Advertisement

JDS ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಾರ್ಟಿ: ಹಾಸನದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

05:35 PM Apr 30, 2023 | Team Udayavani |

ಹಾಸನ : ಕಾಂಗ್ರೆಸ್ ಮತ್ತು ಜೆಡಿಎಸ್ ದೃಷ್ಟಿಯಲ್ಲಿ ಕರ್ನಾಟಕ ಕೇವಲ ಎಟಿಎಂ. ಬಿಜೆಪಿಗೆ ಕರ್ನಾಟಕವು ದೇಶದ ಅಭಿವೃದ್ಧಿಯ ಪ್ರಮುಖ ಬೆಳವಣಿಗೆಯ ಎಂಜಿನ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಬೇಲೂರಿನಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹೊಯ್ಸಳ ಶಿಲ್ಪಕಲೆಗಳ ಬೀಡಿನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಅನೇಕ ಬಾರಿ ಕರ್ನಾಟಕ್ಕೆ ಬಂದಾಗ ನನಗೆ ಎಲ್ಲೇ ಹೋದರೂ ಒಂದೇ ಧ್ವನಿ, ಒಂದೇ ಸಂಕಲ್ಪ ಕೇಳಿಸುತ್ತದೆ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂಬ ವಾತಾವರಣ ಹಾಸನದಲ್ಲಿಯೂ ನನಗೆ ಕಾಣುತ್ತಿದೆ ಎಂದರು.

ದೆಹಲಿಯಲ್ಲಿ ಕುಳಿತಿರುವ ಒಂದು ಕುಟುಂಬಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಘಟಕ ಹಗಲಿರುಳು ಶ್ರಮಿಸಬೇಕಿದೆ. ಪ್ರತಿಯೊಂದು ನಿರ್ಧಾರಕ್ಕೂ ದೆಹಲಿಯ ಆ ಕುಟುಂಬದಿಂದಲೇ ಗ್ರೀನ್ ಸಿಗ್ನಲ್ ಸಿಗಬೇಕು. ಅಂತೆಯೇ ಜೆಡಿಎಸ್ ಪಕ್ಷವು ಒಂದೇ ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷವಾಗಿದೆ. ಅವರು ತಮ್ಮ ಎಲ್ಲಾ ಶಕ್ತಿಯನ್ನು ತಮ್ಮ ಕುಟುಂಬದ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸಮಾಧಾನದಲ್ಲಿ ತೊಡಗಿದ್ದರೆ, ಬಿಜೆಪಿ ತೃಪ್ತಿಯತ್ತ ಗಮನ ಹರಿಸಿದೆ. ಅವರ ತುಷ್ಟೀಕರಣ ರಾಜಕಾರಣದಿಂದಾಗಿಯೇ ಎಸ್‌ಟಿ, ಎಸ್‌ಸಿ ಮತ್ತು ಒಬಿಸಿಗಳ ಜನಸಂಖ್ಯೆಯ ಹೆಚ್ಚಿನ ಭಾಗವು ಮೂಲಭೂತ ಅಗತ್ಯಗಳಿಂದ ವಂಚಿತವಾಗಿದೆ ಎಂದು ಕಿಡಿ ಕಾರಿದರು.

ಕಳೆದ 9 ವರ್ಷಗಳಲ್ಲಿ, ನೀವು ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಬಲೀಕರಣವನ್ನು ನೋಡುತ್ತಿದ್ದೀರಿ. ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿ ಯಾವುದೇ ಆಸ್ತಿ ಇರಲಿಲ್ಲ, ಬಡವರಿಗಾಗಿ ನಾವು ನಿರ್ಮಿಸಿದ 4 ಕೋಟಿ ಮನೆಗಳಲ್ಲಿ ಹೆಚ್ಚಿನವು ಸಹೋದರಿಯರ ಹೆಸರಿನಲ್ಲಿ ನೋಂದಣಿಯಾಗಿವೆ ಎಂದರು.

Advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ವಿರುದ್ಧವಾಗಿ ಹೋರಾಡುತ್ತಿದ್ದವು. 2018ರ ವಿಧಾನಸಭಾ ಚುನಾವಣೆ ವೇಳೆ ಅವರ ನಾಯಕರು ಪರಸ್ಪರ ನಿಂದನೆ ಮಾಡುತ್ತಿದ್ದರು. ಆದರೆ, ಚುನಾವಣೆ ಮುಗಿಯುತ್ತಿದ್ದಂತೆಯೇ ಪರಸ್ಪರ ಮೈತ್ರಿ ಮಾಡಿಕೊಂಡರು. ಹೀಗಾಗಿ ಜೆಡಿಎಸ್‌ಗೆ ನೀಡುವ ಪ್ರತಿಯೊಂದು ಮತವೂ ಕಾಂಗ್ರೆಸ್‌ಗೆ ಲಾಭವಾಗಲಿದೆ. ಮತ್ತು ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಅಭಿವೃದ್ಧಿಯನ್ನು ತಡೆಯುವುದು, ಕರ್ನಾಟಕವನ್ನು ರಿವರ್ಸ್ ಗೇರ್‌ನಲ್ಲಿ ಇಡುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next