Advertisement

JDS; ಚುನಾವಣಾ ರಾಜಕಾರಣದಿಂದ ಕೆಲ ದಿನಗಳ ಕಾಲ ದೂರ : ನಿಖಿಲ್‌ ಕುಮಾರಸ್ವಾಮಿ

09:52 PM Sep 17, 2023 | Team Udayavani |

ಬೀದರ್: ಚಲನಚಿತ್ರದ ಚಿತ್ರೀಕರಣ ಪ್ರಾರಂಭವಾಗಿರುವುದರಿಂದ ಕೆಲ‌ ದಿನಗಳ ಕಾಲ ಚುನಾವಣಾ ರಾಜಕಾರಣದಿಂದ ಕೆಲ ದಿನಗಳ ಕಾಲ ದೂರವುಳಿಯುವ ತೀರ್ಮಾನ ಮಾಡಿದ್ದೇನೆ ಎಂದು ಜೆಡಿಎಸ್‌ ನಾಯಕ, ಚಿತ್ರನಟ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Advertisement

ಖಾಸಗಿ ಕಾರ್ಯಕ್ರಮದಲ್ಲಿ‌ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಭೇಟಿಯಾದ ಮಾಧ್ಯಮದವರ ಜತೆ ಮಾತನಾಡಿ, ಸಧ್ಯಕ್ಕೆ ಚಲನಚಿತ್ರದ ಶೂಟಿಂಗ್‌ ಆರಂಭವಾಗಿದೆ ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವದಾಗಲಿ ಚುನಾವಣಾ ರಾಜಕಾರಣದಲ್ಲಿ ಇಳಿಯುವದಾಗಲಿ ಕಷ್ಟದ ಕೆಲಸ. ಹಾಗಾಗಿ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ತಿಳಿಸಿದರು.

ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಕುರಿತಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಬಲವಾಗಿದ್ದು, ಅಲ್ಲಿ ಬಿಜೆಪಿ ನಮಗೆ ಸಹಕರಿಸಲಿ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದ್ದು ಅಲ್ಲಿ ನಾವು ಅವರಿಗೆ ಸಹಕರಿಸುವ ಮಾತುಗಳನ್ನು ಮಾತ್ರ ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಆಡಿದ್ದಾರೆ ಹೊರತು ಮೈತ್ರಿ ಬಗ್ಗೆ ಹೇಳಿಲ್ಲ. ಏನಿದ್ದರೂ ದೊಡ್ಡವರು(ವರಿಷ್ಠರು ) ನಿರ್ಧಾರ ಕೈಗೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next