Advertisement

‘ಜಂಬೂನದಿ ಪವಿತ್ರ  ಕ್ಷೇತ್ರಕ್ಕೆ ಪ್ರಚಾರಬೇಕಿದೆ’

01:45 AM Dec 06, 2018 | Karthik A |

ಬಸ್ರೂರು: ಜಪ್ತಿ ಗ್ರಾಮದ ಶ್ರೀ ಜಂಬೂಕೇಶ್ವರ ದೇವಸ್ಥಾನದಲ್ಲಿ ಉತ್ತರ ಕ್ರಿಯಾದಿಗಳನ್ನು ನೆರವೇರಿಸಲು ಅನುಕೂಲವಾಗುವಂತೆ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಪೈತೃಕ ಮಂದಿರ ( ಪಿತೃ ಶಾಲೆ)ವನ್ನು ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು  ಡಿ. 2ರಂದು ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು, ಪವಿತ್ರ ಕ್ಷೇತ್ರವಾದ ಜಂಬೂನದಿಯ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಪೈತೃಕ ಮಂದಿರ ಈ ಭಾಗದ ಜನರಿಗಷ್ಟೆ ಅಲ್ಲದೆ ದೂರದವರಿಗೂ ಅಗತ್ಯವಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಜಪ್ತಿ ಗ್ರಾಮದ ಜಂಬೂ ನದಿಯ ತಟದಲ್ಲಿರುವ ಶ್ರೀ ಜಂಬೂಕೇಶ್ವರ ದೇವಸ್ಥಾನವನ್ನು ಈಗಾಗಲೇ  ಶಿಲಾಮಯ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಉತ್ತರ ಕ್ರಿಯಾದಿಗಳನ್ನು ನೆರವೇರಿಸಲು ಈ ಮಂದಿರ ಆತ್ಯಂತ ಸಹಕಾರಿ. ಈ ಕ್ಷೇತ್ರಕ್ಕೆ ಇನ್ನಷ್ಟು ಪ್ರಚಾರ ಬೇಕಾಗಿದೆ. ಸದ್ಯದಲ್ಲೇ ಇಲ್ಲಿಗೆ ಬರುವ ರಸ್ತೆಯೂ ದುರಸ್ತಿಯಾಗಬಹುದು. ಇಂದು ಇಲ್ಲಿ ನಿರ್ಮಿಸಿರುವ ಭಾಗೀರಥಿ ಘಾಟ್‌ ನಲ್ಲಿ ಭಾಗೀರತಿ ಆರತಿಯನ್ನು ನೆರವೇರಿಸಲಾಗುವುದು ಎಂದರು. ನಂತರ ವಿದ್ವಾನ್‌ ಮಾಧವ ಅಡಿಗ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು. ಕೆ. ಜಯಕರ ಶೆಟ್ಟಿ ಅವರು ಸಮಾರೋಪ ಭಾಷಣ ಮಾಡಿದರು.

ಡಾ| ಬಿ. ವಿ. ಉಡುಪ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸತ್ಯನಾರಾಯಣ ಉಡುಪ ನಿರೂಪಿಸಿ, ವಂದಿಸಿದರು. ಅನಂತರ ಭಾಗೀರಥಿ ಆರತಿ  ಮತ್ತು ಗಂಗಾ ಪೂಜೆಯನ್ನು ವೇ| ಮೂ| ಚೆನ್ನಕೇಶವ ಭಟ್‌ಆನಗಳ್ಳಿ ಮತ್ತು ತಂಡದವರು ನೆರವೇರಿಸಿದರು. ಬಳಿಕ ಸಾರ್ವಜನಿಕರಿಂದ ಗಂಗೆಗೆ ದೀಪ ಸಮರ್ಪಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next