Advertisement
ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ತಿಳಿಸಲು ಸೂಚಿಸಲಾಗಿದೆ. ಮಹಾತ್ಮರನ್ನು ಜಾತಿಗೆ ಸೀಮಿತಮಾಡಿದ್ದು, ಮಹಾತ್ಮರನ್ನು ಮಹಾತ್ಮರಾಗಿಯೇ ಬಿಡಬೇಕು. ಜಾತಿಗೆ ಸೀಮಿತ ಮಾಡಬಾರದು ಎಂದರು.
Related Articles
Advertisement
ಖಾಲಿ ಹುದ್ದೆ ಭರ್ತಿಗೆ ಕ್ರಮ: ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.81.64 ರಷ್ಟು ಹುದ್ದೆಗಳು ಖಾಲಿ ಇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.61 ರಷ್ಟು ಹುದ್ದೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹಿಂದಿಯಿಂದ ಶಾಲೆ ಮುಚ್ಚಿಲ್ಲ: ಪ್ರಾದೇಶಿಕ ಭಾಷೆಯ ಶಾಲೆಗಳು ಮುಚ್ಚಲು ಹಿಂದಿ ಕಾರಣವಲ್ಲ. ಕೆಲವರು ಹಿಂದಿ ವಿರೋಧಿಸುವುದೇ ಭಾಷಾಭಿಮಾನ ಎಂದು ಕೊಂಡಿದ್ದಾರೆ. ಅದು ತಪ್ಪು. ಇಂದಿನ ಮನೆಗಳಲ್ಲಿ ಮಾತೃಭಾಷೆ ಕಾಣೆಯಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಯಾವ ಭಾಷೆಯಿಂದಲೂ ಕನ್ನಡಕ್ಕೆ ಕುಂದುಂಟಾಗದಂತೆ ನೋಡಿಕೊಳ್ಳುವ ಕೆಲಸ ನಮ್ಮದು.
ಹಿಂದಿ ಭಾಷೆಯಿಂದ ಪ್ರಾದೇಶಿಕ ಮತ್ತು ಮಾತೃ ಭಾಷೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ಜ್ಞಾನ ಪೀಠ ಪ್ರಶಸ್ತಿ ಪಡೆದ ನಮ್ಮ ಕನ್ನಡ ಮತ್ತು ಸಂಸ್ಕೃತಿಯ ವಾರಸುದಾರನಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಉಪಸ್ಥಿತರಿದ್ದರು.
ಹಿಂದಿನ ಸರ್ಕಾರ ಮಹಿಷಾ ದಸರೆಗೆ ಅವಕಾಶ ನೀಡಿದ್ದ ತಪ್ಪು: ನಮ್ಮ ಮೂಲ ಸಂಸ್ಕೃತಿಯನ್ನು, ಹಿಂದಿನಿಂದ ನಡೆದುಕೊಂಡು ಬಂದಿರುವ ಹಬ್ಬ ಆಚರಣೆಗಳನ್ನು ತಡೆಯಲು ಪೂರ್ವಗ್ರಹ ಪೀಡಿತ ಮನಸುಗಳು, ದುರುದ್ದೇಶ ಪೂರಿತ ವ್ಯಕ್ತಿತ್ವಗಳ ಜೊತೆ, ವಿತಂಡವಾದಿಗಳ ಜೊತೆ ನಾವು ಬಹಿರಂಗ ಚರ್ಚೆ ಮಾಡುವುದು ಅನವಶ್ಯಕ ಎಂದು ಪ್ರವಾಸೋದ್ಯಮ ಸಚಿವ ಸಿ .ಟಿ ರವಿ ತಿಳಿಸಿದರು.
ಹಿಂದಿನ ಸರ್ಕಾರದಲ್ಲಿ ಮಹಿಷಾ ದಸರಾ ಮಾಡಲು ಅವಕಾಶ ಕೊಟ್ಟಿದ್ದೆ ತಪ್ಪು. ಅದೊಂದು ದಾರಿ ತಪ್ಪಿಸುವ ಉದ್ದೇಶದಿಂದ ಪೂರ್ವಗ್ರಹ ಪೀಡಿತ ಹಾಗೂ ದುರುದ್ದೇಶ ಪೂರಿತ ವ್ಯಕ್ತಿತ್ವಗಳು ನಮ್ಮ ಸಂಸ್ಕೃತಿ ಮತ್ತು ಶಾಂತಿಗೆ ಭಂಗ ತರುವುದಕ್ಕೆ ಮಾಡುತ್ತಿರುವ ಕುತಂತ್ರ ಎಂದ ಸಿ.ಟಿ. ರವಿ, ಸಂಸದನಾಗಿ ಪ್ರತಾಪ್ ಸಿಂಹ ಆ ಪೊಲೀಸರ ಮೇಲೆ ಬಳಸಿದ ಭಾಷೆ ಸರಿಯಲ್ಲ ಎಂದು ಹೇಳಿದರು.
ಪಕ್ಷ ಬೆಳೆಸಿ ರಾಜಕೀಯ ಪ್ರಾತಿನಿಧ್ಯ ಕೇಳಿ: ಕೆಲವರು ಬೇರೆ ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿ, ಇನ್ನೊಂದು ಬ್ಯಾಂಕ್‌ನಲ್ಲಿ ಹಣ ಕೇಳಲು ಹೋಗುತ್ತಾರೆ. ಡೆಪಾಸಿಟ್ ಮಾಡಿದಲ್ಲಿ ಆ ಬ್ಯಾಂಕ್‌ನಲ್ಲಿ ಹಣ ಪಡೆಯಬೇಕು. ಮಂಡ್ಯದಲ್ಲಿ ಒಂದು ಸೀಟನ್ನೂ° ಗೆಲ್ಲಿಸಿಲ್ಲ. ಆದರೆ, ಮಂಡ್ಯ ಮೂಲದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯ ಪ್ರಾತಿನಿಧ್ಯಕ್ಕೆ ರಾಜಕೀಯ ನೇತೃತ್ವ ಬೇಕಾಗುತ್ತದೆ. ಈ ಭಾಗದ ಜನರು ಬಿಜೆಪಿಯನ್ನು ಇನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು. ಅಭಿವೃದ್ಧಿಯಲ್ಲಿ ಯಾವ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ಎಲ್ಲಾ ರಾಜ್ಯಗಳನ್ನು ಸಮನಾಗಿ ನೋಡುತ್ತೇವೆ ಎಂದರು.