ಚಿಕ್ಕಮಗಳೂರು: ಕಡೂರಿನ ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿಯ ಆಡಿಯೋವೊಂದು ರಾಜಕೀಯ ವಲಯಲ್ಲಿ ಭಾರೀ ವೈರಲ್ ಆಗಿದೆ.
ವೈ.ಎಸ್.ವಿ.ದತ್ತ ಅವರ ಆಪ್ತ, ಕಡೂರು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಅವರು ಮಾತಾನಾಡಿರುವ ಆಡಿಯೋದಲ್ಲಿ ವೈ.ಎಸ್.ವಿ.ದತ್ತ ಅವರು ಕಾಂಗ್ರೆಸ್ ಸೇರಿಲಿರುವ ಬಗ್ಗೆ ಅಂತಿಮವಾಗಿ ನಿರ್ಧರಿಸಿರುವ ಕುರಿತು ದೂರವಾಣಿ ಮೂಲಕ ಹೇಳಿದ್ದಾರೆ ಎಂದು ರಾಜಣ್ಣ ಅವರು ಆಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಆಕಸ್ಮಿಕವಾಗಿ ಖಾತೆಗೆ ಬಂತು 4.26 ಕೋಟಿ ರೂ.: ದುಡ್ಡು ಬಳಸಿ ದುಬಾರಿ ಜೀವನ ನಡೆಸಿದಾತನಿಗೆ ಜೈಲು ಶಿಕ್ಷೆ.!
ದತ್ತಾ ಅವರು ಕಾಂಗ್ರೆಸ್ ಸೇರಿದರೆ ಕಡೂರು ಕ್ಷೇತ್ರದಲ್ಲಿ ನೇರಾನೇರ ಹಣಾಹಣಿಯಾಗಲಿದೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ ಮಾಡಲಿದ್ದಾರೆ. ಆ ಬಳಿಕ ಇದೇ ಡಿ. 17 ರಂದು ಬೆಳ್ತಂಗಡಿಯಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾರ್ಯಕರ್ತರ ಮುಂದೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ದತ್ತ ಅವರ ಅಭಿಮಾನಿಗಳು ಬೆಳ್ತಂಗಡಿಗೆ ಬರಬಹುದು ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಕಡೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಲನದ ಎಂಬ ಆಡಿಯೋ ವೈರಲ್ ಆದ ಬೆನ್ನಲ್ಲೇ, ದತ್ತ ಕಾಂಗ್ರೆಸ್ ಸೇರಿದರೆ ಮೂಲ ಕಾಂಗ್ರೆಸ್ಸಿಗರು, ಟಿಕೆಟ್ ಆಕಾಂಕ್ಷಿಗಳು ಏನು ಮಾಡುತ್ತಾರೆ. ಒಂದು ವೇಳೆ ಇದು ಆದರೆ ಬಿಜೆಪಿ-ಕಾಂಗ್ರೆಸ್ ಮಧ್ಯೆ ನಾನಾ-ನೀನಾ ಎಂಬ ಜಿದ್ದಾಜಿದ್ದಿ ಫೈಟ್ ನಡೆಯಲಿದೆ ಎನ್ನುವ ಚರ್ಚೆಗಳು ಶುರುವಾಗಿದೆ.