Advertisement

ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ ವೈಎಸ್‌ವಿ ದತ್ತಾ

01:22 PM Feb 07, 2022 | Team Udayavani |

ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ವೈಎಸ್ ವಿ ದತ್ತಾ ಅವರು ಪರೋಕ್ಷವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾತ್ಯಾತೀತ ವಿಚಾರದಲ್ಲಿ ದೇವೇಗೌಡರ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಪಕ್ಕಾ ಜಾತ್ಯಾತೀತವಾಗಿ ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಈಗಲೂ ದೇವೇಗೌಡರ ಬಗ್ಗೆ ಆಶಾಭಾವನೆಯಿದೆ. ನಾನು 20 ವರ್ಷ ಹುಡುಗನಾಗಿದ್ದಾಗಲೇ ದೇವೇಗೌಡರ ಜೊತೆ ಸೇರಿಕೊಂಡವನು, ದೇವೇಗೌಡರ ಜೊತೆ ನನಗೆ ಸಂಪರ್ಕ ಹೆಚ್ಚಾಗಿದೆ. ನನಗೀಗ 69 ವರ್ಷವಾಗಿದೆ.ಆದರೆ, ಕುಮಾರಸ್ವಾಮಿ ಬಗ್ಗೆ ಕೇಳಬೇಡಿ” ಎಂದು ಜೆಡಿಎಸ್ ಪಕ್ಷದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ. ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ಬದಲಾವಣೆಯಾಗಬಾರದು. ನಾವು ಯಾಕೆ ಪ್ರಾದೇಶಿಕ ಪಕ್ಷದಲ್ಲಿ ದುಡಿಯುತ್ತಿದ್ದೇವೆ? ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳೆರಡನ್ನೂ ಸಮಾನ ದೂರದಲ್ಲಿ ಇಡಬೇಕು. ಆ ಮೂಲಕ ಜಾತ್ಯಾತೀತ ನಿಲುವಿಗೆ ಬದ್ಧವಾಗಿರಬೇಕು. ಬಿಜೆಪಿ ವಿರುದ್ಧ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ. ಇದನ್ನ ಪಕ್ಷದ ವೇದಿಕೆಯಲ್ಲಿ ನಾನು ಚರ್ಚಿಸಿದ್ದೇನೆ ಎಂದು ವೈಎಸ್ ವು ದತ್ತಾ ಹೇಳಿದರು.

ರಾಗಿ ಖರೀದಿ ಕಡಿತ: ರಾಗಿ ಬೆಳೆ ಖರೀದಿ ಕಡಿತಕ್ಕೆ ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕ ರಾಜ್ಯದ ಬಯಲು ಸೀಮೆಯ ರಾಗಿ ಬೆಳೆಗಾರರ ಸಮಸ್ಯೆ ಘನಘೋರವಾಗಿದೆ. ಸರ್ಕಾರದ ಆದೇಶದಿಂದ ರಾಗಿ ಬೆಳೆಗಾರ ರೈತರು ಕಷ್ಟದಲ್ಲಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರತಿಭಟನೆ ಮಾಡಲಾಗಿದೆ. ಡಿಸಿಗಳಲ್ಲಿ ಪ್ರಶ್ನಿಸಿದರೆ ಸರ್ಕಾರ ಆದೇಶ, ಬೆಂಗಳೂರಿನಲ್ಲಿ ಬದಲಾವಣೆ ಮಾಡಿ ಎಂದು ಹೇಳುತ್ತಾರೆ. ವಿಧಾನಸೌಧಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ. ಅಧಿವೇಶನದಲ್ಲಿ ಈ ವಿಚಾರ ಚರ್ಚೆ ಆಗಬೇಕು ಎಂಬುದು ರೈತರ ಬೇಡಿಕೆಯಾಗಿದೆ ಎಂದರು.

ಇದನ್ನೂ ಓದಿ:ಹಿಜಾಬ್-ಕೇಸರಿ ಶಾಲು ವಿವಾದ ನಡುವೆ ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು!

Advertisement

ರಾಗಿ ಖರೀದಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಸರ್ಕಾರ ತೆರೆದಿದೆ. ಈ ಹಿಂದೆ ರೈತ ಬೆಳೆದಷ್ಟು ರಾಗಿ ಮಾರಾಟಕ್ಕೆ ಅವಕಾಶ ಇತ್ತು. ಆದರೆ 2021 ರಲ್ಲಿ ಖರೀದಿಸಲ್ಪಟ್ಟ ರಾಗಿ 52 ಲಕ್ಷ ಕ್ವಿಂಟ್ವಾಲ್, ಈ ಪೈಕಿ 4 ಲಕ್ಷ ಕ್ವಿಂಟ್ವಾಲ್ ನಷ್ಟು ಕಡೂರಿನಿಂದ ಖರೀದಿಯಾಗಿದೆ. ಆದರೆ ಈ‌ ಬಾರಿ 20 ಲಕ್ಷ ಕ್ವಿಂಟ್ವಾಲ್ ಮಾತ್ರ ಖರೀದಿ ಮಾಡಲಾಗಿದೆ 1,90,000 ಕ್ವಿಂಟ್ವಾಲ್ ಕಡೂರಿನಿಂದ ಖರೀದಿ ಮಾಡಿದೆ. ಈಗ ರಾಗಿ ಖರೀದಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸಣ್ಣ ರೈತರಿಂದ 20 ಕ್ವಿಂಟ್ವಾಲ್ ಮಾತ್ರ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾದರೆ ರೈತರು ಬೆಳೆದ ಉಳಿದ ರಾಗಿಯನ್ನು ಏನು ಮಾಡಬೇಕು? ಸರ್ಕಾರದ ಆದೇಶವನ್ನು ಹಿಂಪಡೆಯಬೇಕು. ಆದೇಶದಲ್ಲಿ ಇರುವ ಸಣ್ಣ ಅತಿ ಸಣ್ಣರೈತರೆಂದ ಉಲ್ಲೇಖ ತೆಗೆದು ಹಾಕಬೇಕು ರೈತರಲ್ಲಿ ಒಡಕು ಉಂಟು ಮಾಡಬಾರದು ಎಂದು ದತ್ತಾ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next