Advertisement

ತಿ.ನರಸೀಪುರ ಅಭಿವೃದ್ಧಿಗೆ ಮತ್ತೂಮ್ಮೆ ಬೆಂಬಲಿಸಿ

02:06 PM Apr 16, 2023 | Team Udayavani |

ತಿ.ನರಸೀಪುರ: ಬೃಹತ್‌ ಗಾತ್ರದ ಹಾರವನ್ನು ಹಾಕಿಸಿಕೊಳ್ಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ, ಮುಂದಿನ 24 ದಿನಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದು ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡಿದರೆ ಮುಂದಿನ 5 ವರ್ಷಗಳವರೆಗೂ ನಿಮ್ಮಗಳ ಜೊತೆಗೆ ಇರುವೆ ಎಂದು ಜೆಡಿಎಸ್‌ ಅಭ್ಯರ್ಥಿ ಎಂ.ಅಶ್ವಿ‌ನ್‌ ಕುಮಾರ್‌ ಹೇಳಿದರು.

Advertisement

ತಾಲ್ಲೂಕಿನ ಉಕ್ಕಲಗೆರೆ ಗ್ರಾಮದಲ್ಲಿಮತಯಾಚನೆ ಆಗಮಿಸಿ, ಕಾರ್ಯಕರ್ತರಿಂದ 350 ಕೆ.ಜಿ.ಯ ಬೃಹತ್‌ ಗಾತ್ರದ ಸೇಬಿನ ಹಾರ, ಪುಷ್ಪ ವೃಷ್ಟಿಯ ಅದ್ಧೂರಿ ಸ್ವಾಗತ ಸ್ವೀಕರಿಸಿ ಹಾಗೂ ಹಲವು ಕಾಂಗ್ರೆಸ್‌ ಮುಖಂಡರನ್ನು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಕಳೆದ ಚುನವಣೆಯಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರಿಂದ ಜನರ ಸೇವೆಯನ್ನು ಮಾಡಿದ್ದೇನೆ. ಮತ್ತೂಮ್ಮೆ ಬೆಂಬಲಿಸಿ ಆಯ್ಕೆ ಮಾಡಿದರೆ ಮಂದಿಯೂ ಜನರೊಂದಿಗೆ ಇದ್ದುಕೊಂಡು ಅಭಿವೃದ್ಧಿಗೆ ನಿಮ್ಮೊಂದಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಜಿಪಂ ಸದಸ್ಯನಾಗಿ ಗೆಲ್ಲುವಾಗಲೂ ಕೂಡ ಉಕ್ಕಲಗೆರೆ ಗ್ರಾಮ ನನಗೆ ರಾಜಕೀಯ ಶಕ್ತಿಯನ್ನು ನೀಡಿದೆ. ಕಳೆದ ಚುನಾವಣೆಯಲ್ಲಿಯೂ ಶಾಸಕರಾಗಲು ಹೆಚ್ಚಿನ ಬೆಂಬಲ ಸಿಕ್ಕಿದ್ದು, ಈಗಿನ ಚುನಾವಣೆಯಲ್ಲಿಯೂ ನನಗೆ ಸಂಪೂರ್ಣವಾದ ಬಲವನ್ನ ಗ್ರಾಮಸ್ಥರು ನೀಡಬೇಕು. ಗ್ರಾಮದಲ್ಲಿಯೇ ಇರುವ ಮಹಾನುಭಾವ ಮುಖಂಡರೊಬ್ಬರು ಶಾಸಕರಾದ ಆರಂಭದಿಂದಲೂ ನನ್ನನ್ನು ಹಲವು ಬಾರಿ ಟೀಕಿಸಿದ್ದಾರೆ. ಗ್ರಾಮದ ಜನಗಳ ಬೆಂಬಲ ಮತ್ತು ಕಾಂಗ್ರೆಸ್‌ ತಿಳಿಸಿ ಜೆಡಿಎಸ್‌ ಸೇರ್ಪಡೆಗೊಂಡು ನಮಗೆ ಧೈರ್ಯವನ್ನು ತುಂಬುತ್ತಿರುವ ನಿಮ್ಮಗಳ ಪ್ರೀತಿ ವಿಶ್ವಾಸವೇ ಅವರ ಟೀಕೆಗೆ ಪ್ರತ್ಯುತ್ತರವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಬಸವಣ್ಣ ಅವರಿಗೆ ಪರೋಕ್ಷವಾಗಿ ಅಶ್ವಿ‌ನ್‌ ಕುಮಾರ್‌ ಟಾಂಗ್‌ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಸ್‌.ಎನ್‌. ಸಿದ್ಧಾರ್ಥ, ಮಾಜಿ ಸದಸ್ಯ ಎಸ್‌.ವಿ.ಜಯಪಾಲ ಭರಣಿ, ಮಾಜಿ ಪ್ರಧಾನ ಬಿ.ಮಲ್ಲಿಕಾರ್ಜುನಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಹದೇವಯ್ಯ, ಪ್ರೀತಂ, ಹಾಲಿ ಸದಸ್ಯ ಕೆ.ಎನ್‌.ಅಶೋಕ್‌, ಎಸ್‌ ಡಿ ಎಂಸಿ ಮಾಜಿ ಅಧ್ಯಕ್ಷ ಓಂ ನಾಗೈಂದ್ರ, ಮುಖಂಡರಾದ ಎಂ.ಆರ್‌. ಶಿವಮೂರ್ತಿ, ಚನ್ನೇಗೌಡ, ಹೋಟೆಲ್‌ ಜಿ.ರಾಜಶೇಖರ್‌, ಶಿವು, ಜಿ.ಕುಮಾರ, ಸಿ.ಎನ್‌.ನವೀನ್‌ ಕುಮಾರ್‌, ಸತೀಶ್‌, ರಾಜೇಶ, ತಿರುಮಕೂಡಲು ಜಯರಾಮು, ದಶಕಂಠ, ರಾಜಣ್ಣ, ಕುಕ್ಕೂರೂ ಪ್ರಭು, ನಗರಜಮೂರ್ತಿ, ಕೆ.ಎಂ.ಶಿವಕುಮಾರ್‌, ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next