ಚಿಕ್ಕಬಳ್ಳಾಪುರ: ನಾನು ಯಾರಿಗೂ ಮಾರಾಟವಾಗಿಲ್ಲ. ನನ್ನ ಧ್ವನಿಯನ್ನು ತಿರುಚಿ ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ವೇಗೌಡ ಹೇಳಿದರು.
ನಗರದಲ್ಲಿ ಬುಧವಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾರಿಗೂ ಮಾರಾಟ ಆಗುವ ಮಗನಲ್ಲ ಎಂದರು.
ನಾನು ಮಾರಾಟ ಆಗುವನಾಗಿದ್ದರೆ 2008 ರಲ್ಲಿ ಬಿಜೆಪಿಯಿಂದ ನನಗೆ ಆಪರ್ ಬಂದಿತ್ತು. ಆಗಲೇ ಅಧಿಕಾರ ಆಸೆಗೆ ಇದಿದ್ದರೆ ಯಾವಾಗಲೋ ಮಂತ್ರಿ ಆಗಿರುತ್ತಿದ್ದೆ ಎಂದರು.
ಕೆ.ಪಿ.ಬಚ್ಚೇಗೌಡ ಕೊನೆ ಕ್ಷಣದಲ್ಲಿ ಸೈಲೆಂಟ್ ಆಗುತ್ತಾರೆಂದು ನನ್ನ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಏನು ಕ್ರಮ ವಹಿಸುತ್ತಿಲ್ಲ ಎಂದರು. ನಾನು ನೈತಿಕವಾಗಿ ಚುನಾವಣೆ ಎದುರಿಸುತ್ತಿರುವೆ. ಆದರೆ ಎದುರಾಳಿಗಳು ಸೋಲುವ ಭಯದಿಂದ ವಾಮಾ ಮಾರ್ಗದಲ್ಲಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಬಚ್ಚೇಗೌಡ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಣ್ಣೀರು ಹಾಕಿದ ಬಚ್ವೇಗೌಡ:
ಸುದ್ದಿಗೋಷ್ಡಿಯಲ್ಲಿ ಎದುರಾಳಿಗಳ ಪಿತೂರಿ ಬಗ್ಗೆ ಕಣ್ಞೀರು ಹಾಕಿದ ಬಚ್ಚೇಗೌಡ, ಪಾಪದ ಹಣದಿಂದ ಕೆಲವರು ಹಣದ ಸುರಿಮಳೆ ಮಾಡುತ್ತಿದ್ದಾರೆ. ಆದರೆ ನಾನು ಮತಭೀಕ್ಷೆ ಕೇಳುತ್ತಿರುವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಪಿ.ಮುನೇಗೌಡ, ಕೆ.ಸಿ.ರಾಜಾಕಾಂತ್, ರವಿಕುಮಾರ್, ಮುನಿರಾಜು, ಮಟಮಪ್ಪ, ಮಧು ಮತ್ತಿತರರು ಇದ್ದರು.