Advertisement
ಸಮುಚ್ಚಯವನ್ನು ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಎಂಡಿ ಮತ್ತು ಸಿಇಒ ಮಹಾಬಲೇಶ್ವರ, ಮೆನ್ಸ್‌ವೇರ್ ಅನ್ನು ಶಾಸಕ ಯಶ್‌ಪಾಲ್ ಎ. ಸುವರ್ಣ, ಹ್ಯಾಂಡ್‌ಲೂಮ್ ಅನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್, ಸಾರೀ ಮತ್ತು ಸಿಲ್ಕ್ ವಿಭಾಗವನ್ನು ಶ್ಯಾಮಿಲಿ ಅಂಬಲಪಾಡಿ, ಗರ್ಲ್ಸ್ ಕಿಡ್ಸ್ ವಿಭಾಗವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಟಾಪ್ಸ್ ವಿಭಾಗವನ್ನು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಬಾಯ್ಸ ಕಿಡ್ಸ್ ವಿಭಾಗವನ್ನು ಉದ್ಯಾವರ ಹಲೀಮಾ ಸಬುj ಆಡಿಟೋರಿಯಂನ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಗಾಗ್ರಾ ವಿಭಾಗವನ್ನು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ವನಿತಾ ಜಿ. ಪೈ ಉದ್ಘಾಟಿಸುವರು.
Related Articles
Advertisement
ಫ್ಯಾಮಿಲಿ ಸ್ಟುಡಿಯೋಮದುವೆ, ಶುಭ ಸಮಾರಂಭಗಳಿಗೆ ಕುಟುಂಬ ಸಮೇತರಾಗಿ ಬಟ್ಟೆ ಖರೀದಿಗೆ ಬರುವ ಗ್ರಾಹಕರ ಬೇಡಿಕೆಗೆ ಕ್ಷಣಾರ್ಧದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಎನ್ನುವಂತೆ ಪ್ರತ್ಯೇಕವಾಗಿರುವ 6 ಫ್ಯಾಮಿಲಿ ಸ್ಟುಡಿಯೋ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಹಕರು ತಮ್ಮ ಮನಸ್ಸಿಗೆ ಇಷ್ಟವಾಗುವ ಉಡುಪುಗಳ ನಾನಾ ಶ್ರೇಣಿಗಳನ್ನು ವೀಕ್ಷಿಸಿ ಖರೀದಿಸಬಹುದು. ಸೀರೆಗಳ ಬೃಹತ್ ಸಂಗ್ರಹ
ಮಹಿಳೆಯರಿಗೆ ಮನಮೋಹಕವಾಗಿರುವ ಕಾಂಚಿಪುರಂ, ಧರ್ಮಾವರಂ, ಮೈಸೂರು ಸಿಲ್ಕ್ಸ್, ಪ್ರಿಂಟೆಡ್ ಸಿಲ್ಕ್ಸ್, ಕಾಟನ್ ಸಿಲ್ಕ್ಸ್, ಬೆಂಗಾಲಿ ಕಾಟನ್ ಸಹಿತ ರಾಷ್ಟ್ರದ ವಿವಿಧೆಡೆಗಳಲ್ಲಿ ತಯಾರಾಗುವ ಸೀರೆಗಳ ಬೃಹತ್ ಸಂಗ್ರಹವಿದೆ. ಮಹಿಳೆಯರ ಕುರ್ತಾ, ಬಾಟಂಗಳಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಇದೆ. ಆ. 25ರಿಂದ ಸೇವೆ ಲಭ್ಯ
