Advertisement

ಸರ್ಕಾರದಿಂದ ಜಯಂತಿ ಆಚರಣೆ ಸಲ್ಲ: ಪಂಡಿತಾರಾಧ್ಯ ಶ್ರೀ

12:34 PM Oct 08, 2017 | Team Udayavani |

ದಾವಣಗೆರೆ: ಸರ್ಕಾರ ಸಾಧಕರು, ದಾರ್ಶನಿಕರು, ಮಹಾನ್‌ ಪುರುಷರ ಜಯಂತಿ ಆಚರಣೆ ಮನೋಧೋರಣೆ ಬಿಟ್ಟು, ಸಾರ್ವಜನಿಕರೇ  ಆಚರಣೆ ಮಾಡುವಂತಾಗಬೇಕೆಂದು
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಗಾಂಧಿನಗರದ ರುದ್ರಭೂಮಿಯಲ್ಲಿ ಶನಿವಾರ ಡಾ| ಬಿ.ಆರ್‌. ಅಂಬೇಡ್ಕರ್‌ ಸಂಘ, ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಯುವ ಸೇನೆ ಮತ್ತು ಗಾಂಧಿನಗರದ ಮುಖಂಡರ ಆಶ್ರಯದಲ್ಲಿ ಹಮ್ಮಿಕೊಂಡ 4ನೇ ವರ್ಷದ ಸತ್ಯ ಹರಿಶ್ಚಂದ್ರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರೇ ಮಹಾನ್‌ ಸಾಧಕರ, ದಾರ್ಶನಿಕರ ಜಯಂತಿಯನ್ನು ಪ್ರೀತಿ, ಗೌರವಗಳಿಂದ ಆಚರಿಸುವಂತಾಗಬೇಕು ಎಂದರು.

ಸತ್ಯಹರಿಶ್ಚಂದ್ರ ಸತ್ಯ ಪಾಲನೆಗಾಗಿ ರಾಜ್ಯ ತೊರೆದು, ಹೆಂಡತಿ, ಮಗನನ್ನು ಮಾರಾಟ ಮಾಡಿದ. ತಾನೂ ಸಹ ಸ್ಮಶಾನ ಕಾಯುವ ಸ್ಥಿತಿ ತಂದುಕೊಂಡ. ಆದರೂ ಸತ್ಯ ಬಿಡಲಿಲ್ಲ. ಇದೇ ರೀತಿ ಎಲ್ಲರೂ ಜೀವನದಲ್ಲಿ ಏನೇ ಕಷ್ಟ ಬಂದರೂ ಸತ್ಯದಿಂದಲೇ ಹೋರಾಟ ಮಾಡಬೇಕು. ಹರಿಶ್ವಚಂದ್ರರ ಆದರ್ಶಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರವೇ ಜನರಿಗೆ ಎಲ್ಲಾ ಭಾಗ್ಯ ನೀಡುತ್ತಿರುವುದರಿಂದ ಇದೀಗ ಜನರು ದುಡಿಯುವುದು ಭಾಗ್ಯ ಎಂಬುದನ್ನೇ ಮರೆತಿದ್ದಾರೆ. ಜನ, ಸರ್ಕಾರ ಎರಡೂ ಬದಲಾಗಬೇಕಿದೆ. ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂಬುದನ್ನು ಅರಿತು ಬದಕುಬೇಕು ಎಂದು ಅವರು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಎಲ್ಲಾ ಜಾತಿ, ಜನಾಂಗದ ಮಹಾನ್‌ ಪುರುಷರ ಜಯಂತಿ ಆಚರಣೆ ಮಾಡುತ್ತಾ ಹೋದರೆ ವರ್ಷದ 365 ದಿನಗಳು ಬೇಕಾಗುತ್ತದೆ. ಈಗಾಗಲೇ 150ರಿಂದ 160 ಜಯಂತಿ ಆಚರಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಜಯಂತಿ ಆಚರಣೆಗೆ ರಜೆ ನೀಡುವುದನ್ನು ನಿಲ್ಲಿಸಬೇಕಿದೆ ಎಂದರು. 

Advertisement

ಮೇಯರ್‌ ಅನಿತಾಬಾಯಿ, ಕಾಂಗ್ರೆಸ್‌ ಮುಖಂಡ ಎನ್‌.ಜಿ. ಪುಟ್ಟಸ್ವಾಮಿ, ಸತ್ಯಹರಿಶ್ಚಂದ್ರ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ, ಎಸ್‌.ಪಿ. ದುಗ್ಗಪ್ಪ, ಪಾಲಿಕೆ ಸದಸ್ಯರಾದ ದಿನೇಶ್‌ ಕೆ. ಶೆಟ್ಟಿ, ಎಂ. ಹಾಲೇಶ್‌ ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next