Advertisement

ಜಯಲಲಿತಾ ಎಸ್ಟೇಟ್‌ನಲ್ಲಿ ಮತ್ತೊಂದು ನಿಗೂಢ ಸಾವು,ಈಗ ಅಕೌಂಟೆಂಟ್‌ 

11:29 AM Jul 04, 2017 | Team Udayavani |

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನಾನಂತ ಅವರ ಆಸ್ತಿ ವಿಚಾರಕ್ಕಾಗಿ ಕಲಹ ಮುಂದುವರಿದಿರುವ ವೇಳೆಯಲ್ಲೇ ಅವರ ಕೋಡ್ನಾಡು ಎಸ್ಟೇಟ್‌ನ ಅಕೌಂಟೆಂಟ್‌ ಒಬ್ಬ ಮಂಗಳವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ. 

Advertisement

28 ರ ಹರೆಯದ ದಿನೇಶ್‌ಕುಮಾರ್‌ ಕೊತಗಿರಿಯ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. 

ಇದು ಕೋಡ್ನಾಡು ಎಸ್ಟೇಟ್‌ನಲ್ಲಿ ನಡೆದ 2 ನೇ ನಿಗೂಢ ಸಾವಾಗಿದೆ. ಎಪ್ರಿಲ್‌ 24 ರಂದು ಎಸ್ಟೇಟ್‌ನ ಕಾವಲುಗಾರನನ್ನು ಗ್ಯಾಂಗ್‌ವೊಂದು ಬರ್ಬರವಾಗಿ ಹತ್ಯೆಗೈದಿತ್ತು.

2 ದಿನಗಳಹಿಂದೆ ಎಸ್ಟೇಟ್‌ನಲ್ಲಿ ತಮ್ಮ ಉದ್ಯೋಗ ಮತ್ತು ಭವಿಷ್ಯದ ಕುರಿತು ಸಹೊದ್ಯೋಗಿಗಳೊಂದಿಗೆ  ಸಾವನ್ನಪ್ಪಿರುವ ದಿನೇಶ್‌ ಕುಮಾರ್‌  ಚರ್ಚೆ ನಡೆಸಿದ್ದರು ಎಂದು ವರದಿಯಾಗಿದೆ. ಸಾವಿನ ಹಿಂದೆ ಕೌಟುಂಬಿಕ ಕಾರಣವೂ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next