ದಿನ ಬೆಳಗಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋಗಳದ್ದೇ ಸದ್ದು, ಒಂದಕ್ಕಿಂತ ಒಂದು ಭಿನ್ನ ಕೆಲವು ಮನಸ್ಸಿಗೆ ಮುದ ನೀಡಿದರೆ ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತದೆ.
ನಾವಿಂದು ಹೇಳ ಹೊರಟಿರುವ ವಿಚಾರವು ಸ್ವಲ್ಪ ಆಶ್ಚರ್ಯಕರವಾಗಿದೆ ಸಾಮಾನ್ಯವಾಗಿ ಈ ರೀತಿ ಬೇರೆ ಯಾರಾದರೂ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಾಗಿ ವಾಹನದ ಜೊತೆ ಅವರು ಜೈಲುಕಂಬಿ ಎನಿಸುವ ಸನ್ನಿವೇಶ ಆದರೆ ಇಲ್ಲಿ ಆ ರೀತಿ ಮಾತ್ರ ಆಗಲಿಲ್ಲ.
ಕೆಲವರು ರಸ್ತೆಯ ಮೇಲೆಯೇ ವಾಹನ ಸವಾರಿ ಮಾಡುವಾಗ ಅಡ್ಡಾದಿಡ್ಡಿಯಾಗಿ ಸಂಚರಿಸಿ ಪಾದಚಾರಿಗಳ ಜೊತೆ ಇತರ ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡುತ್ತಾರೆ ಆದರೆ ಇಲ್ಲೊಬ್ಬ ವ್ಯಕ್ತಿ ರೈಲ್ವೆ ಹಳಿ ಮೇಲೆ ಅದೆಷ್ಟು ನಾಜೂಕಾಗಿ ಜೆಸಿಬಿ ಯಂತ್ರವನ್ನು ಚಲಾಯಿಸಿದ್ದಾನೆ ಎಂದು ನೋಡಿದರೆ ನಾವು ನಂಬಲು ಸಾಧ್ಯವಿಲ್ಲ ಅನ್ನುವ ಮಟ್ಟಕ್ಕೆ ಚಾಲನೆ ಮಾಡಿದ್ದಾನೆ ಇರುವ ಸಣ್ಣ ಹಳಿಯ ಮೇಲೆ ಜೆಸಿಬಿಯ ನಾಲ್ಕು ಚಕ್ರಗಳು ನಿಲ್ಲುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ.
ಅಂದಹಾಗೆ ಈ ಘಟನೆ ನಡೆದಿರುವುದು ಜೋಧ್‌ಪುರದ ಲುನಿ ರೈಲ್ವೇ ಜಂಕ್ಷನ್‌ನಲ್ಲಿ ಹಳಿ ಮಟ್ಟವನ್ನು ಹೆಚ್ಚಿಸಲು ಮತ್ತು ರೈಲು ಮಾರ್ಗವನ್ನು ಬದಲಾಯಿಸಲು ಜೆಸಿಬಿಯನ್ನು ಬಳಸಲಾಗಿತ್ತು. ಈ ಸಂದರ್ಭದಲ್ಲಿ ರೈಲ್ವೇ ಅಧಿಕಾರಿಗಳು ಹಳಿಗಳ ಮೇಲೆ ಜೆಸಿಬಿ ಹೋಗಲು ಅನುವು ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಆ ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಜೆಸಿಬಿ ಓಡಿದೆ.
ಆದರೆ ಜೆಸಿಬಿ ಚಾಲಕ ಅದೆಷ್ಟು ಪರಿಣತಿ ಹೊಂದಿದ್ದ ಎಂದರೆ ಅಷ್ಟು ಸಪುರದ ಹಳಿಯ ಮೇಲೆ ಬ್ಯಾಲೆನ್ಸ್ ತಪ್ಪದೆ ಸಲೀಸಾಗಿ ಜೆಸಿಬಿ ಯಂತ್ರ ಚಲಾಯಿಸಿದ್ದುದನ್ನು ಕಂಡು ಅಲ್ಲಿದ್ದವರು ಆಶ್ಚರ್ಯಚಕಿತರಾಗಿದ್ದಾರೆ ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.