Advertisement

ಜೆಡಿಎಸ್‌ ಜಿಲ್ಲಾ ಘಟಕ ಕಾರ್ಯಕರ್ತರ ಸಭೆ

04:35 PM May 23, 2017 | |

ಧಾರವಾಡ: ಜೆಡಿಎಸ್‌ ಪಕ್ಷವು ದೇಶಕ್ಕೆ ಉತ್ತಮ ಪ್ರಧಾನಿ ಹಾಗೂ ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿ ನೀಡಿದ ಪಕ್ಷವಿದ್ದು, ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಜೆಡಿಎಸ್‌ ಬೆಳೆಸಲು ಪ್ರತಿಯೊಬ್ಬ ಕಾರ್ಯಕರ್ತರು ಪಣ ತೊಡಬೇಕು ಎಂದು ಜೆಡಿಎಸ್‌ ಪಕ್ಷದ ಧಾರವಾಡ ಜಿಲ್ಲಾ ವೀಕ್ಷಕ ಮರಿಲಿಂಗೇಗೌಡ ಹೇಳಿದರು. 

Advertisement

ನಗರದ ನಿವೃತ್ತ ನೌಕರರ ಭವನದಲ್ಲಿ ಸೋಮವಾರ ನಡೆದ ಜೆಡಿಎಸ್‌ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿ ಜೆಡಿಎಸ್‌ ಭದ್ರಕೋಟೆಯನ್ನಾಗಿ ಮಾಡುವುದು ಎಚ್‌ .ಡಿ. ಕುಮಾರಸ್ವಾಮಿ ಕನಸಾಗಿದೆ.

ಹೀಗಾಗಿ ಜಿಲ್ಲೆಯ ಮನೆ-ಮನೆಗೆ ತೆರಳಿ ಕುಮಾರಸ್ವಾಮಿ ಮಾಡಿದ ಸಾಧನೆ ಕುರಿತು ಮನವರಕೆ ಮಾಡಲು ಕುಮಾರಣ್ಣ ಅಭಿಯಾನ ನಡೆಸಬೇಕಿದೆ ಎಂದರು. ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರದ ಗುದ್ದುಗೆ ಏರಲು ಬೂತ್‌ ಮಟ್ಟದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಹಗಲು-ರಾತ್ರಿ ದುಡಿಯಬೇಕು. 

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಆಡಳಿತ ನೀತಿಯಿಂದ ಜನರು ಸಂಕಟ ಎದುರಿಸುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಈ ಮೂಲಕ ಜೆಡಿಎಸ್‌ ಪಕ್ಷವು ಸ್ಪಷ್ಟ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜೆಡಿಎಸ್‌ ಮುಖಂಡ ಚಂದ್ರಶೇಖರ ಮಾತನಾಡಿ, ಕಾರ್ಯಕರ್ತರ ಒಗ್ಗಟ್ಟು ಪ್ರದರ್ಶಿಸಲು ಹಾಗೂ ಪಕ್ಷದ ಚಟುವಟಿಕೆಗಳನ್ನು ಉಳಿದ ಪಕ್ಷಗಳಿಗೆ ತೋರಿಸಲು  ಸಮಾವೇಶಗಳು ಉತ್ತಮ ವೇದಿಕೆ. ಚುನಾವಣೆ ಹತ್ತಿರವಿರುವದರಿಂದ ಸ್ಥಳೀಯ ಜೆಡಿಎಸ್‌ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಸಮಾವೇಶಗಳನ್ನು ಆಯೋಜಿಸಿ ಪಕ್ಷವನ್ನು ಸಂಘಟಿಸಬೇಕಿದೆ.

Advertisement

ಆದರೆ,ಕೆಲವರಲ್ಲಿ ಮೇಲು-ಕೀಳು ಭಾವನೆ ಮೂಡುತ್ತಿರುವುದು ಕಂಡು ಬಂದಿದೆ. ನಮ್ಮದು ಜಾತ್ಯತೀತ ಜನತಾದಳ. ಇಲ್ಲಿ ಜಾತಿಯ ಅಂಶವನ್ನು ಪರಿಗಣಿಸಲಾಗುವುದಿಲ್ಲ. ಕಾರ್ಯಕರ್ತರು ಉಳಿದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷದಲ್ಲಿ ಅಭಿವೃದ್ಧಿಗೆ ದುಡಿಯಬೇಕು ಎಂದರು. 

ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಮುಖಂಡರಾದ ಗುರುರಾಜ ಹುಣಸಿಮರದ, ಮುಕು ಸಂಗೊಳ್ಳಿ, ಸುರೇಶ ಹಿರೇಮಠ, ಪಾಲಿಕೆ  ಸದಸ್ಯರಾದ ರಾಜು ಅಂಭೋರೆ, ಶ್ರೀಕಾಂತ ಜಮ್ಮಿನಾಳ, ರಾಜಣ್ಣ ಕೊರವಿ, ಅಲ್ತಾಫ್‌ ಕಿತ್ತೂರ, ಬಸವರಾಜ ಭಜಂತ್ರಿ, ಪ್ರಕಾಶ ದೊಡವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next