Advertisement
ವಿದೂಷಿ ಜಯಶ್ರೀ ರಮೇಶ್ ರವರು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದವರು ಈ ಹೀಗಾಗಿ ಸಂಗೀತ ಕಲಿಯುವವರಿಗೆ ಜನ್ಮತಹ ಒಲಿದು ಬಂದಿದೆ ಎಂದರೆ ತಪ್ಪಾಗಲಾರದು. ಜಯಶ್ರೀ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ರಾಮ ಮೂರ್ತಿ ಅವರ ಹಿರಿಯ ಪುತ್ರಿ. ಇವರಿಗೆ ಸಂಗೀತದ ಬಗ್ಗೆ ಆಸಕ್ತಿ ಹಾಗೂ ಪ್ರೇರಣೆ ನೀಡಿದವರು ಇವರ ತಂದೆ ರಾಮಮೂರ್ತಿ ರವರು ಇವರ ತಂದೆ ಪ್ರಸಿದ್ಧ ಮೃದಂಗ ವಾದಕರು ಹಾಗೂ ನಿವೃತ್ತಿ ಸಹಾಯಕ ಮುಖ್ಯ ಅಂಚೆ ಪಾಲಕರು .
ತ್ಯಾಗರಾಜ. ಪುರಂದರದಾಸರ .ಆರಾಧನೆಗಳಿಂದ ಅನೇಕ ಸಂಗೀತ ಕಚೇರಿಗಳನ್ನು ನಾಡಿನಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ನೀಡಿರುತ್ತಾರೆ. ಇವರ ಸಂಗೀತ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಇದರಲ್ಲಿ ಸ್ವರ್ಣಕಲಾಶ್ರೀ ಎಂಬ ಬಿರುದು ಕೂಡ ಬಂದಿದೆ. ಸಂಗೀತ ಕಲಾವಿದರಾಗಿ ಯೇ ಅಲ್ಲದೆ ಸಂಗೀತ ಶಿಕ್ಷಕಿಯಾಗಿ ಮಾರ್ಗದರ್ಶಕರಾಗಿ ಅನೇಕ ಶಿಕ್ಷಕರನ್ನು ತಯಾರು ಮಾಡಿದ್ದಾರೆ ಹಾಗೂ ಮಾಡುತ್ತಲೇ ಇದ್ದಾರೆ.
Related Articles
Advertisement