Advertisement
ಅ. 5ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ನಡೆದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಬಹಿರಂಗ ಅಧಿವೇಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನನ್ನ ಮೇಲಿನ ಪ್ರೀತಿ, ಗೌರವ, ಅಭಿಮಾನದಿಂದ ಇದೀಗ ನನ್ನನ್ನು ಅಧ್ಯಕ್ಷನನ್ನಾಗಿ ಪುನಃ ಸರ್ವಾನುಮತದಿಂದ ಆಯ್ಕೆ ಮಾಡಿದ್ದೀರಿ. ಅದಕ್ಕೆ ನಿಮಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಅವಿಭಜಿತ ಜಿಲ್ಲೆಗಳ ಅಭಿವೃದ್ಧಿಗಾಗಿ ನಾನು ಸದಾ ಪ್ರಯತ್ನಶೀಲನಾಗಿರುತ್ತೇನೆ. ಅದಕ್ಕೆ ನನಗೆ ಎಲ್ಲ ಜಾತೀಯ ಸಂಘ-ಸಂಸ್ಥೆಗಳ ಬೆಂಬಲದ ಅಗತ್ಯವಿದೆ. ಎಲ್ಲರ ಸಹಕಾರ ದೊರೆತರೆ ನಮ್ಮ ಜಿಲ್ಲೆಯು ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದರು.ಇದೇ ಸಂದರ್ಭದಲ್ಲಿ ಅಧಿವೇಶನದಲ್ಲಿ ಭಾಗ ವಹಿಸಿದ್ದ ಮುಂಬಯಿಯ ವಿವಿಧ ಜಾತಿಯ ಸಂಘಟನೆಗಳ ಅಧ್ಯಕ್ಷರನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
Related Articles
Advertisement
ಸಮಿತಿಯ ನಿರ್ಗಮನ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಸ್ವಾಗತಿಸಿದರು. ಎಲ್. ವಿ. ಅಮೀನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರುಗಳಾದ ಜಗದೀಶ್ ಅಧಿಕಾರಿ, ರಾಮಚಂದ್ರ ಬೆಳ್ತಂಗಡಿ, ಫೆಲಿಕ್ಸ್ ಡಿಸೋಜಾ, ಕಾರ್ಯದರ್ಶಿ ಸುರೇಂದ್ರ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಜಾತೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಬಿಎಸ್‌ಕೆಬಿ ಅಸೋಸಿಯೇಶನ್‌ನ ಉಪಾಧ್ಯಕ್ಷ ವಾಮನ್ ಹೊಳ್ಳ, ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್. ಬಂಗೇರ, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಗಾಣಿಗ ಸಮಾಜದ ಅಧ್ಯಕ್ಷ ರಾಮಚಂದ್ರ ಗಾಣಿಗ, ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಶೆಟ್ಟಿ, ಹೆಜಮಾಡಿ ಮೊಗವೀರ ಸಭಾದ ಅಧ್ಯಕ್ಷ ಕರುಣಾಕರ ಹೆಜ್ಮಾಡಿ, ಶಾಫಿ ವೆಲ್ಫೆàರ್ ಅಸೋಸಿಯೇಶನ್ ಇದರ ಮೊಯಿದೀನ್ ಮುಂಡ್ಕೂರು, ಮಹಾರಾಷ್ಟ್ರ ಒಕ್ಕಲಿಗರ ಸಂಘದ ಅಧ್ಯಕ್ಷ ಜಿತೇಂದ್ರ ಗೌಡ, ಭಂಡಾರಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ, ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಆಂಟೋನಿ ಸಿಕ್ವೇರ, ಅಖೀಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಮುನಿರಾಜ್ ಜೈನ್, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ರಾಮರಾಜ ಕ್ಷತ್ರಿಯ ಸಂಘದ ಗಣಪತಿ ಬಿ., ವಿಶ್ವಕರ್ಮ ಅಸೋಸಿಯೇಶನ್‌ನ ಅಧ್ಯಕ್ಷ ಸದಾನಂದ ಆಚಾರ್ಯ, ಬಿಎಸ್‌ಕೆಬಿ ವಡಾಲದ ಕಮಲಾಕ್ಷ ಸರಾಫ್, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಮೊದಲಾದವರು ಮಾತನಾಡಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಚಂದ್ರಶೇಖರ ಬೆಳ್ಚಡ ಅವರು ಕಾರ್ಯಕ್ರಮ ನಿರ್ವಹಿಸಿದರು. ಜಿ. ಟಿ. ಆಚಾರ್ಯ ಅವರು ವಂದಿಸಿದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಳೆದ ಹದಿನೇಳು ವರ್ಷಗಳಿಂದ ಪರಿಸರ ಪ್ರೇಮಿ ಸಮಿತಿಯು ಮಾಡುತ್ತಿರುವ ಕೆಲಸವನ್ನು ಕಣ್ಣಾರೆ ಕಂಡಿದ್ದೇನೆ. ಜಯಕೃಷ್ಣ ಶೆಟ್ಟಿ ಅವರು ಜಾರ್ಜ್ ಫೆರ್ನಾಂಡಿಸ್ ಅವರ ಸಹಕಾರದೊಂದಿಗೆ ಹಲವು ಅರ್ಥಪೂರ್ಣ ಕಾರ್ಯಯೋಜನೆಗಳನ್ನು ತಂದಿರುವುದು ಅಭಿನಂದನೀಯ. ಅವರ ಮುಂದಿನ ಯೋಜನೆಗಳಿಗೆ ಎಲ್ಲಾ ಸಂಘಟನೆಗಳು ಪ್ರೋತ್ಸಾಹಿಸಬೇಕು. ಪ್ರಸ್ತುತ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿರುವುದು ಸಮಿತಿಗೆ ಮತ್ತಷ್ಟು ಬಲಬಂದಂತಾಗಿದೆ. ಅವರಿಗೆ ಶುಭವಾಗಲಿ.ಎಂ. ಡಿ. ಶೆಟ್ಟಿ , ಹಿರಿಯ ಕನ್ನಡಿಗರು ಚಿತ್ರ-ವರದಿ:ಸುಭಾಷ್ ಶಿರಿಯಾ