Advertisement

ಜಯಶ್ರೀ ಈಗ ಅಧಿಕ ಪ್ರಸಂಗಿ

11:15 AM Dec 05, 2018 | Team Udayavani |

“ಪುಟ್ಟರಾಜು ಲವರ್‌ ಆಫ್ ಶಶಿಕಲಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನವನಟಿಯಾಗಿ ಪರಿಚಯವಾದ ಜಯಶ್ರೀ ಆರಾಧ್ಯ ಸದ್ಯ “ಅಧಿಕ ಪ್ರಸಂಗಿ’ ಎಂಬ ಹೊಸಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಜಯಶ್ರೀ ಅವರದ್ದು ಮೋಸಿನ್‌ ಎನ್ನುವ ಹೆಸರಿನ ಮಾಡ್ರನ್‌ ಮುಸ್ಲಿಂ ಹುಡುಗಿಯ ಪಾತ್ರವಂತೆ. ಚಿತ್ರದಲ್ಲಿ ಎರಡು ಶೇಡ್‌ನ‌ ಪಾತ್ರವಿದ್ದು ಒಂದು ಶೇಡ್‌ನ‌ಲ್ಲಿ ಕಾಲೇಜ್‌ ಹುಡುಗಿಯಾಗಿ ಮತ್ತೂಂದು ಶೇಡ್‌ನ‌ಲ್ಲಿ ಮದುವೆಯಾದ ಹುಡುಗಿಯ ಪಾತ್ರದಲ್ಲಿ ಜಯಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. 

Advertisement

ಇನ್ನು ಈ ಚಿತ್ರದಲ್ಲಿ ರಂಗಾಯಣದ ಪ್ರತಿಭೆ ಸುಕೇತ್‌ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ವಿಜಯ್‌ ಚೆಂಡೂರ್‌, ಗಿರೀಶ್‌, ರಾಜಶೇಖರ್‌ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಕೆಲ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ಸಂಭಾಷಣೆಗಾರನಾಗಿ ಕೆಲಸ ಮಾಡಿರುವ ರಾಕೇಶ್‌ ಸೋಮ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕೆ.ವೈ ಶಿವಪುತ್ರ ಛಾಯಾಗ್ರಹಣವಿದೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವೀರೇಶ್‌ ಕಂಬ್ಲಿ ಸಂಗೀತ ಸಂಯೋಜನೆಯಿದೆ. ಇತ್ತೀಚೆಗಷ್ಟೆ ಸರಳವಾಗಿ ಚಿತ್ರದ ಮುಹೂರ್ತವನ್ನು ಆಚರಿಸಿಕೊಂಡಿರುವ ಅಧಿಕ ಪ್ರಸಂಗಿ ಚಿತ್ರತಂಡ, ಸದ್ಯ ಚಿತ್ರೀಕರಣದಲ್ಲಿ ನಿರತವಾಗಿದೆ. ಬೆಂಗಳೂರು, ಸಕಲೇಶಪುರ, ಕಾಶ್ಮೀರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. ಮುಂದಿನ ಮಾರ್ಚ್‌-ಏಪ್ರಿಲ್‌ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next