Advertisement

JDS: ಸಂಬಂಧ ಕೆಡಬಾರದೆಂದು ಸಹಿಸಿಕೊಂಡಿದ್ದೇನೆ: ಸಿ.ಟಿ. ರವಿ

10:50 PM Feb 03, 2024 | Team Udayavani |

ಹಾಸನ: ಸಂಬಂಧ ಕೆಡಬಾರದು ಅಂತ ನಾವು ನೀಲಕಂಠ ಆಗಿದ್ದೇವೆ, ವಿಷಕಂಠ ಆಗಿದ್ದೇವೆ. ಒಳ್ಳೆಯ ಉದ್ದೇಶಕ್ಕಾಗಿ ಸಂಬಂಧ ಕೆಡಬಾರದು ಅಂತ ಇದ್ದೀವಿ. ಈಗ ಎಲ್ಲವನ್ನೂ ಬಿಡಿಸಿ ಹೇಳಲು ಆಗುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಜೆಡಿಎಸ್‌ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಸೀತಾರಾಮಾಂಜನೇಯ ಸಭಾಭವನದಲ್ಲಿ ಶನಿವಾರ ಜರಗಿದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿ, ಏನು, ಹೇಗೆ, ಪಿತೂರಿ ನಡೆಯಿತು ಎಂಬುದು ಗೊತ್ತು. ಎಲ್ಲವನ್ನೂ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೇವೆ. ನಾವು ಅಷ್ಟು ಅಮಾಯಕರಲ್ಲ. ನಾವು ತತ್ವದ ಮೇಲೆ ನಂಬಿಕೆ ಇಟ್ಟವರು. ನಾವು ದೇಶ ಮೊದಲು ಅಂತ ಕೆಲಸ ಮಾಡುತ್ತಿದ್ದೇವೆ, ಮೋದಿ ಅವರ ಚಿತ್ರ ಕಣ್ಮುಂದೆ ಬರಬೇಕು. ಆ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿ ದ್ದೇವೆ ಎಂದು ಪರೋಕ್ಷ ವಾಗಿ ಜೆಡಿಎಸ್‌ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಚಿಕ್ಕಮಗಳೂರಿನಲ್ಲಿ ನಾನು ಹಾಗೂ ಹಾಸನದಲ್ಲಿ ಪ್ರೀತಂಗೌಡ ಕೆಲಸ ಮಾಡಿಯೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ, ನಮ್ಮನ್ನು ಕೆಲಸ ಮಾಡಿಲ್ಲ ಎಂದು ಯಾರೂ ದೂರುವುದಿಲ್ಲ. ನಮ್ಮಿಬ್ಬರ ವಿರುದ್ಧ ರಾಜಕೀಯ ಪಿತೂರಿ ಹೇಗೆ ನಡೆದಿದೆ ಅಂತ ಬಿಡಿಸಿ ಹೇಳಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next