Advertisement

ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮ

08:01 PM Mar 30, 2021 | Team Udayavani |

ದೇವದುರ್ಗ : ಜೆಡಿಎಸ್‌ ವತಿಯಿಂದ ಏ.5ರಂದು ಸಿರವಾರ್‌ ಕ್ರಾಸ್‌ ಹತ್ತಿರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್‌ ಜಾಗಟಲ್‌ ಹೇಳಿದರು.

Advertisement

ಪಟ್ಟಣದ ಪೊಲೀಸ್‌ ಕಾಲೋನಿಯಲ್ಲಿರುವ ಕರೆಮ್ಮ ಗೋಪಾಲಕೃಷ್ಣ ನಿವಾಸದಲ್ಲಿ ಸುಣದಕಲ್‌ ಗ್ರಾಮದ 40 ಜನರು ಕಾಂಗ್ರೆಸ್‌, ಬಿಜೆಪಿ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊತ್ತದೊಡ್ಡಿ ಗ್ರಾಮದಲ್ಲಿ ಬರುವ 15ನೇ ಮುಖ್ಯಕಾಲುವೆ ನನೆಗುದಿಗೆ ಬಿದ್ದಿರುವ ಕಾಮಗಾರಿ ಆರಂಭಿಸಬೇಕು. ಕೆಲಸ ವಿಳಂಬವಾದರಿಂದ ಕೆಲ ಗ್ರಾಮಗಳಿಗೆ ನೀರು ಮುಟ್ಟುತ್ತಿಲ್ಲ. ಹೀಗಾಗಿ ರೈತರು ಪ್ರತಿವರ್ಷ ನಷ್ಟದಲ್ಲೇ ಬದುಕು ಸಾಗಿಸಬೇಕಾಗಿದೆ. ಕಾಮಗಾರಿ ಆರಂಭಿಸುವ ಕುರಿತು ಎನ್‌ಆರ್‌ಬಿಸಿ ಅಧಿಕಾರಿಗಳು ಸ್ಪಷ್ಟತೆ ಉತ್ತರ ನೀಡುತ್ತಿಲ್ಲ. ಸಮರ್ಪಕವಾಗಿ ಮಾಹಿತಿ ನೀಡದೇ ಇರುವ ಕಾರಣ ಹೋರಾಟ ಅನಿವಾರ್ಯ ಎಂದು ಹೇಳಿದರು.

ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಏ.20ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು. ಈಭಾಗದ ಜನಪತ್ರಿನಿಧಿ ಗಳು ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು ಎಂದು ಹೇಳಿದರು. ಕರೆಮ್ಮ ಗೋಪಾಲಕೃಷ್ಣ ಮಾತನಾಡಿ, ಕಾಂಗ್ರೆಸ್‌, ಬಿಜೆಪಿ ಪಕ್ಷದಲ್ಲಿ ಬೇಸತ್ತು ಪ್ರಾಮಾಣಿಕ ನಿಷ್ಠೆ ಜೆಡಿಎಸ್‌ ಪಕ್ಷಕ್ಕೆ ಜನರು ಸೇರ್ಪಯಾಗುತ್ತಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅಧಿ ಕಾರ ಅವ ಧಿಯಲ್ಲಿ ಬೇಸಿಗೆ ಅವ ಧಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲಾಯಿತು. ರೈತರ ಬೆಳೆದ ಬೆಳೆಗಳಿಗೆ ಏ.20ವರೆಗೆ ನೀರು ಹರಿಸುವಂತೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗದೇ ಕಾರಣ ಪ್ರತಿ ವರ್ಷ ಬೆಳೆ ನಷ್ಟದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next