Advertisement

ಜೆಡಿಎಸ್‌ನದು ಬ್ಲಾಕ್‌ ಮೇಲ್‌ ಜಾಯಮಾನ

12:37 PM Feb 27, 2018 | |

ಕೆ.ಆರ್‌.ನಗರ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದ್ದು, 20 ರಿಂದ 30 ಸ್ಥಾನಗಳನ್ನು ಪಡೆದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದವರನ್ನು ಬ್ಲಾಕ್‌ ಮೇಲ್‌ ಮಾಡುವ ಜಾಯಮಾನ ಜೆಡಿಎಸ್‌ನದು ಎಂದು ಚಾಮರಾಜಪೇಟೆ ಶಾಸಕ ಬಿ.ಝಡ್‌.ಜಮೀರ್‌ ಅಹಮದ್‌ ಖಾನ್‌ ಟೀಕಿಸಿದರು.

Advertisement

ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ತಮ್ಮ ಹೆಸರಿನಲ್ಲಿ ಆರಂಭವಾಗಿರುವ ಅಭಿಮಾನಿ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜೆಡಿಎಸ್‌ನವರು ಈಗಾಗಲೇ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದು ಸಮ್ಮಿಶ್ರ ಸರ್ಕಾರದ ಕನಸು ಕಾಣುತ್ತಿದ್ದಾರೆ. ಆದರೂ ಸಹ ಹೆಚ್‌ಡಿಕೆ ರಾಜ್ಯ ಉದ್ಧಾರ ಮಾಡುವ ನಾಟಕವಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಮತ ನೀಡಿ:  ಮುಸ್ಲಿಂರು ಯಾವುದೇ ಕಾರಣಕ್ಕೂ ಹಣ ಪಡೆದು ಮತ ಚಲಾಯಿಸ ಬಾರದು ಎಂದು ಮನವಿ ಮಾಡಿದ ಜಮೀರ್‌, ಜೆಡಿಎಸ್‌ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ಹಾಕಿದಂತೆ ಎಂದರಲ್ಲದೆ ಪಕ್ಷದಿಂದ ಹೊರ ಹಾಕಿರುವ ನನ್ನ ಗೌರವ ಕಾಪಾಡಲು ಸಮಸ್ತ ಮುಸ್ಲಿಂರು ಕಾಂಗ್ರೆಸ್‌ಗೆ ಮತ ನೀಡಿ ನನ್ನ ರಾಜಕೀಯ ಭವಿಷ್ಯಕ್ಕೆ ದಾರಿ ದೀಪವಾಗಬೇಕು ಎಂದು ಕೋರಿದರು.

ದೇವರ ಆಶೀರ್ವಾದ ನಮ್ಮ ಮೇಲೂ ಇದೆ: ಮಾತೆತ್ತಿದರೆ ಮಾಜಿ ಪ್ರಧಾನ ಮಂತ್ರಿ ಹೆಚ್‌.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದಿಂದ ಹೊರಹಾಕಿರುವ 7 ಮಂದಿ ಶಾಸಕರ ಹಣೆಬರಹವನ್ನು ಬರೆಯುತ್ತೇವೆ ಎಂದು ಹೇಳುತ್ತಾರೆ. ಅವರ ಹಣೆಬರಹವನ್ನು ದೇವರು ಬರೆಯುವುದಾದರೆ ನಮ್ಮ ಹಣೆ ಬರಹವನ್ನು ಬರೆಯಲು ದೇವರು ಇಲ್ಲವೇ ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನತೆಯ ಬೆಂಬಲ ಮತ್ತು ದೇವರ ಆಶೀರ್ವಾದ ನಮ್ಮ ಮೇಲು ಇದೆ ಎಂದರು.

ರ ಕೆಲಸಗಳು ಮತ್ತು ಹಿಂದುಳಿದ ವರ್ಗದ ಪರವಾಗಿರುವ ಯೋಜನೆಗಳಿಂದ ಮತದಾರರು ಪ್ರಭಾವಿತರಾಗಿದ್ದು, ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಸನ್ನದ್ಧರಾಗಿದ್ದಾರೆ ಎಂದರು. ನಾಗಮಂಗಲ ಶಾಸಕ ಎನ್‌.ಚೆಲುವರಾಯಸ್ವಾಮಿ, ವಿಧಾನಪರಿಷತ್‌ ಸದಸ್ಯ ರಿಜಾÌನ್‌ಹರ್ಷದ್‌, ಜಿ.ಪಂ. ವಿಪಕ್ಷ ನಾಯಕ ಡಿ.ರವಿಶಂಕರ್‌, ಮೈಸೂರು ಜಿಲ್ಲಾ ಜಮೀರ್‌ ಅಹಮದ್‌ ಖಾನ್‌ ಅಭಿಮಾನಿ ಬಳಗದ ಅಧ್ಯಕ್ಷ ಅಜೀಜ್‌ಉಲ್ಲಾ, ನಗರ ಕಾಂಗ್ರೆಸ್‌ ವಕ್ತಾರ ಸೈಯದ್‌ಜಾಬೀರ್‌ ಮಾತನಾಡಿದರು.

Advertisement

ವಿಶ್ವನಾಥ್‌ಗೆ ರಾಜಕೀಯ ಸಿದ್ಧಾಂತ ಇಲ್ಲ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಅವರನ್ನು ಸೋಲಿಸಲು ಸಂಸದ ಪ್ರತಾಪ್‌ಸಿಂಹ ಅವರಿಗೆ ಬೆಂಬಲ ನೀಡಿದ ಹೆಚ್‌.ಡಿ.ದೇವೇಗೌಡರ ಪಕ್ಷಕ್ಕೆ ವಿಶ್ವನಾಥ್‌ ಅವರು ಹೋಗಿದ್ದು ಇದು ಅವರಿಗೆ ರಾಜಕೀಯ ಸಿದ್ಧಾಂತ ಇಲ್ಲಾ ಎಂಬುದನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದ ಜಮೀರ್‌, ಕಾಂಗ್ರೆಸ್‌ ಪಕ್ಷ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡ‌ದಿದ್ದರೂ ಪಕ್ಷೇತರನಾಗಿ ನಿಂತು ಕಾಂಗ್ರೆಸ್‌ ಗೆಲುವಿಗೆ ಪಣತೊಟ್ಟು ಕೆಲಸ ಮಾಡುತ್ತೇನೆ ಎಂದು ಜಮೀರ್‌ ಅಹಮದ್‌ ಖಾನ್‌ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next