1969ರಂದು ಪ್ರಾರಂಭಗೊಂಡ ಸಂಸ್ಥೆ 54 ವರ್ಷಗಳಿಂದ ರಾಜ್ಯಾದ್ಯಂತದ ಲಕ್ಷೋಪಲಕ್ಷ ಸಂತೃಪ್ತ ಗ್ರಾಹಕರನ್ನು ಹೊಂದಿದ ಹೆಮ್ಮೆಗೆ ಪಾತ್ರವಾಗಿದೆ. ಆ.25ರಿಂದ ಜಯಲಕ್ಷ್ಮೀ ಸಿಲ್ಕ್ಸ್ ಉಡುಪಿಯ ಬನ್ನಂಜೆಯಲ್ಲಿ ಗ್ರಾಹಕರ ಸೇವೆಗೆ ಲಭ್ಯವಿರಲಿದೆ ಎಂದು ಮಳಿಗೆಯ ಪ್ರಕಟನೆ ತಿಳಿಸಿದೆ. ಒಂದೇ ಸೂರಿನಡಿ ಎಲ್ಲವೂ ಲಭ್ಯ
7 ಅಂತಸ್ತುಗಳ 1 ಲಕ್ಷ 10 ಸಾವಿರ ಚ.ಅಡಿ ವಿಸ್ತೀರ್ಣದ ವಿಶಾಲ ಮಳಿಗೆಯ ನೆಲ ಅಂತಸ್ತಿನಲ್ಲಿ ಆರ್ಟ್ ಫ್ಯಾಶನ್ಸ್ ಜುವೆಲರಿ, ಬ್ರ್ಯಾಂಡೆಡ್ ವಾಚ್‌ಗಳು, ಹ್ಯಾಂಡ್‌ಲೂಮ್ ಸೆಕ್ಷನ್ ಹಾಗೂ ಪುರುಷ-ಮಹಿಳೆಯರ ಇನ್ನರ್ ಗಾರ್ಮೆಂಟ್ಸ್ ವಿಭಾಗ, ಪ್ರಥಮ ಅಂತಸ್ತಿನಲ್ಲಿ ಎಲ್ಲ ಶ್ರೇಣಿಯ ಸೀರೆಗಳು, ಫ್ಯಾಶನೇಬಲ್ ಲೆಹೆಂಗಾ, ಗಾಗ್ರಾ ವಿಭಾಗ, ದ್ವಿತೀಯ ಅಂತಸ್ತಿನಲ್ಲಿ ಮದುವೆ ರೇಷ್ಮೆ ಸೀರೆಗಳ ಸಂಗ್ರಹ, ತೃತೀಯ ಅಂತಸ್ತಿನಲ್ಲಿ ಲೈಫ್ಸ್ಟೈಲ್, ಮಹಿಳೆಯರ ರೆಡಿಮೇಡ್ ವಿಭಾಗ, 4ನೇ ಅಂತಸ್ತಿನಲ್ಲಿ ಗಂಡು- ಹೆಣ್ಣು ಮಕ್ಕಳಿಗೆ ಬೇಕಾದ ಎಲ್ಲ ವಿಧದ ಉಡುಗೆ-ತೊಡುಗೆಗಳ ವಿಭಾಗ, 5ನೇ ಅಂತಸ್ತಿನಲ್ಲಿ ಬ್ರ್ಯಾಂಡೆಡ್ ಮೆನ್ಸ್‌ವೇರ್, ಮೆನ್ಸ್ ಎತ್ನಿಕ್‌ವೆàರ್, ಶರ್ಟಿಂಗ್/ಸೂಟಿಂಗ್ ವಿಭಾಗವಿರಲಿದೆ. ಒಂದೇ ಸೂರಿನಡಿ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲ ವಯೋಮಾನದವರಿಗೆ ಬೇಕಾಗುವ ಬಟ್ಟೆ-ಬರೆ ಗಳ ಅಪಾರ ಸಂಗ್ರಹವಿರ ಲಿದೆ. ಕಾರ್ ಪಾರ್ಕಿಂಗ್ ಮತ್ತು ವ್ಯಾಲೆಟ್ ಕಾರ್ ಪಾರ್ಕಿಂಗ್ (200 ಕಾರು) ಸೌಲಭ್ಯವಿದೆ. 700 ಮಂದಿ ಸಿಬಂದಿ ಗ್ರಾಹಕರ ಸೇವೆಗೆ ಲಭ್ಯವಿರಲಿದ್ದಾರೆ.