ದೇವದುರ್ಗ: ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಶಿವುಕುಮಾರ ವಿರುದ್ಧ ಶಾಸಕ ಕೆ. ಶಿವನಗೌಡ ನಾಯಕ ಅಸಭ್ಯ ವರ್ತನೆ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿದೆ. ಇಂತಹ ಮಾತುಗಳು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಬುಡ್ಡನಗೌಡ ಜಾಗಟಗಲ್ ಹೇಳಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಸಕ ಅಧಿಕಾರಿಗೆ ಬೈದಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉನ್ನತ್ತ ಸ್ಥಾನದಲ್ಲಿದ್ದು, ಕೆಟ್ಟ ಪದಗಳು ಬಳಿಸಿದ್ದು ತಾಲೂಕಿನ ಮತದಾರರ ಗೌರವಕ್ಕೆ ಧಕ್ಕೆ ತಂದಿದೆ ಎಂದು ದೂರಿದರು.
ಕಾಲುವೆಗಳ ನವೀಕರಣ ವೇಳೆ ಭ್ರಷ್ಟಾಚಾರ ನಡೆದಿದ್ದೇ ಆದಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅದುಬಿಟ್ಟು ಮನಸ್ಸಿಗೆ ಬಂದಂತೆ ಕೆಟ್ಟ ಪದಗಳು ಆಡಿದ್ದು, ರಾಜಕೀಯ ಭವಿಷ್ಯವೇ ಕಳೆದು ಹೋಗುವ ಭೀತಿ ಹುಟ್ಟಿಸಿದೆ ಎಂದು ಹೇಳಿದರು. ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿ ನಡೆದು ಆರೇಳು ತಿಂಗಳಗಳು ಕಳೆಯುತ್ತಿದ್ದು, ಒಂದು ಬಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಶಾಸಕರು ಇಲ್ಲಿವರೆಗೆ ಮಾಡಿಲ್ಲ ಎಂದು ಕಿಡಿಕಾರಿದರು.
ಕರೆಮ್ಮ ಗೋಪಾಲಕೃಷ್ಣ ಮಾತನಾಡಿ, ಅಧಿಕಾರಿಯೊಬ್ಬರಿಗೆ ಬಳಸಿದಂತಹ ಕೆಟ್ಟು ಪದಗಳು ಶಾಸಕರಿಗೆ ಶೋಭೆ ತರಲ್ಲ. ಈ ಪ್ರಕರಣ ಇಲ್ಲಿಗೆ ಬಿಡಲ್ಲಾ. ಪ್ರಕರಣ ದಾಖಲು ಮಾಡದೇ ಹೋದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಶರಣಪ್ಪ ಬಳೆ, ಶೇಕ್‌ಮುನ್ನಾಭೈ, ಶಾಲಂ ಉದ್ದಾರ ಸೇರಿದಂತೆ ಇತರರು ಇದ್ದರು.