Advertisement

ಶಾಸಕರ ಸ್ವಗ್ರಾಮ ಪಂಚಾಯತಿ ಜೆಡಿಎಸ್‌ ವಶಕ್ಕೆ

03:22 PM Feb 10, 2021 | Team Udayavani |

ಶಿಡ್ಲಘಟ್ಟ: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಹಾಗೂ ಶಾಸಕ ವಿ.ಮುನಿಯಪ್ಪ ಅವರ ಸ್ವಗ್ರಾಮ ಹಂಡಿಗನಾಳ ಗ್ರಾಮ ಪಂಚಾಯಿತಿ ಇದೇ ಮೊದಲ ಬಾರಿಗೆ ಜೆಡಿ ಎಸ್‌ ಬೆಂಬಲಿತರ ಪಾಲಾಗಿದ್ದು, ಅಧ್ಯಕ್ಷರಾಗಿ ಮುನಿ ರೆಡ್ಡಿ, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

15 ಸದಸ್ಯ ಬಲ ಹೊಂದಿರುವ ಹಂಡಿಗನಾಳ ಗ್ರಾಪಂ ವ್ಯಾಪ್ತಿಯಲ್ಲಿ 08 ಮಂದಿ ಜೆಡಿಎಸ್‌ ಬೆಂಬಲಿತರು ಜಯಶೀಲರಾಗಿದ್ದು, ವರದನಾಯಕನಹಳ್ಳಿಯ ಮುನಿರೆಡ್ಡಿ ಅಧ್ಯಕ್ಷರಾಗಿ, ಉಪಾಧ್ಯಕ್ಷೆಯಾಗಿ ಹನುಮಂತಪುರದ ವೆಂಕಟಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆ ಜೆಡಿಎಸ್‌ ಕಾರ್ಯಕರ್ತರು ಪಂಚಾಯತಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಚುನಾವಣಾಧಿಕಾರಿ ಶ್ರೀನಿವಾಸ್‌ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಮುನಿರಾಜು ಕಾರ್ಯನಿರ್ವಹಿಸಿದರು. ಪಿಡಿಒ ಅಂಜನ್‌ಕುಮಾರ್‌ ಸಾಥ್‌ ನೀಡಿದರು.

ತಾಪಂ ಅಧ್ಯಕ್ಷ ರಾಜಶೇಖರ್‌, ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ, ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್‌, ಅಬ್ಲೂಡು ಪುಷ್ಪರಾಜ್‌, ಅಪ್ಪೇಗೌಡನಹಳ್ಳಿ ತ್ಯಾಗರಾಜ್‌, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್‌ ಉಪಸ್ಥಿತರಿದ್ದರು.

ಸಾದಲಿ ಗ್ರಾಪಂ: ಸಾದಲಿ ಗ್ರಾಪಂ ಅಧ್ಯಕ್ಷರಾಗಿ ಅನುಸೂಯಮ್ಮ ಹಾಗೂ ಕೆ.ಹೆಚ್‌.ಗೋಪಾಲರೆಡ್ಡಿ ಆಯ್ಕೆ ಯಾಗಿದ್ದಾರೆ. ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ದಿನೇಶ್‌ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಪಿಡಿಒ ನರಸಿಂಹಮೂರ್ತಿ ಹಾಗೂ ನೂತನ ಸದಸ್ಯರು ಉಪಸ್ಥಿತರಿದ್ದರು..

ದಿಬ್ಬೂರಹಳ್ಳಿ: ಅಧ್ಯಕ್ಷರಾಗಿ ನಾಗರತ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ರಾಮಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಕುಮಾರ್‌ಕಾರ್ಯನಿರ್ವಹಿಸಿದರು. ಡಾ.ಧನಂಜಯಕುಮಾರ್‌, ಡಿಪಿ ನಾಗರಾಜ್‌, ಪಿಡಿಒ ಗೌಸಪೀರ್‌ ಉಪಸ್ಥಿತರಿದ್ದರು.

Advertisement

ದೇವರಮಳ್ಳೂರು: ಗ್ರಾಪಂ ಅಧ್ಯಕ್ಷರಾಗಿ ಕೆಂಪೇಗೌಡ ಹಾಗೂ ಉಪಾದ್ಯಕ್ಷರಾಗಿ ರತ್ನಮ್ಮ ಆಯ್ಕೆಯಾಗಿದ್ದಾರೆ. ಕುಂದಲಗುರ್ಕಿ ಗ್ರಾಪಂ ಅಧ್ಯಕ್ಷರಾಗಿ ಗಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ರತ್ನಮ್ಮ ಆಯ್ಕೆಯಾಗಿದ್ದಾರೆ.

ಎಂಜಿನಿಯರ್‌ ಗ್ರಾಪಂ ಅಧ್ಯಕ್ಷ  :

ತೀವ್ರ ಕುತೂಹಲ ಕೆರಳಿಸಿದ ತಾಲೂಕಿನ ಜಂಗಮಕೋಟೆ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಜೆ.ಆರ್‌. ಶ್ರೀನಿವಾಸ್‌ ಹಾಗೂ ಉಪಾಧ್ಯಕ್ಷರಾಗಿ ಎನ್‌.ಸುಮಿತ್ರಾ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಹಾಗೂ ಜೆಡಿಎಸ್‌ ಬೆಂಬಲಿತರಾಗಿ ಪ್ರೇಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಿಂದ ಸುಮಿತ್ರಾ ಹಾಗೂ ಜೆಡಿಎಸ್‌ ಪಕ್ಷದಿಂದನಾರಾಯಣಮ್ಮ ನಾಮಪತ್ರ ಸಲ್ಲಿಸಿದ್ದರು. ಜೆ.ಆರ್‌.ಶ್ರೀನಿವಾಸ್‌ ಅವರು 9 ಮತ ಪಡೆದು ಗೆಲುವುಸಾಧಿಸಿದರು. ಪ್ರೇಮ 8 ಮತ ಪಡೆದು ಪರಾಭವಗೊಂಡರು. ಸುಮಿತ್ರ 9 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಜೆಡಿಎಸ್‌ನ ನಾರಾಯಣಮ್ಮ 8 ಮತ ಗಳಿಸಿ ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ರಾಜೀವ್‌ ಕಾರ್ಯನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next