Advertisement

ಖಾಸಗಿ ಹೊಟೇಲ್‌ಗೆ ಶಿಫ್ಟ್ ಆದ ಜೆಡಿಎಸ್‌ ಚಟುವಟಿಕೆ 

06:00 AM May 17, 2018 | Team Udayavani |

ಬೆಂಗಳೂರು: ಸರಕಾರ ರಚಿಸಲು ಮುಂದಾಗಿರುವ ಜೆಡಿಎಸ್‌ನ ಇಡೀ ಚಟುವಟಿಕೆಗಳು ಬುಧವಾರ ನಗರದ ಖಾಸಗಿ ಹೊಟೇಲ್‌ಗೆ ಸ್ಥಳಾಂತರಗೊಂಡಿತ್ತು. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಡೀ ದಿನ ಬಿರುಸಿನ ಚಟುವಟಿಕೆಗಳು ನಡೆದವು. ಅದಕ್ಕಾಗಿ ತಾರಾ ಹೊಟೇಲ್‌ನ ಎರಡನೇ ಮಹಡಿಯನ್ನು ಕಾಯ್ದಿರಿಸಲಾಗಿತ್ತು.

Advertisement

ಜೆಡಿಎಸ್‌ನಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿ ಬೆಳಗ್ಗೆಯೇ ಹೊಟೇಲ್‌ ಸೇರಿಕೊಂಡರು. ಬೆಳಗ್ಗೆ 9 ಗಂಟೆ ಸುಮಾರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅಲ್ಲಿಗೆ ಆಗಮಿಸಿ 9.30ಕ್ಕೆ ನೂತನ ಸದಸ್ಯರೊಂದಿಗೆ ಸಭೆ ನಡೆಸಿದರು.

ಕೈ ನಾಯಕರ ಆಗಮನ 
ಮಧ್ಯಾಹ್ನ 1 ಗಂಟೆ ವೇಳೆಗೆ ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಅವರು ಹೊಟೇಲ್‌ಗೆ ಆಗಮಿಸಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಗಮಿಸಿ ಕುಮಾರಸ್ವಾಮಿ ಅವರೊಂದಿಗೆ ಸುದೀರ್ಘ‌ ಸಮಾಲೋಚನೆ ನಡೆಸಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಗಮನಕ್ಕೆ ತಂದರು.

ಇದಾದ ಬಳಿಕ ಮತ್ತೂಮ್ಮೆ ಜೆಡಿಎಸ್‌ ಸದಸ್ಯರೊಂದಿಗೆ ಚರ್ಚೆ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕರೊಡಗೂಡಿ ರಾಜ್ಯಪಾಲರನ್ನು ಭೇಟಿಯಾದರು. 

Advertisement

Udayavani is now on Telegram. Click here to join our channel and stay updated with the latest news.

Next