಾಳೇನಹಳ್ಳಿ ರಮೇಶ್, ಮೊಲ್ಲೇನಹಳ್ಳಿ ಪುಟ್ಟೇಗೌಡ, ಬಾಲು, ಕೃಷ್ಣಪ್ಪ, ಶಿವಲಿಂಗೇಗೌಡ, ಮಂಚೇಗೌಡ, ರಮೇಶ್, ಸುನೀಲ್, ವಿಜಿ, ಗಿರೀಶ್, ತಗ್ಗಹಳ್ಳಿ ಮಂಜು, ಯರಹಳ್ಳಿ ನವೀನ್, ಸುರೇಶ್ ಉಪಸ್ಥಿತರಿದ್ದರು.