Advertisement
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ವೀಡಿಯೋ ವೈರಲ್ ಮಾಡಿದ್ದು ತಪ್ಪೇ. ಆದರೆ ಅವರನ್ನು ಪತ್ತೆ ಮಾಡುವುದು ಕಷ್ಟ. ಮೊದಲು ಪ್ರಜ್ವಲ್ ವಿರುದ್ಧ ತನಿಖೆ ಆಗಲಿ. ಹೀನ ಕೃತ್ಯ ಮಾಡಿರುವ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟನ್ನು ಕೇಂದ್ರ ಸರಕಾರ ಯಾಕೆ ರದ್ದುಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಇಡೀ ಘಟನೆಯನ್ನು ಖಂಡಿಸಿ ಬಿಜೆಪಿ ವರಿಷ್ಠರಾಗಲೀ, ಜೆಡಿಎಸ್ ವರಿಷ್ಠರಾಗಲೀ ಒಂದೇ ಒಂದು ಹೇಳಿಕೆ ಕೊಡುತ್ತಿಲ್ಲ. ಸಂತ್ರಸ್ತರ ಪರವಾಗಿ ಮಾತನಾಡುತ್ತಿಲ್ಲ. ತನಿಖೆ ನಡೆಸುತ್ತಿರುವ ಸರಕಾರಕ್ಕೂ ಬೆಂಬಲ ಕೊಡುತ್ತಿಲ್ಲ. ಮನೆ ಮಗ ಮಾಡಿದ್ದೆಲ್ಲವೂ ಸರಿ ಎನ್ನುವಂತೆ ಮಾತನಾಡುತ್ತಿದ್ದಾರೆ. ಟಿಕೆಟ್ ಕೊಡುವುದಕ್ಕೆ ಅಮಿತ್ ಶಾ ಒಪ್ಪಿರಲಿಲ್ಲ ಎಂದು ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ.
Related Articles
Advertisement
ಎಸ್‌ಐಟಿ ವರದಿ ಬಾರದೆ ಸಿಬಿಐ ತನಿಖೆ ಯಾಕೆ?ಚುನಾವಣೆ ಬಳಿಕ ನಮ್ಮ ಸರಕಾರ ಪತನ ಆಗುತ್ತದೆ, ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಪದೇಪದೆ ಹೇಳಲಾಗುತ್ತಿದೆ. ಎಸ್‌ಐಟಿ ಪ್ರಾಥಮಿಕ ವರದಿಯೇ ಬಾರದೆ ಸಿಬಿಐಗೆ ಕೇಳುತ್ತಿರುವುದೇಕೆ? ಸುರಕ್ಷಿತವಾಗಿರಲು ಕೇಳುತ್ತಿದ್ದೀರಾ ಎಂದು ಪ್ರಿಯಾಂಕ್ ಪ್ರಶ್ನಿಸಿದರು. ಸುಳ್ಳು ಪ್ರಕರಣದಲ್ಲಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಬಂಧಿಸಿದಂತೆ ಡಿ.ಕೆ.ಶಿ.ಯರನ್ನೂ ಬಂಧಿಸಲಾಗುತ್ತದೆಯೇ? ಇದಕ್ಕಾಗಿ ಏನು ಸಂಚು ನಡೆಯುತ್ತಿದೆ? ಬ್ಲೂಕಾರ್ನರ್ ನೋಟಿಸ್ ಜಾರಿಯಾದರೂ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಏನು ಸಮಸ್ಯೆ ಇದೆ ಎಂದು ಪ್ರಶ್ನಿಸಿದರು.