Advertisement

ರಾಜ್ಯ ಸರ್ಕಾರ ವಿರುದ್ಧ ಜೆಡಿಎಸ್‌ ಆಕ್ರೋಶ

11:38 AM Jun 30, 2020 | Suhan S |

ವಿಜಯಪುರ: ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಯಂಥ ಕಾನೂನುಗಳನ್ನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ವಿರೋಧಿಸಿ ಜೆಡಿಎಸ್‌ ಕಾರ್ಯಕರ್ತರು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ರಾಜ್ಯ ಸರ್ಕಾರ ರೈತ, ಕೂಲಿ ಕಾರ್ಮಿಕರ ವಿರೋಧಿ  ನಿಲುವುಗಳಿಂದ ರಾಜ್ಯದಲ್ಲಿ ಜನವಿರೋಧಿ  ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಕಳೆದ ಮೂರು ತಿಂಗಳಿಂದ ನಿರಂತರ ಏರುತ್ತಲೇ ಇರುವ ಇಂಧನ ಬೆಲೆ ಇಳಿಕೆ ವಿಷಯದಲ್ಲಿ ಮೌನಕ್ಕೆ ಶರಣಾಗಿರುವ ಬಿಜೆಪಿ ಸರ್ಕಾರ, ಕೋವಿಡ್‌ ಸಂಕಷ್ಟ ಸಂದರ್ಭದಲ್ಲಿ ಜನಸಾಮಾನ್ಯರ ಅಸಹಾಯಕತೆ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳಲು ಜನ ವಿರೋಧಿ ಕಾಯ್ದೆಗಳನ್ನುಜಾರಿಗೆ ತರುವಲ್ಲಿ ಮುಂದಾಗಿದೆ ಎಂದು ದೂರಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಡಾ| ರಿಯಾಜ್‌ ಫಾರೂಕಿ, ಚಂದ್ರಕಾಂತ ಹಿರೇಮಠ, ರಾಜು ಹಿಪ್ಪರಗಿ, ಸಿದ್ದು ಕಾಮತ, ಎಂ.ಕೆ. ಬಾಗಾಯತ, ಕೌಸರ ಶೇಖ್‌, ಯಾಕೂಬ್‌ ಕೂಪರ, ಐಜಾಜ್‌ ಮುಕಿºಲ್‌, ಎಸ್‌.ವಿ.ಪಾಟೀಲ, ಕಾಂತು ಇಂಚಗೇರಿ, ಸಾಜೀದ್‌ ಹುಸೇನ್‌ ರಿಸಾಲ್ದಾದಾರ್‌, ಮಹಾದೇವಿ ತಳಕೇರಿ, ರೇಖಾ ಮಾಶಾಳಕರ, ಮನೋಜ್‌ ಬಿರಾದಾರ, ಸುನೀಲ ರಾಠೊಡ, ಈರಣ್ಣ ಮೋಟಗಿ, ಸುಭಾಷ್‌ ನಾಯಕ, ಸೋಮು ಉಪ್ಪಾರ, ಶಿವಾನಂದ ಹಿರೇಕುರುಬರ, ಶಿವಲಿಂಗ ಕಿಣಗಿ, ಎ.ಎಂ. ಇನಾಮದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next